ಅವಿಕಾ ಪ್ರೊಡಕ್ಷನ್ ಮತ್ತು ಬಿಆರ್‌ಬಿ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾಗಿರುವ ಅರ್ಜುನ್ ದೇವ್ ನಿರ್ದೇಶನ, ನಟನೆಯ ‘ಟಾಸ್’ ತುಳು ಸಿನಿಮಾ ಬಿಗ್ ಸಿನೆಮಾಸ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಾದ್ಯಂತ ಬಿಡುಗಡೆ

ಮಂಗಳೂರು: ಅವಿಕಾ ಪ್ರೊಡಕ್ಷನ್ ಮತ್ತು ಬಿಆರ್‌ಬಿ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾಗಿರುವ ಅರ್ಜುನ್ ದೇವ್ ನಿರ್ದೇಶನ, ನಟನೆಯ ‘ಟಾಸ್’ ತುಳು ಸಿನಿಮಾ ಬಿಗ್ ಸಿನೆಮಾಸ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಯಿತು.ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ದೀಪ ಬೆಳಗಿಸುವ ಮೂಲಕ ಸಿನಿಮಾಕ್ಕೆ ಚಾಲನೆ ನೀಡಿ ಮಾತನಾಡಿ, ಈ ಸಿನಿಮಾ ಕೂಡ ಕಾಂತಾರದಂತೆ ಯಶಸ್ಸು ಕಾಣಲಿ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತಾಡಿ, ತುಳುವರು ಎಲ್ಲರೂ ಥಿಯೇಟರ್‌ಗೆ ಬಂದು ಸಿನಿಮಾ ನೋಡಿದರೆ ಒಂದೊಳ್ಳೆ ಸಿನಿಮಾ ಗೆಲ್ಲುತ್ತದೆ ಎಂದರು.

ಖ್ಯಾತ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್, ಡಾ.ಶಿವಶರಣ್ ಶೆಟ್ಟಿ ಶುಭ ಹಾರೈಸಿದರು.

ಡಾ.ದೇವದಾಸ್ ಕಾಪಿಕಾಡ್, ಕದ್ರಿ ಮಣಿಕಾಂತ್, ಭೋಜರಾಜ ವಾಮಂಜೂರು, ಶರ್ಮಿಳಾ ಡಿ ಕಾಪಿಕಾಡ್, ವೀರೇಂದ್ರ ಶೆಟ್ಟಿ ಕಾವೂರು, ಗಿರೀಶ್ ಎಂ ಶೆಟ್ಟಿ ಕಟೀಲು, ಪ್ರಕಾಶ್ ತೂಮಿನಾಡ್, ಪುಷ್ಪರಾಜದ ಬೊಳ್ಳಾರ್, ಕಿಶೋರ್ ಕೊಟ್ಡಾರಿ, ರಾಕೇಶ್ ಶೆಟ್ಟಿ, ಅಶ್ವಿತ್ ಕೊಟ್ಟಾರಿ, ಮುಖೇಶ್ ಹೆಗ್ಡೆ, ಚಂದ್ರಹಾಸ ಶೆಟ್ಟಿ ರಂಗೋಲಿ, ಬಾಳ ಜಗನ್ನಾಥ ಶೆಟ್ಟಿ, ದಿನೇಶ್ ಶೆಟ್ಟಿ, ಫಯಾಜ್ ಅಭ್ದುಲ್ ರಝಾಕ್ ದುಬಾಯಿ, ಇಝಾಕ್ ಚೈತ್ರ ಶೆಟ್ಟಿ, ಸದಾಶಿವ ಅಮೀನ್, ಜೋಯಲ್ ಡಿ ಸೋಜ, ರೋಶನ್ ಶೆಟ್ಟಿ, ಚೈತ್ರಾ ಶೆಟ್ಟಿ, ಶೈಲಶ್ರೀ ಮುಲ್ಕಿ ಮತ್ತಿತರರು ಇದ್ದರು. ಜಿತೇಶ್ ಉಳಿಯ ಕಾರ್ಯಕ್ರಮ ನಿರ್ವಹಿಸಿದರು.ಟಾಸ್ ಸಿನಿಮಾ ಮಂಗಳೂರು, ಸುರತ್ಕಲ್, ಪಡುಬಿದ್ರೆ, ಉಡುಪಿ, ಮಣಿಪಾಲ, ಕುಂದಾಪುರ, ಕಾರ್ಕಳ, ದೇರಳಕಟ್ಟೆ, ಸುಳ್ಯ ಬೆಳ್ತಂಗಡಿ, ಪುತ್ರೂರು, ಸುಳ್ಯ ಸಹಿತ ಬೇರೆ ಬೇರೆ ಕಡೆಗಳಲ್ಲಿ ಬಿಡುಗಡೆಗೊಂಡಿದೆ. ಬೆಂಗಳೂರು, ಮೈಸೂರು ಮೊದಲಾದ ಕಡೆಗಳಲ್ಲೂ ಸಿನಿಮಾ ಬಿಡುಗಡೆಯಾಗಿದೆ.

ಹಣ ಕೊಟ್ಟು ಬರುವ ಪ್ರೇಕ್ಷಕರಿಗೆ ಏನೇನು ಬೇಕೋ ಎಲ್ಲವೂ ‘ಟಾಸ್’ ಸಿನಿಮಾದಲ್ಲಿದೆ ಎಂದು ನಿರ್ದೇಶಕ ಅರ್ಜುನ್ ದೇವ್ ತಿಳಿಸಿದ್ದಾರೆ.