ಸಾರಾಂಶ
ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಆಹ್ವಾನ ಪತ್ರಿಕೆಯನ್ನು ಷೇರುದಾರರಿಗೆ ತಲುಪಿಸಲಾಗಿದೆ. ಸಭೆಗೆ ಬರುವ ಷೇರುದಾರರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಆಹ್ವಾನ ಪತ್ರಿಕೆ ತಲುಪದ ಷೇರುದಾರರು ಇದನ್ನೆ ಆಹ್ವಾನ ಎಂದು ತಿಳಿದು ಸಭೆಗೆ ಹಾಜರಾಗಬೇಕು.
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್)ದ 2023-24ನೇ ಸಾಲಿನ ಸರ್ವ ಸದಸ್ಯರ ಸಭೆಯನ್ನು ಸೆ.20ರಂದು ಆಯೋಜಿಸಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಡಿ.ಶ್ರೀನಿವಾಸ್ ತಿಳಿಸಿದರು.ಪಟ್ಟಣದ ಟಿಎಪಿಸಿಎಂಎಸ್ ಆಡಳಿತ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಆಹ್ವಾನ ಪತ್ರಿಕೆಯನ್ನು ಷೇರುದಾರರಿಗೆ ತಲುಪಿಸಲಾಗಿದೆ. ಸಭೆಗೆ ಬರುವ ಷೇರುದಾರರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಆಹ್ವಾನ ಪತ್ರಿಕೆ ತಲುಪದ ಷೇರುದಾರರು ಇದನ್ನೆ ಆಹ್ವಾನ ಎಂದು ತಿಳಿದು ಸಭೆಗೆ ಹಾಜರಾಗಬೇಕು ಎಂದರು.
ಸಂಸ್ಥೆಯು ಈ ವರ್ಷವು ಸಹ ಲಾಭದಾಯಕವಾಗಿ ಮುನ್ನಡೆದು 11.79 ಲಕ್ಷ ರು. ಆದಾಯ ಗಳಿಸಿದೆ. ಸಂಸ್ಥೆಯಲ್ಲಿ 12 ಶಾಖೆಗಳು ಸಹ ಆದಾಯದಲ್ಲಿ ನಡೆಯುತ್ತಿವೆ. ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಅವಕಾಶ ನೀಡಿಲ್ಲ ಎಂದರು.ಸಂಸ್ಥೆಯಿಂದ ಹೊಸದಾಗಿ ವೇಬ್ರಿಡ್ಜ್ ನಿರ್ಮಾಣ ಮಾಡಲಾಗಿದೆ. ಜತೆಗೆ ಸಂಸ್ಥೆ ಸ್ಥಾಪನೆಗೊಂಡು 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮುಂದಿನ ತಿಂಗಳಲ್ಲಿ ಅಮೃತ ಮಹೋತ್ಸವ ಆಚರಿಸಲಾಗುವುದು. ಟಿಎಪಿಸಿಎಂಎಸ್ ಸಂಸ್ಥೆಯಿಂದ ನಿರ್ಮಿಸಿರುವ 14 ಮಳಿಗೆಗಳ ಹರಾಜು ಪ್ರಕ್ರಿಯೆ ಸೆ.17 ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆ ಉಪಾಧ್ಯಕ್ಷೆ ತಿಬ್ಬಮ್ಮ, ನಿರ್ದೇಶಕರಾದ ಗುರುಸ್ವಾಮಿ, ರಾಮಕೃಷ್ಣೇಗೌಡ, ದಯಾನಂದ್, ಸಿ.ಜಿ. ಮಾಲತಿ, ನರಸಿಂಹನಾಯ್ಕ, ಸರ್ಕಾರಿ ನಾಮಿನಿ ನಿರ್ದೇಶಕ ಚಿಟ್ಟಿಬಾಬು, ಮುಖ್ಯಕಾರ್ಯನಿರ್ವಾಹಕಅಧಿಕಾರಿ ನವೀನ್ ಸೇರಿದಂತೆ ಹಲವರು ಇದ್ದರು.ಕೆಆರ್ ಎಸ್ ನೀರಿನ ಮಟ್ಟಗರಿಷ್ಠ ಮಟ್ಟ - 124.80 ಅಡಿ
ಇಂದಿನ ಮಟ್ಟ – 124.45 ಅಡಿ
ಒಳ ಹರಿವು – 8,196 ಕ್ಯುಸೆಕ್ಹೊರ ಹರಿವು – 6,902 ಕ್ಯುಸೆಕ್
ನೀರಿನ ಸಂಗ್ರಹ – 48.963 ಟಿಎಂಸಿ