ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘದ ವತಿಯಿಂದ ಪಟ್ಟಣದ ಸೆಸ್ಕ್ ಕಚೇರಿಯ ಮುಂಭಾಗ ಪ್ರತಿಭಟಿಸಿದರು.ರೈತ ಸಂಘದ ತಾಲೂಕು ಅಧ್ಯಕ್ಷ ಪಳನಿಸ್ವಾಮಿ ಮಾತನಾಡಿ, ರೈತರ ಜಮೀನುಗಳಲ್ಲಿರುವ ಪಂಪ್ ಸೆಟ್ ಗೆ ಸಮರ್ಪಕವಾಗಿ ನಿಗದಿತ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಬೇಕು, ಜೋತು ಬಿದ್ದಿರುವ ತಂತಿಗಳನ್ನು ಸರಿಪಡಿಸಬೇಕು, ರೈತರ ಅವಶ್ಯಕತೆಗೆ ತಕ್ಕಂತೆ ಟ್ರಾನ್ಸ್‌ಫಾರ್ಮರ್ ಅಳವಡಿಸಿಕೊಡಬೇಕು, ತ್ವರಿತಗತಿಯಲ್ಲಿ ಈಗಾಗಲೇ ಸೋಲಾರ್ ಪಂಪ್ಸೆಟ್ ಹಣ ಪಾವತಿ ಮಾಡಿರುವ ರೈತರಿಗೆ ಸಂಪರ್ಕ ಕಲ್ಪಿಸಿಕೊಡಬೇಕು, ಡೆಪಾಸಿಟ್ ಮಾಡಲು ರೈತರಿಗೆ ಅವಕಾಶ ಕಲ್ಪಿಸಿಕೊಡಬೇಕು, ಆರ್.ಟಿ.ಸಿ. ದಾರರ ತಂದೆಯ ಹೆಸರಿನಲ್ಲಿ ಇದ್ದರೆ ಆ ಕುಟುಂಬದಿಂದ ಅಫಿಡವಿಟ್ತೆಗೆದುಕೊಂಡು ಡೆಪಾಸಿಟ್ ಕಟ್ಟಿಸಿಕೊಂಡು ಸರ್ವಿಸ್ ನೀಡಬೇಕು, ಕಂಭಗಳನ್ನು ಹೊಸದಾಗಿ ಗ್ರಾಮಗಳಲ್ಲಿ ಅಳವಡಿಸುತ್ತಿದ್ದು, ಕೆಲವು ಕಡೆ ಹಳೆಯ ಕಂಭಗಳನ್ನು ಬದಲಿಸುತ್ತಿದ್ದು, ಅವನ್ನು ಬಳಸಬಾರದು ಎಂದು ಒತ್ತಾಯಿಸಿದರು.ಸುಮಾರು 40ಕ್ಕೂ ಹೆಚ್ಚು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಸೆಸ್ಕ್ ವಿಭಾಗದ ಎಇಇ ಚಂದುಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸೆಸ್ಕ್ ಕಚೇರಿ ಮುಂದೆ ರೈತರ ಸಂಘದಿಂದ ಪ್ರತಿಭಟನೆ
ರೈತರ ಜಮೀನುಗಳಲ್ಲಿರುವ ಪಂಪ್ ಸೆಟ್ ಗೆ ಸಮರ್ಪಕವಾಗಿ ನಿಗದಿತ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಬೇಕು,
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.