ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ
ಭಾರತ ದೇಶ ವಿಶ್ವಮಟ್ಟದಲ್ಲಿ ಪ್ರಭಲ ರಾಷ್ಟ್ರವಾಗುತ್ತಿರುವುದನ್ನು ಸಹಿಸದ ಅಮೆರಿಕಾ ದೇಶ ಈಗ ತೆರಿಗೆ ಯುದ್ಧವನ್ನು ಪ್ರಾರಂಭಿಸಿದೆ ಇಂತಹ ಸವಾಲುಗಳನ್ನು ದೇಶದ ಎಲ್ಲಾ ಜನತೆ ಧೈರ್ಯದಿಂದ ಎದುರಿಸಬೇಕು ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.ಶುಕ್ರವಾರ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಗರದ ಶ್ರೀ ವಿವೇಕಾನಂದ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ೭೯ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಾರತದ ಮೇಲೆ ಒಂದು ಕಡೆ ಪಾಕಿಸ್ತಾನ ಲೋಹದ ಯುದ್ಧ ಮತ್ತೊಂದು ಕಡೆ ಅಮೆರಿಕಾ ಅಧಿಕ ತೆರಿಗೆ ಯುದ್ಧ ನಡೆಸುತ್ತಿವೆ. ನಾವು ತಂತ್ರಜ್ಞಾನದಲ್ಲಿ ಪ್ರಪಂಚದಲ್ಲೇ ಮುಂದಿದ್ದೇವೆ. ಭಾರತೀಯರ ಬುದ್ಧಿವಂತಿಕೆ ಯಾರಲ್ಲೂ ಇಲ್ಲ. ನಾವು ಸ್ವಾಭಿಮಾನ ಬೆಳೆಸಿಕೊಳ್ಳಬೇಕು. ನಾವು ಸವಾಲುಗಳನ್ನು ಧೈರ್ಯದಿಂದ ಎದುರಿಸೋಣ. ನಮ್ಮ ದೇಶಕ್ಕೆ ಭವಿಷ್ಯ ಇದೆ ಎಂದರು.ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ ಗೌಡ ಮಾತನಾಡಿ, ಭಾರತೀಯರು ಇಂದು ನೆಮ್ಮದಿಯಿಂದ ಸುರಕ್ಷಿತರಾಗಿರಲು ಸೈನಿಕರು ಕಾರಣ. ನಾವೆಲ್ಲರೂ ದೇಶದ ಸೈನಿಕರನ್ನು ಗೌರವಿಸೋಣ. ಇತ್ತೀಚೆಗೆ ವಿದ್ಯಾವಂತ ನಾಯಕರೇ ದೇಶಕ್ಕೆ ಮಾರಕವಾಗುತ್ತಿದ್ದಾರೆ. ಪೋಷಕರು ಮನೆಯಲ್ಲಿ ಮಕ್ಕಳಿಗೆ ನಮ್ಮ ದೇಶದ ಆಚಾರ ವಿಚಾರ ತಿಳಿಸಬೇಕು. ಯುವ ಪೀಳಿಗೆಯನ್ನು ಸರಿ ದಾರಿಯಲ್ಲಿ ನಡೆಸುವ ಜವಾಬ್ದಾರಿ ಎಲ್ಲರ ಮೇಲಿದೆ. ಇತ್ತೀಚೆಗೆ ಡ್ರಗ್ಸ್, ಮೊಬೈಲ್ ಹಾವಳಿ ಹೆಚ್ಚಾಗಿದೆ ಇದಕ್ಕೆ ಕಡಿವಾಣ ಹಾಕಬೇಕಿದೆ. ನಾವೆಲ್ಲರೂ ಆತ್ಮ ನಿರ್ಭರ ಮೂಲಕ ಬೇರೆ ದೇಶಗಳನ್ನು ಹಿಮ್ಮೆಟ್ಟಿಸಬೇಕು. ದೇಶದ ಪ್ರತಿಯೊಂದು ಕುಟುಂಬವೂ ಸ್ವಾವಲಂಬಿಯಾಗಬೇಕು ಎಂದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಾಲೂಕು ದಂಡಾಧಿಕಾರಿ ಆನಂದ ಕುಮಾರ್ ಮಾತನಾಡಿ, ನಮ್ಮ ದೇಶ ಎಲ್ಲಾ ರಂಗದಲ್ಲೂ ಪ್ರಗತಿ ಸಾಧಿಸಿದ್ದೇವೆ. ಕೃಷಿ ರಂಗ, ವಿಜ್ಞಾನ, ತಂತ್ರಜ್ಞಾನದಲ್ಲೂ ಮುಂದಿದ್ದೇವೆ. ಚಂದ್ರಯಾನ, ಮಂಗಳಯಾದಲ್ಲೂ ನಾವು ಯಶಸ್ವಿಯಾಗಿದ್ದೇವೆ. ಭಾರತವು ಬೇರೆ ರಾಷ್ಟ್ರಗಳಿಗೆ ಮಾದರಿಯಾಗಿದೆ ಎಂದರು.ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ, ಹಾಗೂ ಪತ್ರಕರ್ತರಾಗಿ ಸೇವೆ ಸಲ್ಲಿಸಿದ ಫಕೃದ್ಧಿನ್ ಬಾಬು ಹಾಗೂ ಬಿ.ಜಿ. ಬಾಲಕೃಷ್ಣೇಗೌಡ ಅವರಿಗೆ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಹರೀಶ್.ಆರ್ ನಗರಸಭೆ ಅಧ್ಯಕ್ಷ ಜಿಷಾನ್ ಮೊಹಮದ್, ಉಪಾಧ್ಯಕ್ಷ ಲಕ್ಷ್ಮಿಕಾಂತ್, ಸ್ಥಾಯಿ ಸಮಿತಿ ಅಧ್ಯಕ್ಷ ಅಜಯ್ ಕುಮಾರ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಗುಳಿಗೇನಹಳ್ಳಿ ನಾಗರಾಜು, ಶಿರಾ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪಿ ಆರ್ ಮಂಜುನಾಥ್, ನಗರಸಭಾ ಸದಸ್ಯ ಬುರಾನ್ ಮೊಹಮದ್, ಸಫಿರ್, ರಾಧಾಕೃಷ್ಣ , ಪೌರಾಯುಕ್ತ ರುದ್ರೇಶ್.ಕೆ, ಡಿವೈಎಸ್ಪಿ ಶೇಖರ್, ಸಹಾಯಕ ಕೃಷಿ ನಿರ್ದೇಶಕ ಎಚ್ ನಾಗರಾಜು, ವಲಯ ಅರಣ್ಯಾಧಿಕಾರಿ ನವನೀತ್, ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಡಿ ಎಂ ಗೌಡ, ಆಶ್ರಯ ಸಮಿತಿ ಸದಸ್ಯರಾದ ವಾಜರಹಳ್ಳಿ ರಮೇಶ್, ನೂರುದ್ದೀನ್, ಮಂಜುನಾಥ್, ಜಯಲಕ್ಷ್ಮೀ, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ನಾಗರಾಜು, ಹಿರಿಯ ತೋಟಗಾರಿಕಾ ನಿರ್ದೇಶಕ ಸುಧಾಕರ್, ಬಿಇಓ ಕೃಷ್ಣಪ್ಪ, ವಕೀಲರ ಸಂಘದ ಅಧ್ಯಕ್ಷ ಎಚ್ ಗುರುಮೂರ್ತಿ ಗೌಡ, ನಗರ ಸರ್ಕಲ್ ಇನ್ಸಪೆಕ್ಟರ್ ಮಂಜೇಗೌಡ, ಪಿಸ್ಐ ರೇಣುಕಾ ಯಾದವ್, ನಟರಾಜ್ ಬರಗೂರು, ಸೇರಿದಂತೆ ಹಲವರು ಹಾಜರಿದ್ದರು.