ಕಂಬಿಬಾಣೆ ವ್ಯಾಪ್ತಿಯಲ್ಲಿ ಸ್ವಚ್ಛತೆ ಮೊದಲ್ಗೊಂಡು ಇತರ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ತನಲ್ ಎಂಬ ಯುವಕರ ತಂಡ ಸಜ್ಜಾಗಿದೆ.

ಸುಂಟಿಕೊಪ್ಪ : ಕಂಬಿಬಾಣೆ ವ್ಯಾಪ್ತಿಯಲ್ಲಿ ಸ್ವಚ್ಛತೆ ಮೊದಲ್ಗೊಂಡು ಇತರ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ತನಲ್ ಎಂಬ ಯುವಕರ ತಂಡ ಸಜ್ಜಾಗಿದೆ. ಬುಧವಾರ ಬೆಳ್ಳಂಬೆಳಿಗ್ಗೆ ತನಲ್ ಟೀ ಶರ್ಟ್ ಧರಿಸಿ ಕೈಗವಚಗಳನ್ನು ಧರಿಸಿಕೊಂಡ ಯುವಕರ ತಂಡ ಪ್ರವಾಸಿ ಚಿಕ್ಲಿಪಟ್ಟಣದಲ್ಲಿ ಕಂಬಿಬಾಣೆ ಪಟ್ಟಣದಲ್ಲಿ ಪ್ಲಾಸ್ಟಿಕ್ ಕಸ ಹಾಗೂ ಚಿಂದಿ ವಸ್ತುಗಳನ್ನು ಆಯುವುದರ ಮೂಲಕ ಗಮನಸೆಳೆದರು.ಪತ್ರಿಕೆಯೊಂದಿಗೆ ಮಾತನಾಡಿದ ತನಲ್ ತಂಡದ ಮುನಿರ್ ಅವರು, ಕಳೆದ 3-4 ತಿಂಗಳ ಹಿಂದೆ ಸಮಾನ ಮನಸ್ಕರು ಸೇರಿಕೊಂಡು ತನಲ್ ಎಂಬ ಸಾಮಾಜಿಕ ಜಾಲತಾಣದ ಮೂಲಕ ಸಮಾಜಮುಖಿ ಕೆಲಸಗಳನ್ನು ಹಮ್ಮಿಕೊಳ್ಳುವ ಬಗ್ಗೆ ಚರ್ಚೆ ನಡೆಸಿದ್ದು ಅದರ ಪರವಾಗಿ ಸ್ವಚ್ಛ ಪರಿಸರ ನಮ್ಮ ಆದ್ಯತೆಯ ಕಾರ್ಯಕ್ರಮವಾಗಿದ್ದು, ಅದರಂತೆ 11 ರಂದು ಮೊದಲ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಮುಂಬರುವ ದಿನಗಳಲ್ಲಿ ತಿಂಗಳಿಗೆ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಯೋಜನೆಯಿದ್ದು, ರಕ್ತದಾನ ಶಿಬಿರ ನಮ್ಮ ಆದ್ಯತೆಯಾಗಿದೆ ಎಂದು ಮುನಿರ್ ಮಾಹಿತಿ ನೀಡಿದರು.

ಸ್ವಚ್ಛ ಪರಿಸರ ಅಭಿಯಾನದಲ್ಲಿ ತನಲ್ ಗುಂಪಿನ ಸದಸ್ಯರಾದ ಮಾಜಿ ಗ್ರಾ.ಪಂ.ಸದಸ್ಯ ಅವಲಕುಟ್ಟಿ, ಜಬ್ಬರ್, ಮುನಿರ್, ಸಜಿರ್, ರಜಾಕ್, ಅವಲಕುಟ್ಟಿ, ರಂಶೀದ್, ರಾಶೀದ್, ಶರೀಫ್ ಸೇರಿದಂತೆ ಮತ್ತಿತರರು ಇದ್ದರು.