ಫೆ.17ಕ್ಕೆ ರಾಯಬಾಗ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

| Published : Feb 10 2024, 01:47 AM IST

ಫೆ.17ಕ್ಕೆ ರಾಯಬಾಗ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
Share this Article
  • FB
  • TW
  • Linkdin
  • Email

ಸಾರಾಂಶ

ರಾಯಬಾಗ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ತಾಲೂಕ ಆಡಳಿತಾಧಿಕಾರಿಗಳ ಪೂರ್ವಭಾವಿ ಸಭೆ

ಕನ್ನಡಪ್ರಭ ವಾರ್ತೆ ಪಾಲಬಾವಿ

ಹಂದಿಗುಂದ ಗ್ರಾಮದಲ್ಲಿ ಫೆ.17ರಂದು ನಡೆಯಲಿರುವ 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿಯೊಬ್ಬ ಕನ್ನಡಿಗರು ಸಜ್ಜಾಗಬೇಕು ಎಂದು ರಾಯಬಾಗ ತಾಲೂಕು ತಹಸೀಲ್ದಾರ ಸುರೇಶ ಮುಂಜೆ ಹೇಳಿದರು.

ಹಂದಿಗುಂದ ಗ್ರಾಮದ ಶ್ರೀ ಸಿದ್ದೇಶ್ವರ ವಿರಕ್ತಮಠದ ಸಭಾಭವನದಲ್ಲಿ ಜರುಗಿದ ರಾಯಬಾಗ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ತಾಲೂಕ ಆಡಳಿತಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ನ್ನುದ್ದೇಶಿಸಿ ಮಾತನಾಡಿದರು.

ಈ ವೇಳೆ ಹಂದಿಗುಂದ- ಆಡಿ ವಿರಕ್ತಮಠದ ಶಿವಾನಂದ ಸ್ವಾಮಿಗಳು, ದೈಹಿಕ ಶಿಕ್ಷಣ ಪರಿವೀಕ್ಷಕ ಮಹಾವೀರ ಜೀರಗ್ಯಾಳ, ಸಾಹಿತಿ ಟಿ.ಎಸ್.ವಂಟಗೂಡಿ, ಜಿ.ಪಂ ಮಾಜಿ ಸದಸ್ಯ ರಾಮನಗೌಡ ಪಾಟೀಲ, ಕಸಾಪ ಪದಾಧಿಕಾರಿ ಉದ್ಯಮಿ ಸಂತೋಷ ಸನದಿ, ಸಿಡಿಪಿಒ ಸಂತೋಷ ಕುಮಾರ ಕಾಂಬಳೆ, ಪಿಡಬ್ಲ್ಯೂಡಿ ಕೆ.ಎನ್.ಹಂಚಿನಮನಿ, ಎಸ್.ಬಿ.ಮಲಾಜ, ಕಿರಣ ಚಂದರಿ, ಡಿ.ಎನ್.ಹಳ್ಳಿ, ಸಿದ್ದೇಶ್ವರ ಕನ್ನಡ ಪ್ರೌಢಶಾಲೆ ಮುಖ್ಯೋಪಾಧ್ಯಾಯ ವಿ.ಪಿ.ಮಠ, ಜಿ.ಕೆ.ಭದ್ರಶೆಟ್ಟಿ, ಗಿರಮಲ್ಲಪ್ಪ ಅಂದಾನಿ, ಮಹಾಲಕ್ಷ್ಮಿ ಬ್ಯಾಂಕಿನ ಅಧ್ಯಕ್ಷ ಶಿವಲಿಂಗಪ್ಪ ವಾಲಿ, ಉದ್ಯಮಿ ಷಣ್ಮುಖ ತೇರದಾಳ, ಮಹೇಶ ಸಬರದ, ಶ್ರೀಶೈಲ ಬಡಿಗೇರ, ನ್ಯಾಯವಾದಿ ಸುರೇಶ ಹೊಸಪೇಟಿ, ಶಿಕ್ಷಕ ಸಿದ್ದು ಹಿರೇಮಠ, ಶಿಕ್ಷಕ ನಾರಾಯಣ ಜಾಧವ, ಕೃಷಿ, ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಇದ್ದರು. ತಾಲೂಕ ಕಸಾಪ ಅಧ್ಯಕ್ಷ ರವೀಂದ್ರ ಪಾಟೀಲ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಶಂಕರ ಕ್ಯಾಸ್ತಿ ನಿರೂಪಿಸಿದರು. ಶಿಕ್ಷಕ ಟಿ.ಜಿ.ದಾಸಪ್ಪನವರ ವಂದಿಸಿದರು.