ಸಾರಾಂಶ
ಕರ್ನಾಟಕ ಸುವರ್ಣ ವರ್ಷ ಸಂಭ್ರಮಾಚರಣೆ ಸವಿನೆಪಿಗಾಗಿ ಇಂದು ಸರ್ಕಾರಿ ಕನ್ನಡ ಶಾಲೆ ದತ್ತು ಸ್ವೀಕಾರ
ಕನ್ನಡಪ್ರಭ ವಾರ್ತೆ, ತರೀಕೆರೆಪೌರಕಾರ್ಮಿಕರ ಮಕ್ಕಳು ಮತ್ತು ದಲಿತ ಸಮುದಾಯದ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪಟ್ಟಣದ ಡಾ.ಬಿ.ಆರ್.ಆಂಬೇಡ್ಕರ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ತರೀಕೆರೆ ಪುರಸಭೆ 2024-25ನೇ ಸಾಲಿಗೆ ದತ್ತು ಸ್ವೀಕರಿಸಿ ಶಾಲೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವ ಕಾರ್ಯಕ್ಕೆ ಮುಂದಾಗಿದೆ. ಕರ್ನಾಟಕ ಸುವರ್ಣ ಸಂಭ್ರಮ ವರ್ಷಾಚರಣೆ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳತ್ತ ಹೆಚ್ಚು ಮಕ್ಕಳನ್ನು ಆಕರ್ಷಿಸುವ ಹಿನ್ನಲೆಯಲ್ಲಿ ಸರ್ಕಾರಿ ಕನ್ನಡ ಶಾಲೆಯನ್ನು ದತ್ತು ಸ್ವೀಕರಿಸಿ ಶಾಲೆಗೆ ಅಗತ್ಯ ಸೌಕರ್ಯಗಳನ್ನು ಒದಗಿಸಲು ಪುರಸಭೆ ಕಾರ್ಯಾಲಯ ಈ ಮಹತ್ವದ ನಿರ್ಧಾರ ಕೈಗೊಂಡು ರಾಜ್ಯಕ್ಕೆ ಮಾದರಿಯಾಗಿದೆ.
ಶಾಲೆಯಲ್ಲಿ ವಿದ್ಯಾಭ್ಯಾಸ, ಮಾಡುತ್ತಿರುವ ಮಕ್ಕಳಿಗೆ ಅಗತ್ಯವಿರುವ ಕಲಿಕೋಪಕರಣ, ಕ್ರೀಡಾ ಸಾಮಗ್ರಿಗಳು,ಶಾಲೆಗೆ ಸಮುದಾಯ ಶೌಚಾಲಯ, ಆಟದ ಮೈದಾನ, ಶಾಲೆಗೆ ವಾರ್ಷಿಕ ಸುಣ್ಣ ಬಣ್ಣ, ಶಾಲೆ ಸುತ್ತ ಫೆನ್ಸಿಂಗ್, ಉತ್ತಮ ಪರಿಸರ ಕಾಪಾಡಿ ಈ ಮೂಲಕ ಮಕ್ಕಳಿಗೆ ಎಲ್ಲಾ ಸೌಕರ್ಯ ಒದಗಿಸಲು ಮುಂದಾಗಿದ್ದು, ಡಿ.2 ರಂದು ಬೆಳಿಗ್ಗೆ 11ಕ್ಕೆ ದತ್ತು ಸ್ವೀಕಾರ ಸಮಾರಂಭ ನಡೆಯಲಿದೆ.ಡಾ.ಬಿ.ಆರ್.ಆಂಬೇಡ್ಕರ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪೌರಕಾರ್ಮಿಕರ ಮಕ್ಕಳು ಮತ್ತು ದಲಿತ ಸಮುದಾಯದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಇಂತಹ ಸಂಕೀರ್ಣ ಸಮಯ ದಲ್ಲಿ ಸರ್ಕಾರ, ಸ್ಥಳೀಯ, ಸಂಘ ಸಂಸ್ಥೆಗಳು, ದಾನಿಗಳು ಹಾಗೂ ಸಾರ್ವಜನಿಕರು ಶಾಲೆಗಳನ್ನು ದತ್ತು ಪಡೆದು ಶಾಲೆ ಅಭಿವೃದ್ಧಿ ಪಡಿಸುವಂತಹ ಕಾರ್ಯ ಆಗಬೇಕಿದೆ ಎಂದು ಪುರಸಭೆ ಸದಸ್ಯ ಟಿ.ದಾದಾಪೀರ್ ತಿಳಿಸಿದರು.
ತರೀಕೆರೆಯಲ್ಲಿ ಬೆರಳೆಣಿಕೆಯಷ್ಟು ಸರ್ಕಾರಿ ಶಾಲೆಗಳು ಮಾತ್ರ ಉಳಿದಿದ್ದು ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮುಂದು ವರೆಸಲು ಕಷ್ಟವಾಗುತ್ತದೆ. ಈ ದಿಸೆಯಲ್ಲಿ ತರೀಕೆರೆ ಪುರಸಭೆ ನಾನು ಈ ಹಿಂದೆ ಕೌನ್ಸಿಲ್ ಸಭೆಗೆ ನೀಡಿದ ಸಲಹೆ ಸ್ವೀಕರಿಸಿ ಆಡಳಿತ ಅನುಷ್ಠಾನಕ್ಕೆ ತರುತ್ತಿರುವುದು ಸಂತಸ ತಂದಿದೆ. ಡಾ.ಬಿ.ಆರ್.ಅಂಬೇಡ್ಕರ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಸ್ವೀಕರಿಸಿ ಶಾಲೆಗೆ ಎಲ್ಲಾ ಸೌಕರ್ಯ ಒದಗಿಸಲು ಮುಂದಾಗಿರುವುದು ಪ್ರಶಂಸನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಸಮುದಾಯದ ಸಹಭಾಗಿತ್ವದೊಂದಿಗೆ ಸರ್ಕಾರಿ ಶಾಲೆಗಳು ಅಭಿವೃದ್ಧಿ ಆಗುವುದು ಅವಶ್ಯಕ, ಈ ರೀತಿ ಶಾಲೆಗಳನ್ನು ದತ್ತು ಪಡೆದರೆ ಮೂಲಭೂತ ಸೌಕರ್ಯ, ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಸಹಕಾರಿ ಯಾಗುತ್ತದೆ. ಬೇರೆ ಶಾಲೆಗಳನ್ನು ದತ್ತು ಪಡೆಯಲು ಇದು ಪ್ರೇರಣೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ ಎಚ್.ಎ ಅಭಿಪ್ರಾಯ ಪಟ್ಟರು.
-- ಕೋಟ್--ಡಾ.ಬಿ.ಆರ್.ಆಂಬೇಡ್ಕರ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ತರೀಕೆರೆ ಪುರಸಭೆ ದತ್ತು ಸ್ವೀಕರಿಸಿ ಶಾಲೆ ಮತ್ತು ಮಕ್ಕಳಿಗೆ ಕಲಿಕೋಪಕರಣ, ಕ್ರೀಡಾ ಉಪಕರಣ ಇತ್ಯಾದಿ ಮೂಲಭೂತ ಸೌಕರ್ಯ ಒದಗಿಸಲು ಮುಂದಾಗಿ ರುವುದು ರಾಜ್ಯಕ್ಕೆ ಮಾದರಿ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು.
ವಸಂತಕುಮಾರ್ , ಅಧ್ಯಕ್ಷ , ಪುರಸಭೆ-- --
ಕರ್ನಾಟಕ ಸುವರ್ಣ ಸಂಭ್ರಮಾಚರಣೆ ನೆನಪಿಗಾಗಿ ಪುರಸಭೆ ಡಾ.ಬಿ.ಆರ್.ಆಂಬೇಡ್ಕರ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಸ್ವೀಕರಿಸುತ್ತಿರುವುದು ಸಂತೋಷದ ವಿಚಾರ. ಪಟ್ಟಣದಲ್ಲಿ ಇನ್ನೂ ಹೆಚ್ಚು ಸರ್ಕಾರಿ ಶಾಲೆ ಗಳನ್ನು ದತ್ತು ಸ್ವೀಕರಿಸಿ ಅಭಿವೃದ್ದಿ ಪಡಿಸಬೇಕುಗಿರಿಜ ಪ್ರಕಾಶ್ ವರ್ಮ, ಉಪಾಧ್ಯಕ್ಷೆ , ಪುರಸಭೆ
--2 ರಂದು ಬೆಳಿಗ್ಗೆ 11 ಗಂಟೆಗೆ ಪುರಸಭೆ ಅಧ್ಯಕ್ಷ ವಸಂತಕುಮಾರ್ ಅವರ ಅಧ್ಯಕ್ಷತೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ದತ್ತು ಸ್ವೀಕಾರ ಸಮಾರಂಭ ನಡೆಯಲಿದೆ, ಪುರಸಭೆ ಉಪಾಧ್ಯಕ್ಷೆ ಗಿರಿಜ ಪ್ರಕಾಶ್ ವರ್ಮ, ಪುರಸಭೆ ಸರ್ವ ಸದಸ್ಯರು, ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ, ಸಾರ್ವಜನಿಕರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ತಿಳಿಸಿದ್ದಾರೆ.1ಕೆಟಿಆರ್.ಕೆ.3ಃ
ತರೀಕೆರೆಯಲ್ಲಿ ಪುರಸಭೆ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಸ್ವೀಕರಿಸಲಾಗುತ್ತಿದೆ.1ಕೆಟಿಆರ್.ಕೆ.4ಃವಸಂತಕುಮಾರ್ ಪುರಸಭೆ ಅಧ್ಯಕ್ಷರು.1ಕೆಟಆರ್.ಕೆ.5ಃ
ಗಿರಿಜ ಪ್ರಕಾಶ್ ವರ್ಮ ಪುರಸಭೆ ಉಪಾಧ್ಯಕ್ಷರು1ಕೆಟಿಆರ್.ಕೆ.6ಃಎಚ್.ಪ್ರಶಾಂತ್ ಪುರಸಭೆ ಮುಖ್ಯಾಧಿಕಾರಿಗಳು