ಸಂಡೂರಿನ ರಾಮಘಡ ಗ್ರಾಮಸ್ಥರಿಗೆ ಟ್ಯಾಂಕರ್ ನೀರೇ ಆಸರೆ

| Published : May 18 2024, 12:34 AM IST

ಸಂಡೂರಿನ ರಾಮಘಡ ಗ್ರಾಮಸ್ಥರಿಗೆ ಟ್ಯಾಂಕರ್ ನೀರೇ ಆಸರೆ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದಿನ ವರ್ಷ ಮಳೆ ಕೊರತೆಯಿಂದ ನೀರು ಪೂರೈಸುತ್ತಿದ್ದ ಕೊಳವೆಬಾವಿಗಳು ಬತ್ತಿವೆ.

ವಿ.ಎಂ. ನಾಗಭೂಷಣ

ಸಂಡೂರು: ಗಣಿ ಗ್ರಾಮವಾಗಿರುವ ತಾಲೂಕಿನ ರಾಮಘಡ ಗ್ರಾಮದಲ್ಲಿನ ಕೊಳವೆಬಾವಿಗಳು ಮಳೆ ಕೊರತೆಯಿಂದ ಬತ್ತಿ ತಳ ಕಂಡಿದ್ದರಿಂದ ಗ್ರಾಮಸ್ಥರಿಗೆ ಗಣಿ ಕಂಪನಿಗಳು ಪೂರೈಸುವ ಟ್ಯಾಂಕರ್ ನೀರೇ ಆಧಾರವಾಗಿದೆ.

ಸುಶೀಲಾನಗರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗಣಿಗಳಿಂದ ಆವೃತವಾಗಿರುವ ರಾಮಘಡ ಗ್ರಾಮದಲ್ಲಿ ಸುಮಾರು ೪೬ ಮನೆಗಳಿದ್ದು, ಅಂದಾಜು ೧೫೦ ಜನಸಂಖ್ಯೆ ಇದೆ. ಹಿಂದಿನ ವರ್ಷ ಮಳೆ ಕೊರತೆಯಿಂದ ನೀರು ಪೂರೈಸುತ್ತಿದ್ದ ಕೊಳವೆಬಾವಿಗಳು ಬತ್ತಿವೆ. ಹೀಗಾಗಿ ಗಣಿ ಕಂಪನಿಗಳು ಟ್ಯಾಂಕರ್ ಮೂಲಕ ಪೂರೈಸುತ್ತಿವೆ.

ಗ್ರಾಮದ ಸುತ್ತಲಿನಲ್ಲಿ ಗಣಿಗಾರಿಕೆ ನಡೆಸುತ್ತಿರುವ ಸ್ಮಯೋರ್, ವೆಸ್ಕೊ, ಝೆಡ್‌ಟಿಸಿ, ಎಸ್.ಕೆ.ಎಂ.ಇ ಗಣಿ ಕಂಪನಿಗಳು ತಲಾ ಒಂದು ನೀರಿನ ಟ್ಯಾಂಕರ್ ಮೂಲಕ ನೀರನ್ನು ಪೂರೈಸಿ, ಜನರ ನೀರಿನ ಬೇಡಿಕೆಯನ್ನು ಪೂರೈಸುತ್ತಿವೆ.

ಗ್ರಾಮಸ್ಥರಾದ ದೇವರಾಜ್ ಕನ್ನಡಪ್ರಭದೊಂದಿಗೆ ಮಾತನಾಡಿ, ಪ್ರತಿವರ್ಷ ೨ ಅಥವಾ ಮೂರರಂತೆ ಒಟ್ಟು ೩೪ ಕೊಳವೆಬಾವಿಗಳನ್ನು ಕೊರೆಸಲಾಗಿತ್ತು. ಆದರೆ, ಮಳೆ ಕೊರತೆ ಹಿನ್ನೆಲೆಯಲ್ಲಿ ಎಲ್ಲ ಕೊಳವೆಬಾವಿಗಳು ಬತ್ತಿಹೋಗಿರುವ ಹಿನ್ನೆಲೆಯಲ್ಲಿ ಸುತ್ತಲಿನ ಸ್ಮಯೋರ್, ವೆಸ್ಕೊ, ಝೆಡ್‌ಟಿಸಿ ಹಾಗೂ ಎಸ್.ಕೆ.ಎಂ.ಇ ಮುಂತಾದ ಗಣಿ ಕಂಪನಿಗಳು ಟ್ಯಾಂಕರ್ ಮೂಲಕ ನೀರನ್ನು ಪೂರೈಸುತ್ತಿವೆ ಎಂದು ತಿಳಿಸಿದರು.

ಮಳೆ ಕೊರತೆಯಿಂದ ಗಣಿ ಗ್ರಾಮವಾದ ತಾಲೂಕಿನ ರಾಮಘಡದಲ್ಲಿ ಇದ್ದ ಕೊಳವೆಬಾವಿಗಳು ನೀರು ಪೂರೈಕೆಯನ್ನು ಸ್ಥಗಿತಗೊಳಿಸಿದ ಮೇಲೆ ಗಣಿ ಕಂಪನಿಗಳು ಟ್ಯಾಂಕರ್‌ಗಳ ಮೂಲಕ ಪೂರೈಸುವ ನೀರೇ ಪ್ರಮುಖ ಆಸರೆಯಾಗಿದೆ.