ಮಕ್ಕಳ ಕಲಿಕೆ ಆಸಕ್ತಿಯನ್ನು ಹೆಚ್ಚಿಸಲು ಅವರಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರ ತರುವ ನಿಟ್ಟಿನಲ್ಲಿ ಈ ಕಲಿಕಾ ಹಬ್ಬ ಸಹಕಾರಿಯಾಗುತ್ತದೆ ಎಂದು ಎಸ್ ಡಿ ಎಂ ಸಿ ಅಧ್ಯಕ್ಷ ಮುಕುಂದಪ್ಪ ತಿಳಿಸಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ಮಕ್ಕಳ ಕಲಿಕೆ ಆಸಕ್ತಿಯನ್ನು ಹೆಚ್ಚಿಸಲು ಅವರಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರ ತರುವ ನಿಟ್ಟಿನಲ್ಲಿ ಈ ಕಲಿಕಾ ಹಬ್ಬ ಸಹಕಾರಿಯಾಗುತ್ತದೆ ಎಂದು ಎಸ್ ಡಿ ಎಂ ಸಿ ಅಧ್ಯಕ್ಷ ಮುಕುಂದಪ್ಪ ತಿಳಿಸಿದರು. ಗುಬ್ಬಿ ತಾಲೂಕಿನ ಬೊಡ ತಿಮ್ಮನಹಳ್ಳಿ ಯಲ್ಲಿ ಹಮ್ಮಿಕೊಂಡಿದ್ದ ಕಲಿಕಾ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳಿಗೆ ಕಲಿಕೆಯ ಹಬ್ಬ ಒಂದು ವಿನೋತನ ಶೈಕ್ಷಣಿಕ ಕಾರ್ಯಕ್ರಮವಾಗಿದ್ದು ಮಕ್ಕಳನ್ನು ಸಂತೋಷದಾಯಕ ಚಟುವಟಿಕೆಗಳ ಮೂಲಕ ಮಕ್ಕಳ ಕಲಿಕೆಗೆ ಪ್ರೇರೇಪಿಸುತ್ತದೆ. ಪೋಷಕರು ತಮ್ಮ ಮಕ್ಕಳ ಬಗ್ಗೆ ಗಮನಹರಿಸಬೇಕು ಪ್ರತಿ ತಿಂಗಳಿಗೊಮ್ಮೆ ಶಾಲೆಗೆ ಭೇಟಿಕೊಟ್ಟು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ತಿಳಿದುಕೊಂಡು ಶಿಕ್ಷಣಕ್ಕೆ ಹೆಚ್ಚು ಆದ್ಯತೆಯನ್ನು ಕೊಡಬೇಕು ಎಂದು ತಿಳಿಸಿದರು. ಶಿಕ್ಷಕ ಗಿರೀಶ್ ಮಾತನಾಡಿ ಕಲಿಕಾ ಹಬ್ಬ ಮಕ್ಕಳಿಗೆ ಉತ್ತಮ ವೇದಿಕೆಯಾಗಿದೆ ಇಡೀ ಜಗತ್ತಿನಲ್ಲಿ ಶಿಕ್ಷಣಕ್ಕೆ ಮೊದಲ ಆದ್ಯತೆ ಇದ್ದು ಶಾಲಾ ಮಕ್ಕಳು ಪ್ರಾಥಮಿಕ ಹಂತದಲ್ಲಿ ಶಿಕ್ಷಣಕ್ಕೆ ಹೆಚ್ಚು ಮಹತ್ವವನ್ನು ಕೊಟ್ಟು ಸಮಾಜದಲ್ಲಿ ಒಳ್ಳೆಯ ಗೌರವವನ್ನು ಕಾಪಾಡಬೇಕು ಎಂದರು. ಇದೇ ಸಂಧರ್ಭದಲ್ಲಿ ಕಲಿಕಾ ಹಬ್ಬದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಸುಮಾರು ಐದು ಶಾಲೆಯ ಮಕ್ಕಳು ಕಲಿಕಶ ಹಬ್ಬದಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾರ ಉಮೇಶ್ , ರಾಮಚಂದ್ರಪ್ಪ ಸಿ ಆರ್ ಪಿ ಮಂಜುನಾಥ್ , ಶಿಕ್ಷಕರಾದ ರಂಗಪ್ಪ, ಗಿರೀಶ್, ಕಂಬದನರಸಿಂಹಯ್ಯ, ದಿಗ್ವಿಜಯ, ಮಂಜಣ್ಣ , ಎಸ್ ಡಿಎಂಸಿ ಸದಸ್ಯರಾದ ರಾಮಚಂದ್ರಯ್ಯ , ಲಕ್ಷ್ಮಣ್, ಉಮೇಶ್, ದೇವಮ್ಮ , ಗ್ರಾಮಸ್ಥರು ಭಾಗವಹಿಸಿದ್ದರು.