ಸಾರಾಂಶ
ಚಿತ್ರದುರ್ಗ ತಾಲೂಕಿನ ಭರಮಸಾಗರದಲ್ಲಿ ಫೆ.4ರಿಂದ 12 ರವರೆಗೆ ನಡೆಯಲಿರುವ 76ನೇ ತರಳಬಾಳು ಹುಣ್ಣಿಮೆ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಶ್ರೀ ತರಳಬಾಳು ಶಿವಸೈನ್ಯ ರಾಜ್ಯ ಘಟಕದ ನೇತೃತ್ವದಲ್ಲಿ ಫೆ.4ರ ಬೆಳಗ್ಗೆ 10 ಗಂಟೆಗೆ ಶ್ರೀ ತರಳಬಾಳು ಶಿವಸೈನ್ಯ ರಾಜ್ಯ ಘಟಕ ನೇತೃತ್ವದಲ್ಲಿ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದಿಂದ ಭರಮಸಾಗರವರೆಗೆ ಬೃಹತ್ ಬೈಕ್ ರ‍್ಯಾಲಿ ಮೂಲಕ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರನ್ನು ಕರೆತರಲು ತೀರ್ಮಾನಿಸಲಾಯಿತು.
- ಸಿರಿಗೆರೆ ಮಠದಿಂದ ಬೃಹತ್ ಬೈಕ್ ರ‍್ಯಾಲಿ । ನಿರಂಜನ ಮೂರ್ತಿ ಕಲ್ಯಾಣ ಮಂಟಪದಲ್ಲಿ ನಡೆದ ಸಭೆ ನಿರ್ಧಾರ
- - - ಕನ್ನಡಪ್ರಭ ವಾರ್ತೆ ದಾವಣಗೆರೆಚಿತ್ರದುರ್ಗ ತಾಲೂಕಿನ ಭರಮಸಾಗರದಲ್ಲಿ ಫೆ.4ರಿಂದ 12 ರವರೆಗೆ ನಡೆಯಲಿರುವ 76ನೇ ತರಳಬಾಳು ಹುಣ್ಣಿಮೆ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಶ್ರೀ ತರಳಬಾಳು ಶಿವಸೈನ್ಯ ರಾಜ್ಯ ಘಟಕದ ನೇತೃತ್ವದಲ್ಲಿ ಫೆ.4ರ ಬೆಳಗ್ಗೆ 10 ಗಂಟೆಗೆ ಶ್ರೀ ತರಳಬಾಳು ಶಿವಸೈನ್ಯ ರಾಜ್ಯ ಘಟಕ ನೇತೃತ್ವದಲ್ಲಿ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದಿಂದ ಭರಮಸಾಗರವರೆಗೆ ಬೃಹತ್ ಬೈಕ್ ರ‍್ಯಾಲಿ ಮೂಲಕ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರನ್ನು ಕರೆತರಲು ತೀರ್ಮಾನಿಸಲಾಯಿತು.
ಭಾನುವಾರ ಭರಮಸಾಗರದ ನಿರಂಜನ ಮೂರ್ತಿ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀ ತರಳಬಾಳು ಶಿವಸೈನ್ಯ ರಾಜ್ಯ ಘಟಕ ಪದಾಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಫೆ.4ರ ಬೆಳಗ್ಗೆ 10 ಗಂಟೆಗೆ ಬೈಕ್ ರ‍್ಯಾಲಿಯು ತರಳಬಾಳು ಜಗದ್ಗುರು ಬೃಹನ್ಮಠ ಸಿರಿಗೆರೆಯಿಂದ ಪ್ರಾರಂಭಗೊಂಡು ಭರಮಸಾಗರ ಹೋಬಳಿಯ 30 ಹಳ್ಳಿಗಳ ಮೂಲಕ ಸಾಗಲಿದೆ. ಸುಮಾರು 5000 ಬೈಕ್‌ಗಳ ರ‍್ಯಾಲಿ ಮೂಲಕ ಸಂಜೆ 4 ಗಂಟೆಗೆ ಭರಮಸಾಗರದಲ್ಲಿ ನಡೆಯಲಿರುವ ಶ್ರೀ ತರಳಬಾಳು ಹುಣ್ಣಿಮೆ ಮಹೋತ್ಸವದ ಮಹಾಮಂಟಪ ತಲುಪಲಿದೆ.ಭರಮಸಾಗರ ಹೋಬಳಿಯ ಭಕ್ತರ ಆಶಯದಂತೆ ಸಂಜೆ 4 ಗಂಟೆಗೆ ಡಾ. ಶಿವಮೂರ್ತಿ ಶಿವಾಚಾರ್ಯರ ತೆಪ್ಪೋತ್ಸವ ಕಾರ್ಯಕ್ರಮ ಭರಮಸಾಗರದ ಕೆರೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಭಕ್ತರು, ಸರ್ವ ಸಮಾಜದ ಬಾಂಧವರು ಭಾಗವಹಿಸಲು ದಾವಣಗೆರೆಯ ಶ್ರೀ ತರಳಬಾಳು ಶಿವಸೈನ್ಯ ರಾಜ್ಯ ಘಟಕ ಮನವಿ ಮಾಡಿದೆ.
ಸಭೆಯಲ್ಲಿ ಶಶಿಧರ ಹೆಮ್ಮನ ಬೇತೂರು, ಮೋಹನ್ ಸಿರಿಗೆರೆ, ಕುಮಾರ್ ಮೆಳ್ಳೆಕಟ್ಟೆ, ಬಸವರಾಜ್ ಸಿರಿಗೆರೆ, ಶೈಲೇಶ್ ಚೌಲಹಳ್ಳಿ, ಶ್ರೀನಿವಾಸ್ ರಾಮಘಟ್ಟ, ಸಿದ್ದೇಶ್ ನಂದಿ ಕಂಬ, ರಾಕೇಶ್ ಸಾತಿ, ಲಿಂಗರಾಜ್ ನಾಗನೂರು, ಅಶೋಕ್ ಹೊನ್ನ ನಾಯಕನಹಳ್ಳಿ, ಮಲ್ಲಿಕಾರ್ಜುನ್ ಮೆಳ್ಳೆಕಟ್ಟೆ, ಸಂತೋಷ ಗಂಗನಕಟ್ಟೆ, ಇತರರು ಇದ್ದರು.ವಿಶೇಷ ಸೂಚನೆ:
ಫೆ.4 ರಿಂದ 12 ರವರೆಗೆ ನಡೆಯುವ ತರಳಬಾಳು ಹುಣ್ಣಿಮೆಗೆ ದಾವಣಗೆರೆಯಿಂದ ಭರಮಸಾಗರಕ್ಕೆ ತೆರಳುವ ಭಕ್ತರಿಗೆ ಹೆಬ್ಬಾಳು ಟೋಲ್‌ನಲ್ಲಿ ಉಚಿತ ಪ್ರವೇಶ ಕಲ್ಪಿಸಲಾಗುವುದು. ಶಿವಧ್ವಜ ಕಟ್ಟಿಕೊಂಡ ವಾಹನಗಳಿಗೆ, ಶಿವಧ್ವಜ ಕಟ್ಟಿಕೊಂಡವರಿಗೆ ಉಚಿತ ಪ್ರವೇಶ ಇರುತ್ತದೆ.- - - -2ಕೆಡಿವಿಜಿ52:
ಚಿತ್ರದುರ್ಗ ತಾಲೂಕು ಭರಮಸಾಗರದಲ್ಲಿ ನಡೆಯುವ ತರಳಬಾಳು ಹುಣ್ಣಿಮೆ ಮಹೋತ್ಸವ ಅಂಗವಾಗಿ ಶ್ರೀ ತರಳಬಾಳು ಶಿವಸೈನ್ಯದಿಂದ ಬೈಕ್ ರ‍್ಯಾಲಿ ಹಮ್ಮಿಕೊಳ್ಳುವ ಕುರಿತು ಸಭೆ ನಡೆಯಿತು.