ಟ್ಯಾಕ್ಸ್‌ ಕಟ್ಟಲು ರಿಯಾಯ್ತಿ: 15 ದಿನದಲ್ಲಿ ₹2.20 ಕೋಟಿ ಸಂಗ್ರಹ

| Published : Apr 17 2025, 12:10 AM IST

ಟ್ಯಾಕ್ಸ್‌ ಕಟ್ಟಲು ರಿಯಾಯ್ತಿ: 15 ದಿನದಲ್ಲಿ ₹2.20 ಕೋಟಿ ಸಂಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಪ್ರಸಕ್ತ ಸಾಲಿನ ಆರ್ಥಿಕ ವರ್ಷದ ಆರಂಭದಲ್ಲೇ ಚಿಕ್ಕಮಗಳೂರು ನಗರಸಭೆಗೆ ನಿರೀಕ್ಷೆಗೂ ಮೀರಿ ತೆರಿಗೆ ಸಂಗ್ರಹವಾಗಿದೆ. ಬರೀ 15 ದಿನಗಳಲ್ಲಿ ₹2.20 ಕೋಟಿ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ₹1.74 ಕೋಟಿ ಸಂಗ್ರಹವಾಗಿತ್ತು. ಅಂದರೆ ಸುಮಾರು ₹50 ಲಕ್ಷ ಹೆಚ್ಚಾಗಿ ಟ್ಯಾಕ್ಸ್‌ ಸಂಗ್ರಹವಾಗಿದೆ ಎಂದು ನಗರಸಭೆ ಪೌರಾಯುಕ್ತ ಬಿ.ಸಿ. ಬಸವರಾಜ್‌ ತಿಳಿಸಿದ್ದಾರೆ.

ತೆರಿಗೆ ಕಟ್ಟಲು ಮುಗಿ ಬಿದ್ದ ಜನ । ಈ ವರ್ಷದಲ್ಲಿ ₹19.92 ಕೋಟಿ ಸಂಗ್ರಹದ ಗುರಿ । ಚಿಕ್ಕಮಗಳೂರು ನಗರಸಭೆ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಪ್ರಸಕ್ತ ಸಾಲಿನ ಆರ್ಥಿಕ ವರ್ಷದ ಆರಂಭದಲ್ಲೇ ಚಿಕ್ಕಮಗಳೂರು ನಗರಸಭೆಗೆ ನಿರೀಕ್ಷೆಗೂ ಮೀರಿ ತೆರಿಗೆ ಸಂಗ್ರಹವಾಗಿದೆ. ಬರೀ 15 ದಿನಗಳಲ್ಲಿ ₹2.20 ಕೋಟಿ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ₹1.74 ಕೋಟಿ ಸಂಗ್ರಹವಾಗಿತ್ತು. ಅಂದರೆ ಸುಮಾರು ₹50 ಲಕ್ಷ ಹೆಚ್ಚಾಗಿ ಟ್ಯಾಕ್ಸ್‌ ಸಂಗ್ರಹವಾಗಿದೆ ಎಂದು ನಗರಸಭೆ ಪೌರಾಯುಕ್ತ ಬಿ.ಸಿ. ಬಸವರಾಜ್‌ ತಿಳಿಸಿದ್ದಾರೆ.

2024-25ನೇ ಸಾಲಿನಲ್ಲಿ ನಗರಸಭೆ ₹19.34 ಕೋಟಿ ತೆರಿಗೆ ಸಂಗ್ರಹದ ಗುರಿ ಹೊಂದಿದ್ದು, ಈ ಪೈಕಿ ₹15.37 ಕೋಟಿ ರುಪಾಯಿ ಸಂಗ್ರಹವಾಗಿತ್ತು. ಈ ವರ್ಷ ಅಂದರೆ 2025-26 ನೇ ಸಾಲಿನಲ್ಲಿ ₹19.92 ಕೋಟಿ ರುಪಾಯಿ ಸಂಗ್ರಹದ ಗುರಿ ಯನ್ನು ಹೊಂದಲಾಗಿದ್ದು, ಏಪ್ರಿಲ್‌ 1 ರಿಂದ 15 ರವರೆಗೆ ₹2.20 ಕೋಟಿ ರುಪಾಯಿ ಸಂಗ್ರಹವಾಗಿದೆ ಎಂದು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಚಿಕ್ಕಮಗಳೂರು ನಗರಸಭೆ ವ್ಯಾಪ್ತಿಯಲ್ಲಿ ನಗರಸಭೆಯಲ್ಲಿ ಖಾತೆಯಾಗಿರುವ ಸುಮಾರು 35 ಸಾವಿರ ಸ್ವತ್ತುಗಳು ಇವೆ. ಇವುಗಳಲ್ಲಿ ಸುಮಾರು 22 ಸಾವಿರ ಮನೆಗಳು ಇದ್ದರೆ, 4 ಸಾವಿರ ವಾಣಿಜ್ಯ ಕಟ್ಟಡಗಳು ಇವೆ. ಇವುಗಳೆಲ್ಲವೂ ಇ-ಖಾತೆ ಯಾಗಿವೆ. ಇನ್ನುಳಿದ ಸ್ವತ್ತುಗಳನ್ನು ಇ- ಖಾತೆ ಅಭಿಯಾನದ ಮೂಲಕ ಖಾತೆ ಮಾಡಿಸಲಾಗುತ್ತಿದೆ.

ಏಪ್ರಿಲ್‌ ತಿಂಗಳಲ್ಲಿ ತೆರಿಗೆ ಕಟ್ಟುವವರಿಗೆ ಶೇ. 5 ರಷ್ಟು ಸರ್ಕಾರ ರಿಯಾಯ್ತಿ ನೀಡಿದ್ದು ಇದರ ಪ್ರಯೋಜನ ಪಡೆಯಲು ಜನರು ನಿರೀಕ್ಷೆಗೂ ಮೀರಿ ಮುಂದೆ ಬರುತ್ತಿದ್ದಾರೆ. ಖಾಲಿ ಹೊಡೆಯುತ್ತಿದ್ದ ಇಲ್ಲಿನ ಬ್ಯಾಂಕ್‌ ಕೌಂಟರ್‌ ಮುಂದೆ ಹಣ ಕಟ್ಟಲು ಜನರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಹಿರಿಯ ನಾಗರಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಸ್ಥಳದಲ್ಲಿ ಕುಳಿತುಕೊಳ್ಳಲು ಶಾಮಿಯಾನ ಹಾಕಿ, ಛೇರ್‌ಗಳನ್ನು ಸಹ ಹಾಕಿಲಾಗಿದೆ. ಜತೆಗೆ ಸ್ಥಳದಲ್ಲೇ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

--- ಬಾಕ್ಸ್‌ ----

ಇ- ಖಾತೆ ಅಭಿಯಾನ

ಚಿಕ್ಕಮಗಳೂರು ನಗರಸಭೆ ವ್ಯಾಪ್ತಿಯಲ್ಲಿ ಹಲವು ನಿವೇಶನ ಹಾಗೂ ಮನೆಗಳು ಇ- ಖಾತೆ ಆಗಿಲ್ಲ. ಅದ್ದರಿಂದ ಇ- ಖಾತೆ ಅಭಿಯಾನ ನಡೆಸಲಾಗುತ್ತಿದೆ. ಮನೆ ಮನೆಗಳಿಗೆ ತೆರಳಿ ಇ-ಖಾತೆ ಮಾಡಿಸಿಕೊಡಲಾಗುತ್ತಿದೆ ಎಂದು ಬಿ.ಸಿ. ಬಸವರಾಜ್‌ ತಿಳಿಸಿದರು.

ಕ್ರಮ ಪತ್ರ, ಆಧಾರ್‌ ಕಾರ್ಡ್‌ ಅಥವಾ ಪಾನ್‌ ಕಾರ್ಡ್‌, ಅರ್ಜಿ, ಇಸಿಯನ್ನು ಮನೆಗೆ ಬರುವ ಸಿಬ್ಬಂದಿಗೆ ಕೊಟ್ಟರೆ ಎರಡೇ ದಿನದಲ್ಲಿ ಇ- ಖಾತೆ ವಿತರಿಸಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

--

ಬಿ- ಖಾತೆ ಅಭಿಯಾನ

ನಗರಸಭೆ ವ್ಯಾಪ್ತಿಯಲ್ಲಿ ಕಂದಾಯ ಜಾಗದಲ್ಲಿ ಸುಮಾರು 4 ಸಾವಿರ ಮನೆಗಳು ಹಾಗೂ 2 ಸಾವಿರ ಸೈಟ್‌ಗಳು ಇವೆ. ಇವು ಗಳು ನಗರಸಭೆಯಿಂದ ಎಲ್ಲಾ ರೀತಿ ಮೂಲಭೂತ ಸವಲತ್ತು ಪಡೆದುಕೊಳ್ಳುತ್ತಿವೆ. ಆದರೆ, ನಗರಸಭೆಗೆ ತೆರಿಗೆ ಪಾವತಿ ಮಾಡುತ್ತಿಲ್ಲ. ಹಾಗಾಗಿ ರಾಜ್ಯ ಸರ್ಕಾರ ಬಿ- ಖಾತೆ ಮಾಡಿಕೊಡಲು ಆದೇಶ ಹೊರಡಿಸಿದೆ ಎಂದು ಹೇಳಿದರು.

2024ರ ಸೆಪ್ಟಂಬರ್‌ ಮಾಹೆ ಹಿಂದೆ ಸ್ವತ್ತು ಖರೀದಿ ಮಾಡಿ ನೋಂದಣಿ ಕಚೇರಿಯಲ್ಲಿ ರಿಜಿಸ್ಟ್ರರ್‌ ಆಗಿದ್ದರೆ ಅವರ ನಗರಸಭೆಗೆ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿದರೆ ಒಮ್ಮೆ ಮಾತ್ರ ಡಬಲ್‌ ಕಂದಾಯ ಕಟ್ಟಿಸಿಕೊಂಡು ಬಿ- ಖಾತೆ ಮಾಡಿಕೊಡ ಲಾಗುವುದು. ಮುಂದಿನ ವರ್ಷಗಳಲ್ಲೇ ಸಿಂಗಲ್‌ ಕಂದಾಯ ಮಾತ್ರ ಕಟ್ಟಬೇಕು. ಇದಕ್ಕೆ ಮೇ 10 ರ ವರೆಗೆ ಮಾತ್ರ ಕಾಲಾವ ಕಾಶ ನೀಡಲಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು. ನಿಗದಿತ ಅವಧಿ ನಂತರ ಬರುವ ಅರ್ಜಿಗಳನ್ನು ಮಾನ್ಯ ಮಾಡುವುದಿಲ್ಲ. ಬರೀ ಇಷ್ಟೆ ಅಲ್ಲಾ ಸಂಬಂಧಪಟ್ಟ ಸ್ವತ್ತಿಗೆ ನೀಡಲಾಗಿರುವ ಕುಡಿಯುವ ನೀರು, ಯುಜಿಡಿ ಸೇರಿದಂತೆ ಮೂಲಭೂತ ಸವಲತ್ತು ಕಡಿತಗೊಳಿಸಲಾಗುವುದು ಎಂದು ಹೇಳಿದರು.

--

ಬಿ.ಸಿ. ಬಸವರಾಜ್‌ಪೋಟೋ ಫೈಲ್‌ ನೇಮ್‌ 16 ಕೆಸಿಕೆಎಂ 1

-ಚಿಕ್ಕಮಗಳೂರು ನಗರಸಭೆ.ಪೋಟೋ ಫೈಲ್‌ ನೇಮ್‌ 16 ಕೆಸಿಕೆಎಂ 2