ಟಾಟಾ ಕಂಪನಿ ಕ್ರಿಮಿನಾಶಕ ಬಳಸಲು ಸಲಹೆ

| Published : Jan 12 2025, 01:20 AM IST

ಸಾರಾಂಶ

ರೈತರಿಗೆ ಟಿಎಪಿಸಿಎಂಎಸ್‌ನಿಂದ ವಿಮೆ ಮಾಡಿಸಿಕೊಡಲು ಹೇಳಿ ದಾಖಲೆಗಳನ್ನು ತಂದುಕೊಡಲು ಹೇಳಿದರೆ, ಕೆಲವರು ದಾಖಲೆಗಳನ್ನು ಸಲ್ಲಿಸಿದರೆ ಮತ್ತೆ ಕೆಲವರು ಇದುವರೆಗೂ ದಾಖಲೆಗಳನ್ನು ನೀಡಿಲ್ಲ. ಮತ್ತೆ ಕೆಲವರು ವಿಮಾ ಕಾರ್ಡುಗಳನ್ನು ಪಡೆಯಲು ಬಂದಿಲ್ಲ. ಈ ರೀತಿಯಲ್ಲಿ ರೈತರು ತಿರಸ್ಕಾರ ಮಾಡುವುದು ಸರಿಯಲ್ಲ

ಕನ್ನಡಪ್ರಭ ವಾರ್ತೆ ಮುಳಬಾಗಿಲುಮಾವು ಬೆಳೆಗಾರರು ದೇಶದ ಟಾಟಾ ಕಂಪನಿಯ ಕ್ರಿಮಿನಾಶಕಗಳು ಹಾಗೂ ಔಷಧಗಳನ್ನು ಬಳಕೆ ಮಾಡಿದರೆ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಆಗುವುದಿಲ್ಲ ಎಂದು ಮುಳಬಾಗಿಲು ಟಿಎಪಿಸಿಎಂಎಸ್ ಅಧ್ಯಕ್ಷ ಕೊತ್ತೂರು ಜಿ.ಮಂಜುನಾಥ್ ಹೇಳಿದರು.ನಗರದ ಖಾಸಗಿ ಕಾಲ್ಯಾಣ ಮಂಟಪದಲ್ಲಿ ಟಿಎಪಿಸಿಎಂಎಸ್ ಹಾಗೂ ಟಾಟಾ ಕಂಪನಿಯಿಂದ ಮಾವು ಬೆಳೆಗಾರರಿಗೆ ಕ್ರಿಮಿನಾಶಕಗಳ ಸಿಂಪಡಣೆ ಕುರಿತು ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.ಕೃಷಿ ಪರಿಕರಗಳ ಮಾರಾಟ

ಈಗಾಗಲೇ ಟಿಎಪಿಸಿಎಂಎಸ್ ಮೂಲಕ ಇ-ಸ್ಟಾಂಪ್ ಪೇಪರ್, ಶೈಕ್ಷಣಿಕ ಸಲಕರಣೆಗಳು, ಕೃಷಿ ಚಟುವಟಿಕೆಗಳಿಗೆ ಪ್ಲಾಸ್ಟಿಕ್ ಮಲ್ಚಿಂಗ್ ಪೇಪರ್, ರಸಗೊಬ್ಬರಗಳು ಮತ್ತಿತರ ಸಲಕರಣೆಗಳನ್ನು ವಿತರಿಸುತ್ತಿದ್ದು, ಇಂದಿನಿಂದ ಟಾಟಾ ಕಂಪನಿಯ ಕ್ರಿಮಿನಾಶಕಗಳು ಹಾಗೂ ಔಷಧಗಳನ್ನೂ ಸಹ ವಿತರಿಸುತ್ತಿದ್ದು ತಾಲ್ಲೂಕು ರೈತರು ಸದುಪಯೋಗ ಪಡಿಸಿಕೊಂಡು ಕೃಷಿಯಲ್ಲಿ ಲಾಭಗಳಿಸಬೇಕು ಎಂದು ಹೇಳಿದರು.ವಿಮೆಗೆ ತಾತ್ಸಾರ ಸಲ್ಲ

ರೈತರಿಗೆ ಟಿಎಪಿಸಿಎಂಎಸ್‌ನಿಂದ ವಿಮೆ ಮಾಡಿಸಿಕೊಡಲು ಹೇಳಿ ದಾಖಲೆಗಳನ್ನು ತಂದುಕೊಡಲು ಹೇಳಿದರೆ, ಕೆಲವರು ದಾಖಲೆಗಳನ್ನು ಸಲ್ಲಿಸಿದರೆ ಮತ್ತೆ ಕೆಲವರು ಇದುವರೆಗೂ ದಾಖಲೆಗಳನ್ನು ನೀಡಿಲ್ಲ. ಮತ್ತೆ ಕೆಲವರು ವಿಮಾ ಕಾರ್ಡುಗಳನ್ನು ಪಡೆಯಲು ಬಂದಿಲ್ಲ. ಈ ರೀತಿಯಲ್ಲಿ ರೈತರು ತಿರಸ್ಕಾರ ಮಾಡುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಈ ವೇಳೆ ಟಾಟಾ ಔಷಧಗಳ ಕಂಪನಿಯವರು ಮಾವು ಬೆಳೆಗಾರ ಮಾವಿನ ಗಿಡಗಳು ಹಾಗೂ ಮರಗಳಿಗೆ ಕ್ರಿಮಿನಾಶಕಗಳನ್ನು ಸಿಂಪಡಣೆ ಮಾಡುವ ವಿಧಾನಗಳ ಕುರಿತು ಪ್ರಾಯೋಗಿಕವಾಗಿ ಮಾಹಿತಿ ನೀಡಿದರು.ಟಿಎಪಿಸಿಎಂಎಸ್ ಉಪಾಧ್ಯಕ್ಷೆ ಕವಿತಾ, ಆಲಂಗೂರು ಶಿವಶಂಕರ್, ಸುಬ್ರಮಣಿ, ತ್ರಿವೇಣಮ್ಮ, ರಾಜಣ್ಣ ಇದ್ದರು.