31ಕ್ಕೆ ನಾರ್ವೆಯಲ್ಲಿ ತಾಲೂಕು ದಸರಾ ಕ್ರೀಡಾಕೂಟ

| Published : Aug 29 2025, 01:00 AM IST

ಸಾರಾಂಶ

ಕೊಪ್ಪತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಆ.31ರ ಭಾನುವಾರ ಬೆಳಿಗ್ಗೆ 9 ರಿಂದ ನಾರ್ವೆ ಶ್ರೀ ಸ್ವಯಂಪ್ರಕಾಶ ಸರಸ್ವತಿ ವಿದ್ಯಾ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಆಯೋಜಕ ಓಣಿತೋಟ ರತ್ನಕರ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಪ್ಪ

ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಆ.31ರ ಭಾನುವಾರ ಬೆಳಿಗ್ಗೆ 9 ರಿಂದ ನಾರ್ವೆ ಶ್ರೀ ಸ್ವಯಂಪ್ರಕಾಶ ಸರಸ್ವತಿ ವಿದ್ಯಾ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಆಯೋಜಕ ಓಣಿತೋಟ ರತ್ನಕರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ ಜಿಲ್ಲಾಡಳಿತ ಚಿಕ್ಕಮಗಳೂರು, ಜಿಪಂ ಚಿಕ್ಕಮಗಳೂರು, ತಾಪಂ ಕೊಪ್ಪ, ನರಸೀಪುರ ಗ್ರಾಪಂ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಚಿಕ್ಕಮಗಳೂರು, ಶ್ರೀ ಸ್ವಯಂಪ್ರಕಾಶ ಸರಸ್ವತಿ ವಿದ್ಯಾ ಸಂಸ್ಥೆ ನಾರ್ವೆ, ಅಪ್ತಶ್ರೀ ಯುವಕ ಸಂಘ ನಾರ್ವೆ ಇವರ ಸಂಯುಕ್ತ ಆಶ್ರಯದಲ್ಲಿ ಕೊಪ್ಪ ಕಾರ್ಯಕ್ರಮ ನಡೆಯಲಿದ್ದು ಶಾಸಕ ಟಿ.ಡಿ. ರಾಜೇಗೌಡರ ಅಧ್ಯಕ್ಷತೆ, ಸಂಸದರು, ಎಂ.ಎಲ್.ಸಿ. ಮತ್ತು ನಿಗಮ ಮಂಡಳಿ ಅಧ್ಯಕ್ಷರು, ಸ್ಥಳೀಯ ಜನಪ್ರತಿನಿಧಿಗಳು, ಇಲಾಖಾಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಸ್ಪರ್ಧೆಗಳ ವಿವರ, ನಿಯಮಗಳ ಮಾಹಿತಿ ನೀಡಿದರು.

ಆಟೋಟ ಸ್ಪರ್ಧೆಗಳು: ಪುರುಷರಿಗೆ 100 ಮೀ, 200 ಮೀ, 400 ಮೀ, 800 ಮೀ, 1,500 ಮೀ, ,5000 ಮೀ, 10,000 ಮೀ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವಲಿನ್ ಎಸೆತ, ಡಿಸ್ಕಸ್ ಎಸೆತ, 110 ಮೀ. ಹರ್ಡಲ್ಸ್ 4 X 100 ರಿಲೇ 4 X 400 ರಿಲೇ ವಾಲಿಬಾಲ್, ಕಬಡ್ಡಿ, ಖೋಖೋ, ಪ್ರೋಬಾಲ್, ಬಾಲ್ ಬ್ಯಾಡ್ಮಿಂಟನ್, ಷಟಲ್ ಬ್ಯಾಡ್ಮಿಂಟನ್, ಯೋಗ.ಮಹಿಳೆಯರಿಗೆ : 100 ಮೀ 200 ಮೀ, 400 ಮೀ 800 ಮೀ., 1,500 ಮೀ., 3,000ಮೀ., ಉದ್ದಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವಲಿನ್ ಎಸೆತ, ಡಿಸ್ಕಸ್ ಎಸೆತ, 100ಮೀ. ಹರ್ಡಲ್ಸ್ 4 X 100 ಮೀ. ರಿಲೇ, 4 X 400 ಮೀ. ರಿಲೇ, ವಾಲಿಬಾಲ್, ಕಬಡ್ಡಿ, ಖೋಖೋ, ಥೋಬಾಲ್, ಬಾಲ್ ಬ್ಯಾಡ್ಮಿಂಟನ್, ಷಟಲ್ ಬ್ಯಾಡ್ಮಿಂಟನ್, ಯೋಗ ಇರುತ್ತದೆ. ನಿಯಮಗಳು: ಸ್ಪರ್ಧೆಗಳು ಬೆಳಿಗ್ಗೆ 9.00 ಗಂಟೆಗೆ ಆರಂಭ ಆಗುವುದರಿಂದ ಸ್ಪರ್ಧಿಗಳು 9.00 ಗಂಟೆಗೆ ಕಡ್ಡಾಯವಾಗಿ ಹಾಜರಿರತಕ್ಕದ್ದು. ಸ್ಪರ್ಧಿಗಳಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಇರುತ್ತದೆ. ಸ್ಪರ್ಧಿಗಳು ಕೊಪ್ಪ ತಾಲೂಕಿನ ವ್ಯಾಪ್ತಿಗೆ ಒಳಪಟ್ಟವರಾಗಿರಬೇಕು. ಬೇರೆ ತಾಲೂಕಿನವರಿಗೆ ಅವಕಾಶವಿಲ್ಲ. ಆಯೋಜಕರ ತೀರ್ಮಾನವೇ ಅಂತಿನ. ಸ್ಪರ್ಧಿಗಳಿಗೆ ವಯೋಮಿತಿ ಇರುವುದಿಲ್ಲ. ವಿಜೇತ ಪ್ರಮಾಣ ಪತ್ರ ಮತ್ತು ಮೆಡಲ್‌ಗಳನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಆಯೋಜಕರಾದ ಓಣಿತೋಟ ರತ್ನಕರ್, ನಾರ್ವೆಅಶೋಕ್, ಚಿಂತನ್ ಬೆಳಗೊಳ, ಶ್ರೀನಿವಾಸ್ ಕೊಡ್ರು, ಅನಿಲ್ ಕುಮಾರ್ ನಾರ್ವೆ ಮುಂತಾದವರು ಸುದ್ದಿಗೋಷ್ಟಿಯಲ್ಲಿದ್ದರು.