ಟಿಡಿಎಲ್ ಎಫ್.ಸಿ.ಬೈಲುಕೊಪ್ಪ, ಬೆಟ್ಟಗೇರಿ ಎಫ್.ಸಿ.ಸುಂಟಿಕೊಪ್ಪ ತಂಡಗಳು ಮುಂದಿನ ಸುತ್ತಿಗೆ

| Published : May 22 2025, 01:15 AM IST

ಟಿಡಿಎಲ್ ಎಫ್.ಸಿ.ಬೈಲುಕೊಪ್ಪ, ಬೆಟ್ಟಗೇರಿ ಎಫ್.ಸಿ.ಸುಂಟಿಕೊಪ್ಪ ತಂಡಗಳು ಮುಂದಿನ ಸುತ್ತಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಟಿಡಿಎಲ್‌ ಎಫ್‌ಸಿ ಬೈಲುಕೊಪ್ಪ ಹಾಗೂ ಬೆಟ್ಟಗೇರಿ ಎಫ್‌ಸಿ ಸುಂಟಿಕೊಪ್ಪ ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಕಳೆದ 3 ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯ ನಡುವೆಯೂ ಡಿ.ಶಿವಪ್ಪ ಸ್ಮಾರಕ 26ನೇ ವರ್ಷದ ರಾಜ್ಯ ಮಟ್ಟದ ಗೋಲ್ಡ್ ಕಪ್ ಫುಟ್‌ಬಾಲ್ ಟೂರ್ನಿಯ 5ನೇ ದಿನವಾದ ಬುಧವಾರ ನಡೆದ ಪಂದ್ಯಾವಳಿಯಲ್ಲಿ ಟಿಡಿಎಲ್ ಎಫ್.ಸಿ.ಬೈಲುಕೊಪ್ಪ ಹಾಗೂ ಬೆಟ್ಟಗೇರಿ ಎಫ್.ಸಿ.ಸುಂಟಿಕೊಪ್ಪ ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.

ಜಿಯಂಪಿ ಶಾಲಾ ಮೈದಾನದಲ್ಲಿ ಬ್ಲೂಬಾಯ್ಸ್ ಯೂತ್ ಕ್ಲಬ್ ವತಿಯಿಂದ ಆಯೋಜಿಸಲಾಗಿರುವ 39ನೇ ವರ್ಷದ ಪುಟ್ಬಾಲ್ ಮೊದಲನೇ ಪಂದ್ಯಾವಳಿಯು ಟಿಡಿಎಲ್ ಎಫ್.ಸಿ ಬೈಲುಕೊಪ್ಪ ಹಾಗೂ ವಿಜಯನಗರ ಮೈಸೂರು ತಂಡಗಳ ನಡುವೆ ನಡೆದು ಪಂದ್ಯಾವಳಿಯ ಮೊದಲಾರ್ಧದಲ್ಲಿ ಟಿಡಿಎಲ್ ಎಫ್.ಸಿ ಬೈಲುಕೊಪ್ಪ ತಂಡದ ಮುನ್ನಡೆ ಆಟಗಾರ ಸ್ಜಿಗ್ಮಾ 13ನೇ ತನಗೆ ದೊರೆತ ಉತ್ತಮ ಅವಕಾಶ ಸದುಪಯೋಗಪಡಿಸಿಕೊಂಡು ಎದುರಾಳಿ ತಂಡಕ್ಕೆ 1 ಗೋಲು ಬಾರಿಸುವ ಮೂಲಕ ತಂಡಕ್ಕೆ ಮುನ್ನಡೆಯನ್ನು ಒದಗಿಸಿದರು. ದ್ವಿತೀಯಾರ್ಧದ 1ನೇ ನಿಮೀಷದಲ್ಲಿ ಟಿಡಿಎಲ್ ಎಫ್.ಸಿ ಬೈಲುಕೊಪ್ಪ ತಂಡದ ಚಂಗ್‌ಬಾ ಅವರು 1 ಗೋಲು ಬಾರಿಸುವ ಮೂಲಕ ತಂಡಕ್ಕೆ ಮತ್ತಷ್ಟು ಮುನ್ನಡೆಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು. ಎರಡು ತಂಡಗಳು ಬಿರುಸಿನ ಆಟವನ್ನು ಪ್ರದರ್ಶಿಸುವ ಮೂಲಕ ಎದುರಾಳಿ ಟಿಡಿಎಲ್ ತಂಡದ 10ನೇ ನಿಮೀಷದಲ್ಲಿ ಚಂಗ್‌ಬಾ ಮತ್ತೊಂದು ಗೋಲು ಬಾರಿಸುವ ಮೂಲಕ ತಂಡವನ್ನು ಮತ್ತಷ್ಟು ಒತ್ತಡಕ್ಕೆ ಸಿಲುಕಿಸಿತ್ತು. 13ನೇ ನಿಮೀಷದಲ್ಲಿ ಕುಂಗ ಅವರು ಮತ್ತೊಂದು ಗೋಲು ಬಾರಿಸುವ ಮೂಲಕ ಮೈಸೂರು ವಿಜಯನಗರ ತಂಡವನ್ನು 4-0 ಗೋಲುಗಳಿಂದ ಸೋಲಿಸುವ ಮೂಲಕ ಟಿಡಿಎಲ್ ಎಫ್.ಸಿ ಬೈಲುಕೊಪ್ಪ ತಂಡವು ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು.

ದ್ವಿತೀಯ ಪಂದ್ಯಾವಳಿಯು ಬೆಟ್ಟಗೇರಿ ಎಫ್.ಸಿ ಸುಂಟಿಕೊಪ್ಪ ಹಾಗೂ ಸಿಟಿಜನ್ ಉಪ್ಪಳ ತಂಡಗಳ ನಡುವೆ ನಡೆದು ಎರಡು ತಂಡಗಳು ಆಕ್ರಮಣಕಾರಿ ಆಟಕ್ಕೆ ಇಳಿದು ನೆರೆದಿದ್ದ ಕ್ರೀಡಾ ಪ್ರೇಕ್ಷಕರಿಗೆ ಉತ್ತಮವಾದ ಕ್ರೀಡಾ ರಸದೌತಣ ನೀಡುತ್ತಿದ್ದಂತೆ ಮೊದಲಾರ್ಧದ 12ನೇ ನಿಮೀಷದಲ್ಲಿ ಸಿಟಿಜನ್ ಉಪ್ಪಳ ತಂಡದ ಮುನ್ನಡೆ ಆಟಗಾರ ಮೂಸಾಬಾಯ್ 1 ಗೋಲು ಬಾರಿಸುವ ಮೂಲಕ ಮುನ್ನಡೆಯನ್ನು ಕಾಯ್ದುಕೊಂಡರು. ಆದರೆ ಎದುರಾಳಿ ಬೆಟ್ಟಗೇರಿ ತಂಡದವರು ಮತ್ತಷ್ಟು ಬಿರುಸಿನ ಆಟಕ್ಕೆ ಇಳಿದು ಎದುರಾಳಿ ತಂಡಕ್ಕೆ 18 ನೇ ನಿಮೀಷದಲ್ಲಿ ಬೆಟ್ಟಗೇರಿ ತಂಡದ ಮುನ್ನಡೆ ಆಟಗಾರ ರಕ್ಷಿತ್ 1 ಗೋಲು ಬಾರಿಸುವ ಮೂಲಕ ಎದುರಾಳಿ ಗೋಲಿಗೆ ಸಮನಾಗಿಸಿದರು.

ದ್ವಿತೀಯಾರ್ಧದಲ್ಲಿ ಎರಡು ತಂಡಗಳು ಸಮಬಲದ ಪ್ರದರ್ಶವನ್ನು ನೀಡುತ್ತಿದ್ದರೂ ಬೆಟ್ಟಗೇರಿ ಎಫ್.ಸಿ ತಂಡದ ಮನೋಜ್ 12ನೇ ನಿಮಿಷದಲ್ಲಿ ತನಗೆ ದೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಂಡು 1 ಗೋಲು ಬಾರಿಸುವ ಮೂಲಕ ಎದುರಾಳಿ ಸಿಟಿಜನ್ ಉಪ್ಪಳ ತಂಡವನ್ನು 2-1 ಗೋಲುಗಳಿಂದ ಸೋಲಿಸುವ ಮೂಲಕ ಬೆಟ್ಟಗೇರಿ ಎಫ್.ಸಿ ಸುಂಟಿಕೊಪ್ಪ ತಂಡವು ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು.

ಇದೇ ಸಂದರ್ಭ ಪಂದ್ಯಾವಳಿಯನ್ನು ಪ್ರಗತಿಪರ ಕೃಷಿಕರಾದ ಕೋಟಿ ರಾಮಣ್ಣ ಉದ್ಘಾಟಿಸಿದರು. ಅಧ್ಯಕ್ಷ ಆಲಿಕುಟ್ಟಿ, ಗೌರವಧ್ಯಕ್ಷ ಟಿ.ಯು.ಪ್ರಸನ್ನ, ಟಿ.ಯು.ಜಾನ್, ವಾಸು, ಶಶಿಕುಮಾರ್ ರೈ, ಸೇರಿದಂತೆ ಮತ್ತಿತರರು ಇದ್ದರು. ಇಂದಿನ ಪಂದ್ಯಾವಳಿಗಳು

ಮೊದಲ ಪಂದ್ಯ 1.30 ಗಂ. ಬ್ಲೂಮೌಂಟೆನ್ ಎಫ್.ಸಿ.ಊಟಿ v/s ಕ್ಯಾಲಿಕೆಟ್ ಎಫ್.ಸಿ.ಕ್ಯಾಲಿಕೆಟ್

ದ್ವಿತೀಯ ಪಂದ್ಯಾವಳಿ 2.30. ಗಂ. ವಾಲ್‌ಪರಿ ಎಫ್.ಸಿ ತಮಿಳುನಾಡು v/s ಮೊಗ್ರೆಲ್ ಎಫ್.ಸಿ ಕುಂಬ್ಳೆ.

ಮೂರನೇ ಪಂದ್ಯಾವಳಿ 3.30 ಗಂ ಪೈಟರ್ ಎಫ್.ಸಿ ಕುತುಪರಂಬೂ v/s ಅಶೋಕ ಎಫ್.ಸಿ ಮೈಸೂರು

ನಾಲ್ಕನೇ ಪಂದ್ಯಾವಳಿ 4.30 ಗಂ ಯಂಗ್ ವಾರಿರ‍್ಸ್ ಎಫ್.ಸಿ.ಕೆಜಿಎಫ್ v/s ಟಿಡಿಎಲ್ ಎಫ್.ಸಿ ಬೈಲುಕೊಪ್ಪ