ಸಾರಾಂಶ
ಪ್ರತಿ ತಿಂಗಳು 9 ಮತ್ತು 24 ರಂದು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ, ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಉಚಿತವಾಗಿ ಈ ಕಾಯಕ್ರಮವು ನಡೆಯುತ್ತದೆ,
ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ
ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಧಾನಮಂತ್ರಿ ಸುರಕ್ಷಿತಾ ಮಾತೃತ್ವ ಅಭಿಯಾನ ನಡೆಯಿತು.ತಾಲೂಕು ಆರೋಗ್ಯಾಧಿಕಾರಿ ಡಾ.ಟಿ. ರವಿಕುಮಾರ್ ಆಸ್ಪತ್ರೆಗೆ ಭೇಟಿ ನೀಡಿಅಭಿಯಾನ ಪರಿಶೀಲಿಸಿ ಮಾತನಾಡಿ, ಪ್ರತಿ ತಿಂಗಳು 9 ಮತ್ತು 24 ರಂದು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ, ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಉಚಿತವಾಗಿ ಈ ಕಾಯಕ್ರಮವು ನಡೆಯುತ್ತದೆ, ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಲ್ಲ ಗರ್ಭಿಣಿಯರನ್ನು ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರು ವೈದ್ಯಕೀಯ ತಪಾಸಣೆ ಮಾಡಿಸಿ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಿಂದ ಪರೀಕ್ಷಿಸಿ, ಉಚಿತವಾಗಿ ರಕ್ತದ ಒತ್ತಡ, ಪರೀಕ್ಷೆ ಮಾಡಿಸುವುದು, ಗರ್ಭಿಣಿಯರಲ್ಲಿ ತೊಂದರೆಗಳು ಕಂಡು ಬಂದಲ್ಲಿ ಸೂಕ್ತ ಸಲಹೆ, ಚಿಕಿತ್ಸೆ ನೀಡಿಸಿ ಮೇಲ್ಮಟ್ಟದ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗುವುದು, ಪೌಷ್ಟಿಕ ಆಹಾರ ಸೇವನೆ, ಸುರಕ್ಷಿತ ಹೆರಿಗೆ, ಸುರಕ್ಷಿತ ತಾಯಿತನ, ಸುರಕ್ಷಿತ ಶಿಶು ಆರೈಕೆ ಬಗ್ಗೆ ಅರಿವು ಮೂಡಿಸುವಂತೆ ತಿಳಿಸಿದರು.
ಸಾರ್ವಜನಿಕ ಆಸ್ಪತ್ರೆ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ. ಪೂರ್ಣಿಮ ಮಾತನಾಡಿ, ಪ್ರಧಾನಮಂತ್ರಿ ಸುರಕ್ಷಿತಾ ಮಾತೃತ್ವ ಅಭಿಯಾನ ಕಾರ್ಯಕ್ರಮದ ಬಗ್ಗೆ ಮತ್ತು ಗರ್ಭಿಣಿ ಆರೈಕೆ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು.ಸಿಬ್ಬಂದಿಗಲಾದ ಅರಲಪ್ಪ, ರವಿರಾಜ್, ಅರ್ಚನಾ, ರಾಜು ಶಿವಕುಮಾರ್, ವಿದ್ಯಾ, ನಾಗಮ್ಮ, ರೀನಾ, ದೇವಿಂದ್ರಮ್ಮ, ,ಆಶಾ ಕಾರ್ಯಕರ್ತೆಯರು ಇದ್ದರು.