ತಂಬ್ರಹಳ್ಳಿ 2ನೇ ಹಂತದ ಏತ ನೀರಾವರಿ ಯೋಜನೆ ಜಾರಿಗೆ ಒತ್ತಾಯ

| Published : Dec 16 2023, 02:00 AM IST

ತಂಬ್ರಹಳ್ಳಿ 2ನೇ ಹಂತದ ಏತ ನೀರಾವರಿ ಯೋಜನೆ ಜಾರಿಗೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಎರಡನೇ ಹಂತದ ನೀರಾವರಿ ಯೋಜನೆಗೆ ಅನುದಾನ ನೀಡಿದರೆ ತಂಬ್ರಹಳ್ಳಿ ಭಾಗದ ರೈತರ ಬದುಕು ಹಸನಾಗುತ್ತದೆ. ಜಿಲ್ಲೆಯ ಡಿಎಂಎಫ್ ಅನುದಾನದಲ್ಲಿ ಏತ ನೀರಾವರಿ ಯೋಜನೆಗೆ ಅನುದಾನವನ್ನು ನೀಡಿ, ರೈತರ ಹೊಲಗಳಿಗೆ ನೀರುಣಿಸಬೇಕು

ಹಗರಿಬೊಮ್ಮನಹಳ್ಳಿ: ತಾಲೂಕಿನ ತಂಬ್ರಹಳ್ಳಿ ಎರಡನೇ ಹಂತದ ಏತ ನೀರಾವರಿ ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿ ಏತ ನೀರಾವರಿ ಹೋರಾಟ ಸಮಿತಿಯವರು ಜಿಲ್ಲಾಧಿಕಾರಿ ದಿವಾಕರಗೆ ಮನವಿ ಸಲ್ಲಿಸಿದರು.

ಈ ಕುರಿತು ಹೋರಾಟ ಸಮಿತಿಯ ಸಂಚಾಲಕ ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್ ಮಾತನಾಡಿ, ತಂಬ್ರಹಳ್ಳಿ ಎರಡನೇ ಹಂತದ ಏತ ನೀರಾವರಿ ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿ ಕಳೆದ ವರ್ಷ ೫೦ ಕಿಮೀ ಪಾದಯಾತ್ರೆ ಮಾಡಿ ಒತ್ತಾಯಿಸಲಾಗಿತ್ತು. ತುಂಗಾಭದ್ರಾ ಹಿನ್ನೀರು, ಗ್ರಾಮದ ಕಾಲಂಚಿನಲ್ಲಿ ಇರುವುದರಿಂದ ಎರಡನೇ ಹಂತದ ನೀರಾವರಿ ಯೋಜನೆಗೆ ಅನುದಾನ ನೀಡಿದರೆ ತಂಬ್ರಹಳ್ಳಿ ಭಾಗದ ರೈತರ ಬದುಕು ಹಸನಾಗುತ್ತದೆ. ಜಿಲ್ಲೆಯ ಡಿಎಂಎಫ್ ಅನುದಾನದಲ್ಲಿ ಏತ ನೀರಾವರಿ ಯೋಜನೆಗೆ ಅನುದಾನವನ್ನು ನೀಡಿ, ರೈತರ ಹೊಲಗಳಿಗೆ ನೀರುಣಿಸಬೇಕು ಎಂದರು.

ಜಿಲ್ಲಾಧಿಕಾರಿ ಮನವಿಗೆ ಪ್ರತಿಕ್ರಿಯಿಸಿ, ತಂಬ್ರಹಳ್ಳಿ ಎರಡನೇ ಹಂತದ ನೀರಾವರಿ ಕಾಮಗಾರಿ ಆರಂಭಿಸಲು ಮುಂದಿನ ಹಂತದಲ್ಲಿ ಅನುದಾನ ನೀಡಲಾಗುವುದು ಎಂದರು. ಈ ಸಂದರ್ಭದಲ್ಲಿ ನಿವೃತ್ತ ಇಒ ಟಿ. ವೆಂಕೋಬಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಕೆ. ಮಾಬುಸಾಬ್, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಪಟ್ಟಣಶೆಟ್ಟಿ ಸುರೇಶ, ಮಂಜುನಾಥ ಪಾಟೀಲ್, ಸಪ್ಪರದ ಪಂಪಾಪತಿ ಇದ್ದರು.

ಚಿತ್ರ : ೧೫ಎಚ್‌ಬಿಎಚ್೩

ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಎರಡನೇ ಹಂತದ ಏತ ನೀರಾವರಿ ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.