ಸಾರಾಂಶ
ಮಕ್ಕಳು ವೈದ್ಯರು, ಎಂಜಿನಿಯರ್ ಆಗುವ ಆಸೆಯ ಜತೆಗೆ ದೇಶದ ತಂತ್ರಜ್ಞಾನ ಬೆಳೆಸುವ ವಿಜ್ಞಾನಿಗಳು ಸಮಾಜ ತಿದ್ದುವ ಶಿಕ್ಷಕರಾಗಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಎನ್. ದೀಪ ಮಕ್ಕಳಿಗೆ ತಿಳಿಸಿದರು.ಶಿಕ್ಷಣ ಸಂಯೋಜಕ ಲೋಕೇಶ್ ಮಾತನಾಡಿ, ವಿಜ್ಞಾನದ ಮೂಲಕ ಪ್ರತಿಭೆಗಳು ಹೊರಹೊಮ್ಮಬೇಕು. ಆದ್ದರಿಂದ ಶಿಕ್ಷಕರು ಪ್ರತಿಭಾವಂತ ಮಕ್ಕಳಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು ಎಂದರು. ವಿಜ್ಞಾನದ ಆವಿಷ್ಕಾರಗಳನ್ನ ಅರಿತು ಪ್ರಯೋಗಗಳನ್ನು ಮಾಡಬೇಕು. ಪ್ರವಾಸಗಳು ವೈಜ್ಞಾನಿಕ ಚಿಂತನೆಯಡಿ ನಡೆದು, ತಂತ್ರಜ್ಞಾನ, ವಿಜ್ಞಾನದ ಆವಿಷ್ಕಾರಗಳನ್ನು ತಿಳಿಸುವ ಪ್ರವಾಸವಾಗಬೇಕು ಎಂದರು.
ಚನ್ನರಾಯಪಟ್ಟಣ: ಮಕ್ಕಳು ವೈದ್ಯರು, ಎಂಜಿನಿಯರ್ ಆಗುವ ಆಸೆಯ ಜತೆಗೆ ದೇಶದ ತಂತ್ರಜ್ಞಾನ ಬೆಳೆಸುವ ವಿಜ್ಞಾನಿಗಳು ಸಮಾಜ ತಿದ್ದುವ ಶಿಕ್ಷಕರಾಗಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಎನ್. ದೀಪ ಮಕ್ಕಳಿಗೆ ತಿಳಿಸಿದರು.
ಅವರು ಪಟ್ಟಣದ ವಾಸವಿ ವಿದ್ಯಾಶಾಲೆಯಲ್ಲಿ ಪ್ರಾಥಮಿಕ ಶಾಲೆಯ ಮಕ್ಕಳು ಸಿದ್ಧಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ವಿಜ್ಞಾನ ಎಂದರೆ ಕುತೂಹಲ ಕೆರಳಿಸುವುದಾಗಿದೆ. ವಿಜ್ಞಾನದ ಆವಿಷ್ಕಾರಗಳನ್ನ ಅರಿತು ಪ್ರಯೋಗಗಳನ್ನು ಮಾಡಬೇಕು. ಪ್ರವಾಸಗಳು ವೈಜ್ಞಾನಿಕ ಚಿಂತನೆಯಡಿ ನಡೆದು, ತಂತ್ರಜ್ಞಾನ, ವಿಜ್ಞಾನದ ಆವಿಷ್ಕಾರಗಳನ್ನು ತಿಳಿಸುವ ಪ್ರವಾಸವಾಗಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಕಾರ್ಯ ನಿರ್ವಹಿಸಬೇಕು ಎಂದರು. ಶಿಕ್ಷಣ ಸಂಯೋಜಕ ಲೋಕೇಶ್ ಮಾತನಾಡಿ, ವಿಜ್ಞಾನದ ಮೂಲಕ ಪ್ರತಿಭೆಗಳು ಹೊರಹೊಮ್ಮಬೇಕು. ಆದ್ದರಿಂದ ಶಿಕ್ಷಕರು ಪ್ರತಿಭಾವಂತ ಮಕ್ಕಳಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು ಎಂದರು.ವಿದ್ಯಾಸಂಸ್ಥೆಯ ಅಧ್ಯಕ್ಷ ಸಿ ಎಸ್ ಆದಿಶೇಷ ಕುಮಾರ್, ಶಿಕ್ಷಣ ಶಿಕ್ಷಣ ಇಲಾಖೆ ಅಧಿಕಾರಿ ಲಿಂಗರಾಜು, ಮುಖ್ಯ ಶಿಕ್ಷಕ ರಮೇಶ್ ಗೌಡ, ಶಿಕ್ಷಕಿ ರೂಪ, ರೂಪಶ್ರೀ ಪೋಷಕ ಅಜಮಲ್ ಇದ್ದರು. ಮಕ್ಕಳು ಸಿದ್ಧಪಡಿಸಿದ್ದ ವಿಜ್ಞಾನದ ವಸ್ತು ಪ್ರದರ್ಶನ ಎಲ್ಲರ ಗಮನ ಸೆಳೆಯಿತು.