ಮದ್ದೂರು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನಿರ್ದೇಶಕರ ಸ್ಥಾನಗಳಿಗೆ ಸೆ.27ರಂದು ನಡೆಯುವ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೆ ರೈತ ಪರವಾಗಿ ಕೆಲಸ ಮಾಡುವ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಮನವಿ.
ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನಿರ್ದೇಶಕರ ಸ್ಥಾನಗಳಿಗೆ ಸೆ.27ರಂದು ನಡೆಯುವ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ ಎಂದು ಮೈತ್ರಿ ನಾಯಕರು ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮೈತ್ರಿ ಅಭ್ಯರ್ಥಿಗಳೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ಬಿ.ತರಗತಿಯಿಂದ ಪಿ.ಕೆ.ಕಾವ್ಯ, ಚಂದ್ರನಾಯಕ್, ವೈ.ಕೆ.ದ್ಯಾವಯ್ಯ, ಬಸವ ಚಾರಿ, ಎಂ.ಎಸ್.ಶಶಿಕಲಾ, ಸಿ.ಡಿ.ಸಂತೋಷ್ ಹಾಗೂ ಎಸ್.ಡಿ.ಹೊನ್ನೇಗೌಡ ಕಣದಲ್ಲಿದ್ದಾರೆ ಎಂದರು.
ಸಹಕಾರ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಗಳಾಗಿ ಎ.ತರಗತಿಯಿಂದ ಸಿ.ಎ.ಕೆರೆ ಹೋಬಳಿಯಿಂದ ದೇವೇಗೌಡ, ಮಹೇಂದ್ರ, ಕಸಬಾ ಹೋಬಳಿಯಿಂದ ದೇವರಾಜು, ಕೊಪ್ಪ ಹೋಬಳಿಯಿಂದ ದಯಾನಂದ ಸ್ಪರ್ಧಿಸಿದ್ದಾರೆ ಎಂದರು.ತಾಲೂಕು ಸೊಸೈಟಿ ಎಲ್ಲಾ ಷೇರುದಾರ ಸದಸ್ಯರು ರೈತ ರ ಪರವಾದ ಸಂಘದ ಅಭಿವೃದ್ಧಿ ದೃಷ್ಟಿಯಿಂದ ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೆ ರೈತ ಪರವಾಗಿ ಕೆಲಸ ಮಾಡುವ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ .ಸಿ.ತಮ್ಮಣ್ಣ ಹಾಗೂ ಎಸ್.ಪಿ.ಸ್ವಾಮಿ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಸಿ.ಕೆ.ಸತೀಶ್, ಸೊಸೈಟಿ ಮಾಜಿ ಅಧ್ಯಕ್ಷ ಎಸ್.ಬಿ.ಮಹದೇವು, ಮಾಜಿ ನಿರ್ದೇಶಕ ಕೂಳಗೆರೆ ಶೇಖರ್, ಪುರಸಭೆ ಮಾಜಿ ಸದಸ್ಯರಾದ ಮಹೇಶ್, ಎಂ.ಪಿ.ಮಂಜುನಾಥ್, ಮುಖಂಡರಾದ ಸುಧೀರ್, ಸೇರಿದಂತೆ ಮೈತ್ರಿ ಪಕ್ಷದ ಮುಖಂಡರು ಇದ್ದರು.ಜೀವವಿಮೆ ನಿಗಮದ ಪ್ರತಿನಿಧಿಗಳ ಪತ್ತಿನ ಸಹಕಾರ ಸಂಘದ ಸಭೆಪಾಂಡವಪುರ:ಸಹಕಾರಿ ಬಂಧುಗಳು ಹಾಗೂ ಸಂಘದ ಷೇರುದಾರ ಸದಸ್ಯರು ಹೊಸ ಷೇರುದಾರರನ್ನು ನೋಂದಾಯಿಸುವ ಮೂಲಕ ಸಂಘದ ಶ್ರೇಯೋಭಿವೃದ್ಧಿಗೆ ಕೈಜೋಡಿಸಬೇಕು ಎಂದು ಭಾರತೀಯ ಜೀವವಿಮೆ ನಿಗಮದ ಪ್ರತಿನಿಧಿಗಳ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಕೆ.ಮಂಜುನಾಥ್ ಹೇಳಿದರು.
ಪಟ್ಟಣದ ಶಾಂತಿನಗರದ ಸತ್ಯಸಾಯಿ ಮಂದಿರದಲ್ಲಿ ಆಯೋಜಿಸಿದ್ದ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿಯೇ ಏಕೈಕ ಸಂಘವಾಗಿದ್ದು, ಷೇರುದಾರ ಸದಸ್ಯರು 200 ಸದಸ್ಯರನ್ನು ಸಂಘಕ್ಕೆ ಹೊಸದಾಗಿ ನೋಂದಾಯಿಸಿದರೆ ದುಡಿಯುವ ಬಂಡವಾಳ ಸಿಗಲಿದೆ. ಇದರಿಂದ ಸಂಘದ ಸದಸ್ಯರಿಗೆ ಸಾಲ ಸೌಲಭ್ಯಗಳು ದೊರೆಯುವ ಜತೆಗೆ ಆರ್ಥಿಕಾಭಿವೃದ್ಧಿ ಕೂಡ ಸಾಧ್ಯವಾಗಲಿದೆ ಎಂದರು.ಸಂಘದ ಸದಸ್ಯರು ಮೃತಪಟ್ಟರೆ ಅವರ ಕುಟುಂಬ ಸದಸ್ಯರಿಗೆ ಮರಣ ನಿಧಿ ನೀಡಲು ಸರ್ವಾನುಮದಿಂದ ತೀರ್ಮಾನಿಸಲಾಯಿತು.ಸಭೆಯಲ್ಲಿ ವಿವಿಧ ತೀರ್ಮಾನಗಳನ್ನು ಕೈಗೊಳ್ಳಲಾಯಿತು. ಮಹಾಸಭೆಯಲ್ಲಿ ಪಾಂಡವಪುರ ಎಲ್ಐಸಿ ಕಚೇರಿ ಶಾಖಾಧಿಕಾರಿ ವಿ.ಸೋಮೇಶ್, ಸಹಕಾರ ಇಲಾಖೆ ಸಹಕಾರ ಅಭಿವೃದ್ಧಿ ಅಧಿಕಾರಿ ಆನಂದನಾಯಕ್, ಶ್ರೀರಂಗಪಟ್ಟಣ ಎಲ್‌ಐಸಿ ನಿವೃತ್ತ ನೌಕರ ವಾಸುದೇವ, ಸಂಘದ ಉಪಾಧ್ಯಕ್ಷ ಚಂದ್ರೇಗೌಡ, ನಿರ್ದೇಶಕರಾದ ಟಿ.ಆರ್.ಸುನಿಲ್ ಕುಮಾರ್, ಕೆ.ಲಕ್ಷ್ಮೇಗೌಡ, ಎಸ್.ಸಿ.ಮಧು ಕುಮಾರಿ, ಭಾರತಿ, ಬಿ.ಸಿ.ಚಲುವರಾಜು, ಸಿ.ಬೆಟ್ಟೇಗೌಡ, ಬಿ.ಡಿ.ಚಂದ್ರಶೇಖರ್, ಎಲ್.ಕೆ. ಚಿಕ್ಕಹನುಮಂತೇಗೌಡ, ಜಿ.ಎಂ.ಕೃಷ್ಣೇಗೌಡ, ಎಂ.ಚಿಕ್ಕಣ್ಣ, ಕಾರ್ಯದರ್ಶಿ ಪಿ.ಸಿ.ರಾಧ ಸೇರಿದಂತೆ ಇತರರು ಇದ್ದರು.ಡೇರಿ ಅಭಿವೃದ್ಧಿಗಾಗಿ ನಂದಿನಿ ಉತ್ಪನ್ನಗಳನ್ನು ಬಳಸಿ: ಡಾ.ಸದಾಶಿವ
ಹಲಗೂರು:ಹಾಲು ಉತ್ಪಾದಕರು ಗುಣಮಟ್ಟದ ಹಾಲನ್ನು ಸಂಘಕ್ಕೆ ಸರಬರಾಜು ಮಾಡಿ ರಾಸುಗಳಿಗೆ ನಂದಿನಿ ಉತ್ಪನ್ನದ ಪಶು ಆಹಾರ ಹಾಗೂ ಖನಿಜ ಮಿಶ್ರಣ ಸರಿಯಾದ ಸಮಯಕ್ಕೆ ನೀಡಿದರೆ ಡೇರಿ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಮಳವಳ್ಳಿ ವಿಭಾಗದ ಮನ್ಮುಲ್ ಮುಖ್ಯಸ್ಥ ಡಾ.ಸದಾಶಿವ ತಿಳಿಸಿದರು.ಸಮೀಪದ ಹುಲ್ಲೇಗಾಲ ಗ್ರಾಮದ ಡೇರಿ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಸಂಘಕ್ಕೆ ಮುಂದಿನ ದಿನಗಳಲ್ಲಿ ಸ್ವಂತ ಕಟ್ಟಡ ನಿರ್ಮಿಸಿಕೊಳ್ಳಲು ಸಹಕರಿಸಬೇಕು ಎಂದರು.ವಿಶೇಷ ಅಧಿಕಾರಿ ಎಂ.ಸಿ.ರಶ್ಮಿ ಸಂಘದ ವಾರ್ಷಿಕ ವರದಿ ಸಭೆಗೆ ತಿಳಿಸಿ 11,15,173 ರು. ನಿವ್ವಳ ಲಾಭ ಬಂದಿದೆ. ಎಲ್ಲರೂ ಗುಣಮಟ್ಟದ ಹಾಲು ಹಾಕಿ ಸಂಘವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿ ಎಂದರು.
ಈ ವೇಳೆ ಸಂಘದಿಂದ ಡಾ.ಸದಾಶಿವ ಮತ್ತು ಎಂ.ಸಿ.ರಶ್ಮಿ ಅವರನ್ನು ಸನ್ಮಾನಿಸಲಾಯಿತು. ಸಿಇಒ ಕಮಲಮ್ಮ, ಹಾಲು ಪರೀಕ್ಷಕಿ ಸೌಮ್ಯ ಮತ್ತು ರಮೇಶ್ ಇದ್ದರು.