ಸಾರಾಂಶ
ರಾಣಿಬೆನ್ನೂರು: ತತ್ವಪದಗಳು ಮನುಷ್ಯನನ್ನು ಆಧ್ಯಾತ್ಮಿಕ ಜೀವನಕ್ಕೆ ಹಚ್ಚುತ್ತವೆ ಎಂದು ಹಿರೇಕೆರೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ಕಾಂತೇಶರೆಡ್ಡಿ ಗೋಡಿಹಾಳ ಹೇಳಿದರು. ತಾಲೂಕಿನ ಹಲಗೇರಿ ಗ್ರಾಮದ ತಾಲೂಕಿನ ಹಲಗೇರಿ ಗ್ರಾಮದ ಪುಟ್ಟಯ್ಯನ ಮಠ ಆವರಣದಲ್ಲಿ ಏರ್ಪಡಿಸಲಾಗಿರುವ ನಗರದ ಬಸವ ಚೇತನ ಬಿ ಇಡಿ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದಲ್ಲಿ ಅವರು ಮಾತನಾಡಿದರು. ಜೀವನವನ್ನು ಸಾರ್ಥಕ ಪಡಿಸಿಕೊಳ್ಳಲು ತತ್ವ ಪದ್ಯಗಳು ಸಹಕಾರಿಯಾಗಿವೆ. ತತ್ವಪದ ಸಾಹಿತ್ಯ ಕೇಳುವುದಕ್ಕೂ ಸಹ ಮಧುರವಾಗಿವೆ. ಅವು ಸ್ವರ ತಾಳ ಮೇಳದೊಂದಿಗೆ ಇಂದು ಭಜನಾ ಪದಗಳಾಗಿ ಮಾರ್ಪಟ್ಟಿದೆ. ಪ್ರತಿ ಹಳ್ಳಿಗಳಲ್ಲಿಯೂ ಭಜನಾ ಕಲಾವಿದರು ತತ್ವಪದಗಳನ್ನು ಜೀವಂತವಾಗಿಟ್ಟಿದ್ದಾರೆ ಎಂದರು.ಬಿಎಜೆಎಸ್‌ಎಸ್ ಕಾಲೇಜಿನ ಉಪನ್ಯಾಸಕ ಎಂ.ಡಿ. ಹೊನ್ನಮ್ಮನವರ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಶಿಬಿರಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಿವೆ. ಸಮಾಜದ ಹಾಗೂ ಹೋಗುಗಳ ಬಗ್ಗೆ ತಿಳಿದುಕೊಳ್ಳಲು ಸಹಕಾರಿಯಾಗಿವೆ ಎಂದರು.ಕಾಲೇಜಿನ ಪ್ರಾ. ಗಿರಿಜಾ ಬೇವಿನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಜ್ಯೋತಿ ಕಟ್ಟಿಮನಿ, ಪವಿತ್ರ ಯಡಚಿ, ಕೃಷ್ಣ ಯರಬಾಳ, ರೇಖಾ ಬೇಲೂರ, ಹಾಲೇಶ ಓಲೇಕಾರ ಉಪಸ್ಥಿತರಿದ್ದರು.