ನ್ಯಾ.ನಾಗಮೋಹನದಾಸ್ ವರದಿ ಸರ್ಕಾರ ಸ್ವೀಕರಿಸದಂತೆ ತಮಟೆ ಚಳವಳಿ

| Published : Aug 15 2025, 01:00 AM IST

ನ್ಯಾ.ನಾಗಮೋಹನದಾಸ್ ವರದಿ ಸರ್ಕಾರ ಸ್ವೀಕರಿಸದಂತೆ ತಮಟೆ ಚಳವಳಿ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ಒಳಮೀಸಲಾತಿ ವರ್ಗೀಕರಣ ಬಗ್ಗೆ ನ್ಯಾ.ನಾಗಮೋಹನದಾಸ್ ನೇತೃತ್ವದಲ್ಲಿ ತಯಾರಿಸುವ ವರದಿ ಸಾಕಷ್ಟು ಲೋಪದೋಷವಿದೆ. ವರದಿಯಲ್ಲಿ ಬಲಗೈ ಸಮುದಾಯಕ್ಕೆ ಸಾಕಷ್ಟು ಅನ್ಯಾಯವಾಗಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ನ್ಯಾ.ನಾಗಮೋಹನದಾಸ್ ನೇತೃತ್ವದಲ್ಲಿ ನಡೆದಿರುವ ಒಳ ಮೀಸಲಾತಿ ವರ್ಗೀಕರಣವು ಅವೈಜ್ಞಾನಿಕ ಹಾಗೂ ದುರುದ್ದೇಶ ಪೂರಿತ. ಈ ವರದಿಯನ್ನು ಸರ್ಕಾರ ಸ್ವೀಕರಿಸಬಾರದು ಎಂದು ಒತ್ತಾಯಿಸಿ ಪರಿಶಿಷ್ಟ ಜಾತಿ ಬಲಗೈ ಜಾತಿಗಳ ಒಳ ಮೀಸಲಾತಿ ರಕ್ಷಣಾ ಸಮಿತಿ ಕಾರ್‍ಯಕರ್ತರು ಪಟ್ಟಣದಲ್ಲಿ ಬೃಹತ್ ತಮಟೆ ಚಳವಳಿ ನಡೆಸಿದರು.

ಪಟ್ಟಣದ ಐದು ದೀಪವೃತ್ತದಲ್ಲಿ ಜಮಾಹಿಸಿದ ಎಸ್‌ಸಿ ಬಲಗೈ ಜಾತಿಗಳ ಒಳ ಮೀಸಲಾತಿ ರಕ್ಷಣಾ ಸಮಿತಿ ಕಾರ್ಯಕರ್ತರು ಶ್ರೀರಂಗಪಟ್ಟಣ- ಜೇವರ್ಗಿ ಮುಖ್ಯರಸ್ತೆ ತಡೆದು ಮಾನವ ಸರಪಳಿ ನಿರ್ಮಿಸಿ ನ್ಯಾ.ನಾಗಮೋಹನ್‌ದಾಸ್ ವಿರುದ್ಧ ಘೋಷಣೆಕೂಗಿ ಆಕ್ರೋಶ ಹೊರಹಾಕಿದರು.

ಮುಖಂಡ ಕಣಿವೆ ರಾಮು ಮಾತನಾಡಿ, ಸರ್ಕಾರ ಒಳಮೀಸಲಾತಿ ವರ್ಗೀಕರಣ ಬಗ್ಗೆ ನ್ಯಾ.ನಾಗಮೋಹನದಾಸ್ ನೇತೃತ್ವದಲ್ಲಿ ತಯಾರಿಸುವ ವರದಿ ಸಾಕಷ್ಟು ಲೋಪದೋಷವಿದೆ. ವರದಿಯಲ್ಲಿ ಬಲಗೈ ಸಮುದಾಯಕ್ಕೆ ಸಾಕಷ್ಟು ಅನ್ಯಾಯವಾಗಿದೆ ಎಂದು ಕಿಡಿಕಾರಿದರು.

ಬೊಮ್ಮರಾಜು ಮಾತನಾಡಿ, ಒಳಮೀಸಲಾತಿ ವರ್ಗೀಕರಣದ ಬಗ್ಗೆ ನಮ್ಮ ವಿರೋಧವಿಲ್ಲ. ಆದರೆ, ವರದಿಯಲ್ಲಿ ಉದ್ದೇಶ ಪೂರಕವಾಗಿ ದಾಖಲಿಸಿರುವ ಕೆಲವು ಲೋಪದೋಷಗಳ ಬಗ್ಗೆ ನಮ್ಮ ವಿರೋಧವಿದೆ. ಮುಖ್ಯಮಂತ್ರಿಗಳು ಈ ವರದಿಯನ್ನು ಸ್ವೀಕಾರ ಮಾಡಬಾರದು. ಒಂದು ವೇಳೆ ವರದಿಯನ್ನು ಪುರಸ್ಕರಿಸಿದರೆ ಮುಂದಿನ ದಿನಗಳಲ್ಲಿ ಬಲಗೈ ಸಮುದಾಯದವರು ರಾಜ್ಯವ್ಯಾಪಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಟಿ.ಎಸ್.ಹಾಳಯ್ಯ, ಎನ್.ಕೆ.ಜಯರಾಮು, ಎಂ.ವಿ.ಕೃಷ್ಣ, ಬೇವಿನಕುಪ್ಪೆ ದೇವರಾಜು, ಇಳ್ಳೇನಹಳ್ಳಿ ದೇವರಾಜು, ಪಾಪಯ್ಯ, ಕುಮಾರ್ ಮಂಚನಹಳ್ಳಿ, ಜವರಪ್ಪ ಹೊಸಕೋಟೆ, ಮಾಣಿಕ್ಯನಹಳ್ಳಿ ಜಯರಾಮು, ಬ್ಯಾಡರಹಳ್ಳಿ ಪ್ರಕಾಶ್, ಸ್ವಾಮಿ ಬಳೆಅತ್ತಿಗುಪ್ಪೆ, ಪುರಸಭೆ ಸದಸ್ಯ ಶಿವಕುಮಾರ್, ನಲ್ಲಹಳ್ಳಿ ಸುರೇಶ್, ಹರಳಹಳ್ಳಿಲೋಕೇಶ್, ಪ್ರಸನ್ನ, ಶ್ರೀನಿವಾಸ್ ಬೇಬಿ, ಕೆಂಪರಾಜು, ಬನ್ನಂಗಾಡಿ ಯೋಗೇಶ್, ಎಂ.ಬೆಟ್ಟಹಳ್ಳಿಮಂಜು, ಬಸವರಾಜು, ಶ್ರೀಧರ ಸೇರಿದಂತೆ ಹಲವರು ಹಾಜರಿದ್ದರು.