ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸುಪ್ರೀಂಕೋರ್ಟ್ ಆದೇಶದನ್ವಯ ಒಳ ಮೀಸಲು ಜಾರಿಗಾಗಿ ಶಾಸಕರು ಸದನದಲ್ಲಿ ಧ್ವನಿ ಎತ್ತಲು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಪರಿಶಿಷ್ಟ ಜಾತಿಗೆ ಜನಸಂಖ್ಯೆ ಆಧಾರದ ಮೇಲೆ ಒಳಮೀಸಲಾತಿಗೆ ಒತ್ತಾಯಿಸಿ ಕ್ಷೇತ್ರದ ಶಾಸಕರು ಸದನದಲ್ಲಿ ಸರ್ಕಾರವನ್ನು ಒತ್ತಾಯಿಸುವಂತೆ ನಗರ ಹೊರವಲಯದಲ್ಲಿ ಶಾಸಕ ಪ್ರದೀಪ್ ಈಶ್ವರ್ ಗೃಹ ಕಚೇರಿ ಮುಂದೆ ತಮಟೆ ಚಳವಳಿ ನಡೆಸಲಾಯಿತು.ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕ ಬಿ.ಎನ್.ಗಂಗಾಧರ್ ಮಾತನಾಡಿ, ಪ.ಜಾತಿಯಲ್ಲಿ 101 ಜಾತಿಗಳಿದ್ದು, ಅವುಗಳ ಜನಸಂಖ್ಯೆಯ ಆಧಾರದಲ್ಲಿ ಒಳಮೀಸಲಾತಿಯನ್ನು ಸರ್ಕಾರ ನೀಡಬೇಕೆಂಬ ಬೇಡಿಕೆ ಮುಂದಿಟ್ಟು 70 ವರ್ಷಗಳಿಂದ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ ಎಂದರು.
ರಾಜ್ಯಗಳಿಗೇ ಅಧಿಕಾರ:ಆದರೆ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗುವಂತೆ ತಿಳಿಸಿತ್ತು. ಸುಪ್ರೀಂ ಕೋಟ್ ಆಯಾ ರಾಜ್ಯಗಳೇ ಒಳಮೀಸಲಾತಿಯನ್ನು ಜಾರಿ ಮಾಡುವಂತೆ ಆದೇಶಿಸಿದೆ. ಆದರೂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಒಳಮೀಸಲು ಜಾರಿಗೆ ತರುವಲ್ಲಿ ಮೀನಮೇಷ ಎಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಶಾಸಕರ ಮನೆಗೆ ಯಾವುದೆ ಅವಘಡ ಸಂಭವಿಸದಂತೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ ಪೊಲೀಸರು ಕಣ್ಗಾವಲಿನಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಗೆ ಶಾಸಕರ ಮನೆಗೆ ತೆರಳಿದ್ದ ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಶಾಸಕರ ಮನೆಯಲ್ಲಿ ನೀಡಿದ ಫಲಹಾರ ಸೇವಿಸಿದರು. ಬಳಿಕ ಇದು ಕೇವಲ ಸಾಂಕೇತಿಕ ಹೋರಾಟವಷ್ಟೆ, ಶಾಸಕರ ವಿರುದ್ಧ ನಮಗೆ ಯಾವುದೆ ತಕರಾರಿಲ್ಲ ಎಂದರು.ಈ ಸಂಧರ್ಭದಲ್ಲಿ ಜಿಲ್ಲಾಧ್ಯಕ್ಷ ಮಂಜುತುಳಸಿ, ಮಂಚೇನಹಳ್ಳಿ ಶ್ರೀನಿವಾಸ್, ಮುನಿಕೃಷ್ಣಪ್ಪ, ಮುನಿರಾಜು ಮತ್ತಿತರರು ಇದ್ದರು.