ಸಾರಾಂಶ
ತಿಪಟೂರು: ತಾಲೂಕು ಭಾರತೀಯ ಜನತಾ ಪಕ್ಷದ ವತಿಯಿಂದ ನಗರದ ಸಿಂಗ್ರಿ ನಂಜಪ್ಪ ವೃತ್ತದ ಬಳಿ ಕೇಂದ್ರ ಸರ್ಕಾರದ ತೆರಿಗೆ ಇಳಿಕೆ ಅಂಗವಾಗಿ ಸಂಭ್ರಮಾಚರಣೆ ಮಾಡಲಾಯಿತು. ಈ ವೇಳೆ ಬಿಜೆಪಿ ಮುಖಂಡ ಗಂಗರಾಜು ಮಾತನಾಡಿ, ನವರಾತ್ರಿ ಆರಂಭದ ದಿನವೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದಿನ ಬಳಕೆ ವಸ್ತುಗಳ ತೆರಿಗೆಯನ್ನು ಇಳಿಕೆ ಮಾಡುವ ಮೂಲಕ ದೇಶದ ಜನರಿಗೆ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿದೆ. ಅಡುಗೆ ಮನೆ ಸಾಮಗ್ರಿಗಳಿಂದಿಡಿದು ಗೃಹ ಉಪಯೋಗಿ ವಸ್ತುಗಳು, ಎಲೆಕ್ಟ್ರಾನಿಕ್ ವಸ್ತುಗಳು, ಕಾರು, ಬೈಕ್, ಟಿವಿ, ಅಗತ್ಯ ಔಷಧಿಗಳು, ಕೃಷಿ ಉಪಕರಣಗಳು, ನಂದಿನಿ ಹಾಲಿನ ಉತ್ಪನ್ನಗಳ ದರ ಕಡಿಮೆ ಮಾಡಿದೆ. ಇದರಿಂದ ಜನ ಸಾಮನ್ಯರ ಜೇಬಿನ ಬಾರ ತಗ್ಗಿದ್ದು ಇಷ್ಟಪಡುವ ವಸ್ತುಗಳನ್ನು ಸುಲಭವಾಗಿ ಖರೀದಿ ಮಾಡಲು ಸಾಧ್ಯವಾಗಿದ್ದು ಜೊತೆಗೆ ನೆಮ್ಮದಿಯಿಂದ ಬದುಕು ನಡೆಸಬಹುದಾಗಿದೆ. ದೇಶದೆಲ್ಲೆಡೆ ಮೋದಿಯವರ ಈ ಒಂದು ಮಹತ್ವ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಸಿಂಗ್ರಿದತ್ತಪ್ರಸಾದ್, ಬಿಸ್ಲೇಹಳ್ಳಿ ಜಗದೀಶ್, ವಿಶ್ವದೀಪ, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಸತೀಶ್, ನಗರಾಧ್ಯಕ್ಷ ಜಗದೀಶ್, ಜಗಜ್ಯೋತಿ ಲಿಂಗರಾಜು, ಕೆ.ಎಸ್.ಸದಾಶಿವಯ್ಯ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
ತಿಪಟೂರು: ತಾಲೂಕು ಭಾರತೀಯ ಜನತಾ ಪಕ್ಷದ ವತಿಯಿಂದ ನಗರದ ಸಿಂಗ್ರಿ ನಂಜಪ್ಪ ವೃತ್ತದ ಬಳಿ ಕೇಂದ್ರ ಸರ್ಕಾರದ ತೆರಿಗೆ ಇಳಿಕೆ ಅಂಗವಾಗಿ ಸಂಭ್ರಮಾಚರಣೆ ಮಾಡಲಾಯಿತು.