ಎನ್ ಎಸ್ ಎಸ್ ವಿಶೇಷ ಶಿಬಿರವು ವಿದ್ಯಾರ್ಥಿ ಜೀವನದಲ್ಲಿ ಮರೆಯಲಾಗದ ಅದ್ಭುತ ಅನುಭವಗಳನ್ನು ಕೊಡುತ್ತದೆ, ಶಿಬಿರವು ಸಮಯ ಪ್ರಜ್ಞೆ , ತಾಳ್ಮೆ, ಪರಸ್ಪರ ನಂಬಿಕೆ,ಸಹಕಾರ, ಒಗ್ಗಟ್ಟು, ಶ್ರಮ ಹಂಚಿಕೊಳ್ಳುವಿಕೆ ಸೇರಿದಂತೆ ಉತ್ತಮ ಶಿಸ್ತುಗಳನ್ನು ಕಲಿಸುವ ಮೂಲಕ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ಬೆಳ್ತಂಗಡಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಮ್ ಹೇಳಿದರು.
ಬೆಳ್ತಂಗಡಿ: ಎನ್ ಎಸ್ ಎಸ್ ವಿಶೇಷ ಶಿಬಿರವು ವಿದ್ಯಾರ್ಥಿ ಜೀವನದಲ್ಲಿ ಮರೆಯಲಾಗದ ಅದ್ಭುತ ಅನುಭವಗಳನ್ನು ಕೊಡುತ್ತದೆ, ಶಿಬಿರವು ಸಮಯ ಪ್ರಜ್ಞೆ , ತಾಳ್ಮೆ, ಪರಸ್ಪರ ನಂಬಿಕೆ,ಸಹಕಾರ, ಒಗ್ಗಟ್ಟು, ಶ್ರಮ ಹಂಚಿಕೊಳ್ಳುವಿಕೆ ಸೇರಿದಂತೆ ಉತ್ತಮ ಶಿಸ್ತುಗಳನ್ನು ಕಲಿಸುವ ಮೂಲಕ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ಬೆಳ್ತಂಗಡಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಮ್ ಹೇಳಿದರು.
ಅವರು ಸ.ಪ್ರ. ದರ್ಜೆ ಕಾಲೇಜು ಬೆಳ್ತಂಗಡಿ ಇವರ ವತಿಯಿಂದ "ವ್ಯಸನಮುಕ್ತ ಮತ್ತು ಕ್ಷಯ ಮುಕ್ತ ಯುವ ಜನತೆ " ಎಂಬ ಆಶಯದೊಂದಿದೆ ಬಂದಾರು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ನಡೆದ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.ಬೆಂಗಳೂರಿನ ಯುವ ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ, ಸಮಾರಂಭದಲ್ಲಿ ಬೆಳ್ತಂಗಡಿ ಕ್ಷೇತ್ರ ಸಂಪನ್ಮೂಲ ಕೇಂದ್ರದ ಕ್ಷೇತ್ರ ಸಮನ್ವಯಾಧಿಕಾರಿ ಬಸವಲಿಂಗಪ್ಪ ಟಿ.ಬಿ., ತಾ.ಪಂ.ಮಾಜಿ ಸದಸ್ಯ ಕೃಷ್ಣಯ್ಯ ಆಚಾರಿ, ಪದ್ಮುಂಜ, ಸಿ.ಎ.ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಪಣೆಕ್ಕರ, ಎಸ್.ಡಿ.ಎಂ.ಸಿ.ಅಧ್ಯಕ್ಷ ಉಮೇಶ್ ಗೌಡ ಪೊಯ್ಯೋಳೆ , ಪದ್ಮುಂಜ ಸಿ.ಎ.ಬ್ಯಾಂಕ್ ಉಪಾಧ್ಯಕ್ಷ ಅಶೋಕ ಗೌಡ ಪಾಂಜಾಳ, ಗ್ರಾ.ಪಂ. ಮಾಜಿ ಅಧ್ಯಕ್ಷೆ ಪರಮೇಶ್ವರಿ ಪುಯಿಲ,ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಬ್ಬಾಸ್ ಬಟ್ಲಡ್ಕ, ಕಾರ್ಯದರ್ಶಿ ನವೀನ್ ಕೊಲ್ಲಕೋಡಿ, ಸಹ ಶಿಬಿರಾಧಿಕಾರಿ ಸುರೇಶ್ ಡಿ., ಘಟಕ ನಾಯಕರಾದ ಶಿಲ್ಪಾ, ರಕ್ಷಿತ್, ಶ್ರವಣ್, ಪ್ರತಿಜ್ಞಾ ಉಪಸ್ಥಿತರಿದ್ದರು. ಬೆಳ್ತಂಗಡಿ ಸ.ಪ್ರ.ದ.ಕಾಲೇಜಿನ ಪ್ರಾಚಾರ್ಯ ಪದ್ಮನಾಭ ಅಧ್ಯಕ್ಷತೆ ವಹಿಸಿದ್ದರು.
ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷ ಉದಯಭಟ್ , ಉದ್ಯಮಿ ಪ್ರಶಾಂತ್ ನಿರುಂಬುಡ, ಮುಖ್ಯ ಶಿಕ್ಷಕ ವಿಶ್ವನಾಥ ಯಂ.ಯು ಕು.ಸುಪ್ರಿಯಾ ಕಾರ್ಯಕ್ರಮ ನಿರೂಪಿಸಿ, ಶಿಬಿರಾಧಿಕಾರಿ, ಡಾ.ಸುಮನಾ ಶೆಟ್ಟಿ ಸ್ವಾಗತಿಸಿದರು. ಶಿಬಿರಾಧಿಕಾರಿ ಡಾ.ಕುಶಾಲಪ್ಪ ಎಸ್ ಧನ್ಯವಾದವಿತ್ತರು. ಏಳು ದಿನಗಳ ಶಿಬಿರ ವರದಿಯನ್ನು ವಾಚಿಸಲಾಯಿತು. ಶಿಬಿರಾರ್ಥಿಗಳನ್ನು ಸ್ಮರಣಿಕೆಯೊಂದಿಗೆ ಗುರುತಿಸಿ ಬೀಳ್ಕೊಡಲಾಯಿತು. ವಾರ್ಷಿಕ ವಿಶೇಷ ಶಿಬಿರದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ 80 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.