ತಾಯಕನಹಳ್ಳಿ- ಹೂಡೇಂ ರಸ್ತೆ ಆಗಲೀಕರಣ ಕಾಮಗಾರಿಗೆ ಚಾಲನೆ

| Published : Feb 17 2025, 12:34 AM IST

ಸಾರಾಂಶ

ಕೂಡ್ಲಿಗಿ ಕ್ಷೇತ್ರದ ಗಡಿಭಾಗದ ರಸ್ತೆಗಳು ತೀರಾ ಹದಗೆಟ್ಟಿದ್ದನ್ನು ಗಮನಿಸಿ, ಶಾಸಕನಾದ ನಂತರ ಸಾಕಷ್ಟು ಅಭಿವೃದ್ಧಿ ಮಾಡುವ ಮೂಲಕ ಜನರಿಗೆ ಸೌಲಭ್ಯ ಒದಗಿಸಿದ್ದೇನೆ

ಕೂಡ್ಲಿಗಿ: ಕ್ಷೇತ್ರದ ಗಡಿಭಾಗದ ರಸ್ತೆಗಳು ತೀರಾ ಹದಗೆಟ್ಟಿದ್ದನ್ನು ಗಮನಿಸಿ, ಶಾಸಕನಾದ ನಂತರ ಸಾಕಷ್ಟು ಅಭಿವೃದ್ಧಿ ಮಾಡುವ ಮೂಲಕ ಜನರಿಗೆ ಸೌಲಭ್ಯ ಒದಗಿಸಿದ್ದೇನೆ ಎಂದು ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ತಿಳಿಸಿದರು.

ಅವರು ತಾಲೂಕಿನ ಹುಡೇಂ ಗ್ರಾಮದಲ್ಲಿ ತಾಯಕನಹಳ್ಳಿಯಿಂದ ಹುಡೇಂವರೆಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ₹8.07 ಕೋಟಿ ವೆಚ್ಚದ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

2023ರಲ್ಲಿ ನಡೆದ ಚುನಾವಣೆ ಸಂದರ್ಭ ರಸ್ತೆಗಳ ಸ್ಥಿತಿ ಕಂಡು ಅಭಿವೃದ್ಧಿ ಮಾಡುವುದಾಗಿ ಕೊಟ್ಟ ಮಾತು ಉಳಿಸಿಕೊಂಡಿದ್ದು, ಕ್ಷೇತ್ರ ವ್ಯಾಪ್ತಿಯಲ್ಲಿ 3 ದಿನದಲ್ಲಿ ₹30 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಆಸ್ಪತ್ರೆಗಳ ಉನ್ನತೀಕರಣ, ಮೂಲಸೌಲಭ್ಯ ಕಲ್ಪಿಸುವುದು ಸೇರಿ ಹತ್ತು ಹಲವು ಕಾರ್ಯಗಳನ್ನು ಮಾಡಿದ್ದೇನೆ. ಬಡವರು ಮಕ್ಕಳು ಪಾಠ ಕಲಿಯುವಂಥ ಶಾಲೆಗಳಿಗೆ ಕೊಠಡಿಗಳ ನಿರ್ಮಾಣ, ಶುದ್ಧ ಕುಡಿವ ನೀರಿನ ಘಟಕ ಸೇರಿ ಸಾಕಷ್ಟು ಅಭಿವೃದ್ಧಿಗೆ ಒತ್ತು ನೀಡಿದ್ದೇನೆ. ನಮ್ಮ ಕ್ಷೇತ್ರವು ತೀರಾ ಹಿಂದುಳಿದ ಪ್ರದೇಶವಾಗಿದ್ದರಿಂದ ಅಭಿವೃದ್ಧಿಯೊಂದೇ ನನ್ನ ಗುರಿಯಾಗಿದೆ. ಆ ನಿಟ್ಟಿನಲ್ಲಿ ಎಲ್ಲ ಹಳ್ಳಿಗಳಲ್ಲೂ ಅಭಿವೃದ್ಧಿಗೆ ಪಣ ತೊಟ್ಟಿದ್ದೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಪ್ಯಾರಿಮಾಬಿ ಗನಿಸಾಬ್, ಮುಖಂಡರಾದ ಕೆ.ಮೂರ್ತೆಪ್ಪ, ರಾಮಚಂದ್ರಪ್ಪ, ಬೋಸೆಮಲ್ಲಯ್ಯ, ಬಗ್ಗಲರ ಪಾಪಣ್ಣ, ಗುಡ್ಡದ ಬೋಸಯ್ಯ, ಅಜ್ಜಣ್ಣ, ಯಲ್ಲಪ್ಪ, ನಾಗಮಣಿ ಜಿಂಕಲ್, ಪಾಲಯ್ಯ, ಜಿ.ಓಬಣ್ಣ, ಗುತ್ತಿಗೆದಾರ ಗುಂಡುಮುಣುಗು ಎಸ್.ಪಿ.ಪ್ರಕಾಸ್, ಪಿಡಬ್ಲುಡಿ ಎಇಇ ಕೆ.ನಾಗನಗೌಡ, ಗ್ರಾಪಂ ಪಿಡಿಒ ಲಕ್ಷ್ಮಿಬಾಯಿ, ಗ್ರಂಥಾಲಯ ಮೇಲ್ವಿಚಾರಕ ತುಡುಮ ಗುರುರಾಜ್ ಸೇರಿ ಗ್ರಾಪಂ ಸದಸ್ಯರು ಇದ್ದರು.