ಕೆಟ್ಟು ನಿಂತಿದ್ದ ವಾಹನಕ್ಕೆ ಟಾಟಾ ಏಸ್ ಡಿಕ್ಕಿ: ಮೂರು ಸಾವು

| Published : Oct 17 2025, 01:02 AM IST

ಕೆಟ್ಟು ನಿಂತಿದ್ದ ವಾಹನಕ್ಕೆ ಟಾಟಾ ಏಸ್ ಡಿಕ್ಕಿ: ಮೂರು ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಕೆಟ್ಟು ನಿಂತಿದ್ದ ಟ್ರ್ಯಾಕ್ಟರ್ ಟ್ರೇಲರ್‌ಗೆ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ ಘಟನೆ ಗುರುವಾರ ರಾತ್ರಿ ತಾಲೂಕಿನ ಕಾಕೋಳ ಗ್ರಾಮದ ಹತ್ತಿರ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಂಭವಿಸಿದೆ.

ರಾಣಿಬೆನ್ನೂರು: ಕೆಟ್ಟು ನಿಂತಿದ್ದ ಟ್ರ್ಯಾಕ್ಟರ್ ಟ್ರೇಲರ್‌ಗೆ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ ಘಟನೆ ಗುರುವಾರ ರಾತ್ರಿ ತಾಲೂಕಿನ ಕಾಕೋಳ ಗ್ರಾಮದ ಹತ್ತಿರ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಂಭವಿಸಿದೆ.

ನಿಂಗಮ್ಮ ಹನುಮಂತಪ್ಪ ಜಿಗಳಿ (70), ಜಮಾನಸಾಬ ಅಲ್ಲಾಭಕ್ಷಸಾಬ (70), ಮೆಹಬೂಬಸಾಬ ದೊಡ್ಡಗುಬ್ಬಿ (70) ಎಂಬವರು ಮೃತಪಟ್ಟಿದ್ದು, ಎಲ್ಲರೂ ಹರಿಹರ ತಾಲೂಕು ಮಲೆಬೆನ್ನೂರು ಗ್ರಾಮದವರು ಎಂದು ತಿಳಿದು ಬಂದಿದೆ.ಟಾಟಾ ಏಸ್ ವಾಹನವು ಮಲೇಬೆನ್ನೂರ ಮೂಲದ್ದಾಗಿದ್ದು, ಹಾವೇರಿ ತಾಲೂಕು ವೆಂಕಟಾಪುರ ಗ್ರಾಮದಿಂದ ನಿಶ್ಚಿತಾರ್ಥ ಕಾರ್ಯಕ್ರಮ ಮುಗಿಸಿ ವಾಪಸ್ ತಮ್ಮ ಊರಿಗೆ ಹಿಂದಿರುತ್ತಿರುವಾಗ ಅಪಘಾತ ಸಂಭವಿಸಿದೆ.

ಘಟನೆಯಲ್ಲಿ ಟಾಟಾ ಏಸ್ ವಾಹನದಲ್ಲಿದ್ದ ಒಬ್ಬ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಇಬ್ಬರು ಸಾವನ್ನಪ್ಪಿದ್ದಾರೆ. 18-20 ಜನರಿಗೆ ಗಾಯಗಳಾಗಿದ್ದು, ಅವರನ್ನು ದಾವಣಗೆರೆ ಮತ್ತು ಹಾವೇರಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.

ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಹಾಗೂ ಗಾಯಗೊಂಡವರ ವಿವರ ತಿಳಿದು ಬಂದಿಲ್ಲ.