ಪ್ರಾಣಿ-ಪಕ್ಷಿಗಳ ಬಾಯಾರಿಕೆ ಶಮನಕ್ಕೆ ಟ್ಯಾಂಕರ್‌ ನೀರು ಪೂರೈಕೆ

| Published : Apr 08 2024, 01:08 AM IST

ಪ್ರಾಣಿ-ಪಕ್ಷಿಗಳ ಬಾಯಾರಿಕೆ ಶಮನಕ್ಕೆ ಟ್ಯಾಂಕರ್‌ ನೀರು ಪೂರೈಕೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಂಚೋಳಿ ವನ್ಯಜೀವಿ ವಲಯದ ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿ ಮತ್ತು ಪಕ್ಷಿಗಳ ನೀರಿನ ದಾಹ ಇಂಗಿಸಲು ಕೃತಕ ನೀರಿನ ತೊಟ್ಟಿಗೆ ಅರಣ್ಯ ಇಲಾಖೆ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಬೇಸಿಗೆ ಮತ್ತು ಬರಗಾಲ ಹಿನ್ನೆಲೆಯಲ್ಲಿ ಜಿಲ್ಲೆಯ ಚಿಂಚೋಳಿ ವನ್ಯಜೀವಿ ವಲಯದ ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿ ಮತ್ತು ಪಕ್ಷಿಗಳ ನೀರಿನ ದಾಹ ಇಂಗಿಸಲು ಕೃತಕ ನೀರಿನ ತೊಟ್ಟಿಗೆ ಅರಣ್ಯ ಇಲಾಖೆ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದೆ.

ಪ್ರತಿ ಸಿ.ಸಿ.ಪಾಂಡ್ 15 ರಿಂದ 20 ಸಾವಿರ ಲೀಟರ್ ಸಾಮರ್ಥ್ಯ ಹೊಂದಿದ್ದು, 5-6 ದಿನಕ್ಕೊಮ್ಮೆ ಟ್ಯಾಂಕರ್ ಮೂಲಕ ನೀರು ಹಾಕಲಾಗುತ್ತಿದೆ. ಇದರಿಂದ ಕಾಡಿನಲ್ಲಿರುವ ಮೂಕ ಪ್ರಾಣಿ-ಪಕ್ಷಿಗಳಿಗೆ ಕುಡಿಯುವ ನೀರಿನ ಸಮಸ್ಯೆ ತಕ್ಕಮಟ್ಟಿಗೆ ನಿವಾರಣೆಯಾಗಲಿದೆ.

ಚಿಂಚೋಳಿ ‌ವನ್ಯಜೀವಿ ವಲಯದ ಶೇರಿಬಿಕನಳ್ಳಿ, ಯಾಕತಪೂರ, ಸೋಮಲಿಂಗದಳ್ಳಿ ಹಾಗೂ ನೇಚರ್ಲಾ ಅರಣ್ಯ ಪ್ರದೇಶದಲ್ಲಿ ತಲಾ 2 ಮತ್ತು ಅಂತಾವರಂ ಹಾಗೂ ಬುರುಗದೊಡ್ಡಿ ವಲಯದಲ್ಲಿ ತಲಾ 1 ಸೇರಿ‌ ಒಟ್ಟು 10 ಸಿ.ಸಿ.ಪಾಂಡ್ ನಿರ್ಮಿಸಲಾಗಿದೆ.

ಸಿ.ಸಿ.ಪಾಂಡ್ ಗೆ ಬೇಸಿಗೆ ಅವಧಿಯಲ್ಲಿ ನಿಯಮಿತವಾಗಿ ನೀರು ಪೂರೈಕೆ ಮಾಡುವ ಮೂಲಕ ಕಾಡು ಪ್ರಾಣಿ- ಪಕ್ಷಿಗಳ ನೀರಿನ ದಾಹ ನೀಗಿಸಲು ಇಲಾಖೆ ಮುಂದಾಗಿದೆ ಎಂದು ಕಲಬುರಗಿ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ ಪಾಟೀಲ ಹೇಳಿದ್ದಾರೆ.

ಚಿಂಚೋಳಿ ವನ್ಯ ಜೀವಿ ವಲಯ ದಕ್ಷಿಣ ಭಾರತದಲ್ಲಿಯೇ ಮೊಟ್ಟ ಮೊದಲ ಉಷ್ಣ ಪ್ರದೇಶದ ಅರಣ್ಯದಲ್ಲಿನ ವನ್ಯ ಜೀವಿ ವಲಯವಾಗಿದೆ. ಈ ಬಾರಿ ಅಧಿಕ ಶಾಖದಿಂದಾಗಿ ಇಲ್ಲಿನ ಅರಣ್ಯದಲ್ಲಿನ ಎಲ್ಲಾ ಜಲಮೂಲಗಳು ಬತ್ತಿ ಬರಿದಾಗಿವೆ. ಇದರಿಂದ ಪ್ರಾಣಿಗಳು, ಪತ್ರಿಗಳಿಗೆ ತಲೆದೋರಿರುವ ನೀರಿನ ಸಮಸ್ಯೆ ನಿವಾರಣೆಗೆ ಅರಣ್ಯ ಇಲಾಖೆ ಟ್ಯಾಂಕರ್ ನೀರು ಪೂರೈಸುತ್ತ ಅವುಗಳ ದಾಹ ಶಮನಕ್ಕೆ ತಕ್ಕ ಪ್ರಯತ್ನಕ್ಕೆ ಮುಂದಾಗಿದೆ.

ಇಲ್ಲಿನ ವನ್ಯಜೀವಿಗಳ ವಲಯದಲ್ಲಿ ನರಿ, ತೋಳ, ಜಿಂಕೆ, ತರಹೇವಾರಿ ಹಾವುಗಳು, ನಾನಾ ರೀತಿಯ ಪಕ್ಷಿಗು, ನೀಲ್‌ಗಾಯ್‌ನಂತಹ ಅಪರೂಪದ ಪ್ರಾಣಿಗಳು ಇಲ್ಲಿವೆ. ಹೀಗಾಗಿ ಈ ವಲಯದಲ್ಲಿನ ವನ್ಯಜೀವಿಗಳ ರಕ್ಷಣೆಗೆ ಇಲಾಖೆ ತೋರುತ್ತಿರುವ ಮುತುವರ್ತಿ ಗಮನ ಸೆಳೆದಿದೆ.