ಮಾಗಡಿ: ಟಿಎಪಿಸಿಎಂಎಸ್ ವಜ್ರ ಮಹೋತ್ಸವದ ಪ್ರಯುಕ್ತ ಹೊಸಪೇಟೆಯಲ್ಲಿ ನಿರ್ಮಿಸಿರುವ ವಾಣಿಜ್ಯ ಅಂಗಡಿ ಮಳಿಗೆ ಮತ್ತು ಗೋದಾಮುಗಳನ್ನು ಸೆ. 6ರಂದು ಸಹಕಾರ ಸಚಿವ ಲಕ್ಷ್ಮಣ್ ಸವದಿ ಹಾಗೂ ಪೌರಾಡಳಿತ ಸಚಿವ ಬಾಲಕೃಷ್ಣ ಉದ್ಘಾಟಿಸಲಿದ್ದಾರೆ ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಎಚ್.ಆರ್.ಶಿವಪ್ರಸಾದ್ ಹೇಳಿದರು
ಮಾಗಡಿ: ಟಿಎಪಿಸಿಎಂಎಸ್ ವಜ್ರ ಮಹೋತ್ಸವದ ಪ್ರಯುಕ್ತ ಹೊಸಪೇಟೆಯಲ್ಲಿ ನಿರ್ಮಿಸಿರುವ ವಾಣಿಜ್ಯ ಅಂಗಡಿ ಮಳಿಗೆ ಮತ್ತು ಗೋದಾಮುಗಳನ್ನು ಸೆ. 6ರಂದು ಸಹಕಾರ ಸಚಿವ ಲಕ್ಷ್ಮಣ್ ಸವದಿ ಹಾಗೂ ಪೌರಾಡಳಿತ ಸಚಿವ ಬಾಲಕೃಷ್ಣ ಉದ್ಘಾಟಿಸಲಿದ್ದಾರೆ ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಎಚ್.ಆರ್.ಶಿವಪ್ರಸಾದ್ ಹೇಳಿದರು.
ಪಟ್ಟಣದ ಹೊಸಪೇಟೆಯ ಕ್ಷೀರ ಭವನದಲ್ಲಿ 2025-26ನೇ ಸಾಲಿನ ಟಿಎಪಿಸಿಎಂಎಸ್ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ರೈತರ ಸಹಕಾರ ಮತ್ತು ಆಡಳಿತ ಮಂಡಳಿಯ ಬೆಂಬಲದೊಂದಿಗೆ ಸಚಿವ ಬಾಲಕೃಷ್ಣ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಶೋಕ್ ಮಾರ್ಗದರ್ಶನದಲ್ಲಿ ಸಹಕಾರ ಸಂಘ 2025-26ನೇ ಸಾಲಿನಲ್ಲಿ ₹ 54.49 ಲಕ್ಷ ಲಾಭ ಗಳಿಸಿದೆ ಎಂದು ಹೇಳಿದರು.ದಾಸ್ತಾನು ಗೋದಾಮು-ವಾಣಿಜ್ಯ ಸಂಕೀರ್ಣ: ಸುಮಾರು ₹3.10 ಕೋಟಿ ವೆಚ್ಚದಲ್ಲಿ ಎರಡು ಸುಸಜ್ಜಿತ ಗೋದಾಮು ಹಾಗೂ ಮುಂಭಾಗದಲ್ಲಿ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲಾಗಿದೆ. ಮೊದಲ ಮತ್ತು ಎರಡನೇ ಮಹಡಿಯಲ್ಲಿ ಸುಸಜ್ಜಿತ ಸಭಾಂಗಣ ಹಾಗೂ ತರಬೇತಿ ಕೇಂದ್ರ ನಿರ್ಮಿಸುವ ಯೋಜನೆಯಿದೆ. ಪ್ರತ್ಯೇಕ ಗೋದಾಮಿನಲ್ಲಿ 2,000 ಮೂಟೆಗಳಷ್ಟು ಡಿಎಪಿ, ಯೂರಿಯಾ ಹಾಗೂ 20:20 ರಸಗೊಬ್ಬರ ದಾಸ್ತಾನು ಇರಿಸಲಾಗಿದೆ. ಜೊತೆಗೆ ಸ್ವಂತ ಕಟ್ಟಡದ 3 ಮಳಿಗೆಗಳಲ್ಲಿ ರೈತರಿಗೆ ಅಗತ್ಯವಿರುವ ಪಂಪ್ ಮೋಟಾರ್, ಪೈಪ್, ಕೇಬಲ್ ಹಾಗೂ ಕೃಷಿ ಸಲಕರಣೆಗಳ ಮಾರಾಟ ವ್ಯವಸ್ಥೆ ಕಲ್ಪಿಸಲಾಗಿದೆ.
ಆರ್ಥಿಕ ಪ್ರಗತಿ ಮತ್ತು ಲಾಭ ದುಪ್ಪಟ್ಟು:ಸಂಸ್ಥೆಯು ಅಭಿವೃದ್ಧಿ ಕಾಮಗಾರಿಗಳ ನಡುವೆಯೂ ಡಿಸಿಸಿ ಬ್ಯಾಂಕಿನಲ್ಲಿ ₹1 ಕೋಟಿ ಠೇವಣಿ ಕಾಯ್ದಿರಿಸಿದ್ದು, ವಾರ್ಷಿಕ ₹18 ಲಕ್ಷಕ್ಕೂ ಅಧಿಕ ಬಡ್ಡಿ ಆದಾಯ ಗಳಿಸುತ್ತಿದೆ. ಸಂಸ್ಥೆಯ ಈ ಅಭೂತಪೂರ್ವ ಬೆಳವಣಿಗೆಗೆ ಸಹಕರಿಸಿದ ಆಡಳಿತ ಮಂಡಳಿಯ ನಿರ್ದೇಶಕರು, ಸಿಬ್ಬಂದಿ ವರ್ಗ ಹಾಗೂ ಸರ್ವ ಸದಸ್ಯರಿಗೆ ಶಿವಪ್ರಸಾದ್ ಕೃತಜ್ಞತೆ ಸಲ್ಲಿಸಿದರು.
ಸಹಕಾರ ಸಂಘದ ಮಾಜಿ ಅಧ್ಯಕ್ಷ ಸೋಮಣ್ಣ ಮಾತನಾಡಿ, ಟಿಎಪಿಸಿಎಂಎಸ್ ಸಂಸ್ಥೆ ರೈತರ ಆರ್ಥಿಕ ಮತ್ತು ಕೃಷಿ ಅಗತ್ಯಗಳಿಗೆ ಸ್ಪಂದಿಸುತ್ತಿದೆ. ವಾಣಿಜ್ಯ ಮಳಿಗೆಗಳ ಸಮುಚ್ಚಯ ಹಾಗೂ ಸುಸಜ್ಜಿತ ಸಮುದಾಯ ಭವನ ನಿರ್ಮಾಣದ ಜತೆಗೆ, ರೈತರಿಗೆ ಅಗತ್ಯವಿರುವ ಕೃಷಿ ಯಂತ್ರೋಪಕರಣಗಳು, ಪಂಪ್ ಹಾಗೂ ಮೋಟಾರ್‌ಗಳ ಮಾರಾಟ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ರೂಪಿಸಲಾಗಿದೆ ಎಂದು ತಿಳಿಸಿದರು.ಇದೇ ವೇಳೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಂಘ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ರಾಜು, ನಿರ್ದೇಶಕರಾದ ಮಂಜುನಾಥ್, ಮಹೇಶ್, ಮಹಾದೇವಯ್ಯ, ರಮೇಶ್, ರಂಗನಾಥ್, ಗೀತಾ, ಗಂಗಣ್ಣ, ಯತೀಶ್, ನಂಜುಂಡಯ್ಯ, ಶಿಲ್ಪಶ್ರೀ, ಕಾರ್ಯದರ್ಶಿ ನಾರಾಯಣ್, ರಘು ಇತರರು ಭಾಗವಹಿಸಿದ್ದರು.(ಫೋಟೊ ಕ್ಯಾಪ್ಞನ್)
ಮಾಗಡಿ ಪಟ್ಟಣದ ಹೊಸಪೇಟೆಯ ಕ್ಷೀರ ಭವನದಲ್ಲಿ 2025-26ನೇ ಸಾಲಿನ ಟಿಎಪಿಸಿಎಂಎಸ್ ಸರ್ವ ಸದಸ್ಯರ ವಾರ್ಷಿಕ ಸಭೆಯನ್ನು ಅಧ್ಯಕ್ಷ ಎಚ್.ಆರ್.ಶಿವಪ್ರಸಾದ್ ಉದ್ಘಾಟಿಸಿದರು. ಉಪಾಧ್ಯಕ್ಷ ರಾಜು, ನಿರ್ದೇಶಕರಾದ ಮಂಜುನಾಥ್, ಮಹೇಶ್, ಮಹಾದೇವಯ್ಯ, ರಮೇಶ್ ಇತರರು ಭಾಗವಹಿಸಿದ್ದರು.