ವಿರಾಜಪೇಟೆ ಟ್ಯಾಕ್ಸಿ ಚಾಲಕರೊಬ್ಬರು ಅರಮೇರಿ ಗ್ರಾಮದ ನಾಲ್ಕನೇ ಮೈಲಿಯ ತನ್ನ ಗದ್ದೆಯಲ್ಲಿ ಸ್ವಂತ ಒಂಟಿ ನಳಿಗೆ ಕೋವಿಯಿಂದ ಮಂಗಳವಾರ ಬೆಳಗ್ಗಿನ ಜಾವ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿರಾಜಪೇಟೆ: ಇಲ್ಲಿನ ಟ್ಯಾಕ್ಸಿ ಚಾಲಕರೊಬ್ಬರು ಅರಮೇರಿ ಗ್ರಾಮದ ನಾಲ್ಕನೇ ಮೈಲಿಯ ತನ್ನ ಗದ್ದೆಯಲ್ಲಿ ಸ್ವಂತ ಒಂಟಿ ನಳಿಗೆ ಕೋವಿಯಿಂದ ಮಂಗಳವಾರ ಬೆಳಗ್ಗಿನ ಜಾವ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಿರಿಯಕಂಡ ಪೊನ್ನಪ್ಪ ಅವರ ಪುತ್ರ ಡಾಲುನಂಜಪ್ಪ (62) ಸೋಮವಾರ ಬೆಳಗ್ಗೆ ಆರೋಗ್ಯ ಸಮಸ್ಯೆ ಎದುರಾಗಿದ್ದು, ವಿರಾಜಪೇಟೆ ಸರ್ಕಾರಿ ಆಸ್ಪತ್ರೆ ಯಲ್ಲಿ ತಪಾಸಣೆ ನಡೆಸಿಕೊಂಡು ಮನೆಗೆ ಮರಳಿದ್ದಾರೆ.

ಪತ್ನಿ ಸರ್ಕಾರಿ ಶಾಲೆ ಶಿಕ್ಷಕಿ ಡಾಲು ಅವರಿಂದ ವಿವಾಹ ವಿಚ್ಛೇದನೆ ಪಡೆದು ಪುತ್ರಿಯೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.

ತನ್ನ ಆರೋಗ್ಯ ಸಮಸ್ಯೆಯಿಂದ ಮನನೊಂದ ಡಾಲು ಅವರು ಬೆಳಗ್ಗೆ ತನ್ನ ಗದ್ದೆಯಲ್ಲಿ ಗುಂಡು ಹಾರಿಸಿ ಕೊಂಡು ಆತ್ಮಹತ್ಯೆ ಗೆ ಶರಣಾಗಿದ್ದು, ಬೆಳಗ್ಗೆ 8 ಗಂಟೆಗೆ ಪಕ್ಕದ ತೋಟಕ್ಕೆ ಕಾಫಿ ಕೊಯ್ಲಿಗೆ ತೆರಳಿದ್ದ ವ್ಯಕ್ತಿಗಳು ಗದ್ದೆಯಲ್ಲಿ ಕೋವಿ ಸಹಿತ ಡಾಲು ಬಿದ್ದಿದ್ದನ್ನು ಗಮನಿಸಿ ವಿರಾಜಪೇಟೆ ಗ್ರಾಮಾಂತರ ಠಾಣೆಗೆ ವಿಷಯ ತಿಳಿಸಿದ್ದಾರೆ.

ತಕ್ಷಣ ಆಗಮಿಸಿ ವಿರಾಜಪೇಟೆ ಗ್ರಾಮಾಂತರ ಠಾಣೆ ಅಧಿಕಾರಿ ಲತಾ ಘಟನಾ ಸ್ಥಳಕ್ಕೆ ಭೇಟಿ ನೀಡಿ ಜಿಲ್ಲಾ ಪೊಲೀಸ್ ವರಿಷ್ಠಾಧಕಾರಿಗಳಿಗೆ ಮಾಹಿತಿ ನೀಡಿದ್ದಾರೆ.ಎಸ್ಪಿ ಸಿಂದುಮಣಿ, ವಿರಾಜಪೇಟೆ ಡಿವೈಎಸ್ಪಿ ಮಹೇಶ್ ಕುಮಾರ್. ವೃತ್ತ ನೀರಿಕ್ಷಕ ಅನುಪ್ ಮಾದಪ್ಪ ಅವರು ಆಗಮಿಸಿ ಮೃತದೇಹವನ್ನು ವೀಕ್ಷಣೆ ಮಾಡಿ ಮೃತದೇಹವನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ಕುಟುಂಬದ ಸದಸ್ಯರಿಗೆ ಮೃತ ದೇಹವನ್ನು ಹಸ್ತಾಂತರ ಮಾಡಿದರು.