ಸಾರಾಂಶ
ತ್ರಿಭಾಷಾ ನೀತಿ ವಿರೋಧಿಸಿ ತಮಿಳುನಾಡುವಿನಲ್ಲಿ ನಡೆದ ಸಭೆಯಲ್ಲಿ ಡಿಸಿಎಂ ಡಿಕೆಶಿ ಭಾಗಿಯಾಗುವ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ತ್ರಿಭಾಷಾ ನೀತಿ ವಿರೋಧಿಸಿ ತಮಿಳುನಾಡುವಿನಲ್ಲಿ ನಡೆದ ಸಭೆಯಲ್ಲಿ ಡಿಸಿಎಂ ಡಿಕೆಶಿ ಭಾಗಿಯಾಗುವ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.ನಗರದಲ್ಲಿ ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಮಿಳುನಾಡು ಸರ್ಕಾರ ದೇಶ ವಿಭಜನೆ ಧೋರಣೆ ಹೊಂದಿದೆ. ಆ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ ಒಪ್ಪಿಲ್ಲ. ರುಪಾಯಿ ಚಿಹ್ನೆ ಅನುಮೋದನೆ ಮಾಡಿದ್ದು ಡಾ.ಮನಮೋಹನ್ ಸಿಂಗ್. ರಿಸರ್ವ್ ಬ್ಯಾಂಕ್ ಮುದ್ರಿಸಿದ ಕರೆನ್ಸಿ ನೀವು ಒಪ್ಪಲ್ಲವೇ? ನೀವೇ ಕರೆನ್ಸಿಯ ವ್ಯವಸ್ಥೆ ಮಾಡಿಕೊಳ್ಳುತ್ತೀರಾ ಎಂದು ತಮಿಳುನಾಡು ಸರ್ಕಾರವ ಕಾರಜೋಳ ಪ್ರಶ್ನಿಸಿದರು.
ಹಸುವಿನ ಹಿಂದೆ ಕರು ಹೋದಂತೆ ತಮಿಳುನಾಡು ಹಿಂದೆ ರಾಜ್ಯ ಸರ್ಕಾರ ಹೋಗುವುದು ಖಂಡನೀಯ. ತಮಿಳುನಾಡು ಸರ್ಕಾರ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ಜಾತಿ ನಿಂದನೆ, ಭಾಷಾ ದ್ವೇಷದ ಮೇಲೆ ರಾಜಕಾರಣ ಅಲ್ಲಿ ನಡೆಯುತ್ತಿದೆ. ತಮಿಳುನಾಡಲ್ಲಿ ರುಪಾಯಿ ಚಿಹ್ನೆ ವಿರೂಪಗೊಳಿಸಿದ್ದು ಖಂಡನೀಯ.ಜಾತಿ, ಉಪಜಾತಿ ಆಧಾರದಲ್ಲಿ ರಾಜಕಾರಣ ಸರಿಯಲ್ಲ. ಪಕ್ಷ ಸಿದ್ಧಾಂತದ ಆಧಾರದಲ್ಲಿ ರಾಜಕಾರಣ ಮಾಡಬೇಕು ಎಂದರು.ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆಯೇ ಇಲ್ಲವಾಗಿದೆ. ಸಿದ್ಧರಾಮಯ್ಯ ಆಡಳಿತದಲ್ಲಿ ಅತ್ಯಾಚಾರ, ಬಾಣಂತಿಯರ ಸಾವು ನಿರಂತರವಾಗಿದೆ. 50 ಜನ ಮಹಿಳೆಯರ ಮೇಲೆ ಅತ್ಯಾಚಾರ, 770 ಬಾಣಂತಿಯರ ಸಾವು ಆಗಿದೆ. 12 ಗುತ್ತಿಗೆದಾರರು, 10 ಅಧಿಕಾರಿಗಳು ಆತ್ಮಹತ್ಯೆಗೆ ಶರಣಾಗಿದ್ದು ಕಾನೂನು ಇದಕ್ಕೆ ಕಾನೂನು ವ್ಯವಸ್ಥೆ ಎನ್ನುತ್ತಾರಾ ಎಂದು ಪ್ರಶ್ನೆ ಮಾಡಿದರು.