ಚಿರತೆ ಸೆರೆ ಹಿಡಿಯಲು ಕಾರ್ಯ ಪಡೆ, ಅರಣ್ಯಾಧಿಕಾರಿಗಳ ಕಾರ್ಯಾಚರಣೆ

| Published : Jun 13 2024, 12:47 AM IST

ಚಿರತೆ ಸೆರೆ ಹಿಡಿಯಲು ಕಾರ್ಯ ಪಡೆ, ಅರಣ್ಯಾಧಿಕಾರಿಗಳ ಕಾರ್ಯಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರಿನಿಂದ ಆಗಮಿಸಿರುವ ಚಿರತೆ ಟಾಸ್ಕ್ ಫೋರ್ಸ್ ಸೇರಿದಂತೆ ಐವತ್ತಕ್ಕೂ ಹೆಚ್ಚು ಸಿಬ್ಬಂದಿ ವರ್ಗದವರು ಚಿರತೆ ಚಲನವಲನ ಪತ್ತೆಗೆ 35ಕ್ಕೂ ಹೆಚ್ಚು ಕಡೆ ಕ್ಯಾಮೆರಾ ಟ್ರಾಪ್ ಆವಡಿಸಲಾಗಿದೆ.

ಕನ್ನಡಪ್ರಭ ವಾರ್ತೆ, ಹನೂರು ತಾಲೂಕಿನ ಗುಂಡಾಲ್ ಜಲಾಶಯದ ಬಿ ಆರ್ ಟಿ ಅರಣ್ಯ ಪ್ರದೇಶದ ರೈತರ ಜಮೀನುಗಳಲ್ಲಿ ಈಗಾಗಲೇ ಹತ್ತಕ್ಕೂ ಹೆಚ್ಚು ಮೇಕೆ ಕುರಿಗಳನ್ನು ತಿಂದಿರುವ ಚಿರತೆ ಸೆರೆ ಹಿಡಿಯಲು ಕಾರ್ಯ ಪಡೆ ಮತ್ತು ಅರಣ್ಯಾಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ.

ಕಳೆದ ಒಂದು ವಾರದಿಂದ ರಾತ್ರಿ ಹಗಲು ಎನ್ನದೆ ಜಮೀನುಗಳಿಗೆ ನುಗ್ಗಿ ಕೊಟ್ಟಿಗೆಯಲ್ಲಿರುವ ಮೇಕೆ ಮತ್ತು ಜಮೀನುಗಳಲ್ಲಿ ಮೇಯಲು ಬಿಟ್ಟಿದ್ದ ಸಂದರ್ಭದಲ್ಲಿ ಒತ್ತೊಯ್ಯುತ್ತಿರುವುದಿಂದ ರೈತರು ಆತಂಕಕ್ಕೀಡಾಗಿದ್ದು ಕೂಡಲೇ ಸಂಬಂಧಪಟ್ಟ ಅರಣ್ಯ ಅಧಿಕಾರಿಗಳು ಚಿರತೆ ಸೆರೆಹಿಡಿದು ಆತಂಕ ದೂರ ಮಾಡುವಂತೆ ಮನವಿ ಮಾಡಿದ್ದಾರೆ.ಚಿರತೆ ಕಾರ್ಯಪಡೆ ಆಗಮನ: ಮೈಸೂರಿನಿಂದ ಆಗಮಿಸಿರುವ ಚಿರತೆ ಟಾಸ್ಕ್ ಫೋರ್ಸ್ ಸೇರಿದಂತೆ ಐವತ್ತಕ್ಕೂ ಹೆಚ್ಚು ಸಿಬ್ಬಂದಿ ವರ್ಗದವರು ಚಿರತೆ ಚಲನವಲನ ಪತ್ತೆಗೆ 35ಕ್ಕೂ ಹೆಚ್ಚು ಕಡೆ ಕ್ಯಾಮೆರಾ ಟ್ರಾಪ್ ಆವಡಿಸಲಾಗಿದೆ ಜೊತೆಗೆ ಫೈಬರ್ ಗೇಜ್ ಹಾಗೂ ಒಂದು ತುಮಕೂರು ಗೇಜ್ 10 X 15 ಉದ್ದದ ಪಂಜರವನ್ನು ಅರಣ್ಯದಂಚಿನ ರೈತರ ಜಮೀನು ಸೇರಿದಂತೆ ಸೋಲಾರ್ ಪ್ಲಾಂಟ್ ಬಳಿ ಇಡಲಾಗಿದೆ. ಚಿರತೆ ಪತ್ತೆ ಹಚ್ಚಿರುವ 45ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ವರ್ಗ ಆ ಭಾಗದಲ್ಲಿ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.