ಸಂವಿಧಾನ ಬದಲಿಸಲು ಹೊರಟ ಬಿಜೆಪಿಗೆ ತಕ್ಕಪಾಠ ಕಲಿಸಿ: ಹನುಮಂತಯ್ಯ

| Published : Apr 30 2024, 02:08 AM IST

ಸಾರಾಂಶ

ಬಿಜೆಪಿ ರಾಜ್ಯದಲ್ಲಿ ಎಂದೂ ಬಹುಮತ ಪಡೆದು ಅಧಿಕಾರ ಮಾಡಿಲ್ಲ. ಬರೀ ವಾಮಮಾರ್ಗದ ಮೂಲಕ ಅಧಿಕಾರ ಹಿಡಿದಿದೆ.

ಹರಪನಹಳ್ಳಿ: ಈ ಚುನಾವಣೆ ಅತ್ಯಂತ ಮಹತ್ವ ಪೂರ್ಣವಾದದ್ದು, ನಿಮ್ಮ ಒಂದೊಂದು ಮತವೂ ಅಮೂಲ್ಯ. ಸಂವಿಧಾನವನ್ನು ಬದಲಾಯಿಸಲು ಹೊರಟಿರುವ ಬಿಜೆಪಿ ಸರ್ಕಾರಕ್ಕೆ ಮತದಾರರು ತಕ್ಕ ಪಾಠ ಕಲಿಸಬೇಕು ಎಂದು ರಾಜ್ಯಸಭಾ ಮಾಜಿ ಸದಸ್ಯ ಎಲ್.ಹನುಮಂತಯ್ಯ ತಿಳಿಸಿದರು.ಪಟ್ಟಣದ ಹೊರ ವಲಯದಲ್ಲಿರುವ ಸಮತಾ ರೆಸಾರ್ಟ್‌ನಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಸಮಾನತೆ ಸಾರುವ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಉಳಿಸಬೇಕು ಎಂದು ಹೇಳಿದರು. ಬಿಜೆಪಿ ರಾಜ್ಯದಲ್ಲಿ ಎಂದೂ ಬಹುಮತ ಪಡೆದು ಅಧಿಕಾರ ಮಾಡಿಲ್ಲ. ಬರೀ ವಾಮಮಾರ್ಗದ ಮೂಲಕ ಅಧಿಕಾರ ಹಿಡಿದಿದೆ ಎಂದರು.

ಪಕ್ಷೇತರ ಅಭ್ಯರ್ಥಿಗೆ ಮತ ಹಾಕುವ ಬದಲು ಪಕ್ಷದ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ ಅವರಿಗೆ ಮತ ಹಾಕಿ ಗೆಲ್ಲಿಸಿ ಎಂದು ಪಕ್ಷೇತರ ಅಭ್ಯರ್ಥಿ ವಿನಯ್ ಕುಮಾರ್‌ಗೆ ಪರೋಕ್ಷವಾಗಿ ಮತ ಹಾಕಬೇಡಿ ಎಂದು ಹೇಳಿದರು.

ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ ಮಾತನಾಡಿ, ನಾವೆಲ್ಲರೂ ಇಂದು ಸಮಾನತೆಯಿಂದ ಬದುಕಲು ಕಾರಣ ಅಂಬೇಡ್ಕರ್ ಬರೆದಿರುವ ಸಂವಿಧಾನ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಇಡೀ ದೇಶದಲ್ಲಿ ಜಾತಿ ಗಣತಿ ಮಾಡಲಾಗುತ್ತದೆ ಎಂದ ಅವರು ಸಂವಿಧಾನ ಗೆಲ್ಲಿಸಲು ಕಾಂಗ್ರೆಸ್‌ಗೆ ಮತ ಹಾಕಿ ಮತ್ತು ಮತ ಹಾಕಿಸಬೇಕು ಎಂದು ಕೋರಿದರು.

ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಹಿರಿಯ ಮುಖಂಡರಾದ ಸಿ. ಚಂದ್ರಶೇಖರ್ ಭಟ್, ಕೋಡಿಹಳ್ಳಿ ಭೀಮಪ್ಪ, ಪಿ. ಮಹಾಬಲೇಶ್ವರ ಗೌಡ, ಎಚ್.ಬಿ. ಪರಶುರಾಮಪ್ಪ, ಪುರಸಭೆ ಸದಸ್ಯರಾದ ಲಾಟಿ ದಾದಾಪೀರ್, ಜಾಕೀರ್ ಹುಸೇನ್ ಸರ್ಖಾವಸ್, ಉದ್ದಾರ ಗಣೇಶ್, ಗೌತಮ ಪ್ರಭು, ವಸಂತಪ್ಪ, ಎಲ್.ಬಿ. ಹಾಲೇಶ್ ನಾಯ್ಕ್, ಇಸ್ಮಾಯಿಲ್ ಎಲಿಗಾರ್, ವಕೀಲ ಟಿ. ವೆಂಕಟೇಶ್, ಕಬ್ಬಳ್ಳಿ ಮೈಲಪ್ಪ, ಎಚ್.ಕೊಟ್ರೇಶ್, ಪಿ.ಶಿವಕುಮಾರ್ ನಾಯ್ಕ್, ಮೋತಿ ನಾಯ್ಕ್, ಸಿ.ಪರಶುರಾಮ, ವೀರೇಶ್ ನಾಯ್ಕ್, ಶಶಿಕುಮಾರ್ ನಾಯ್ಕ್, ಹಲಗೇರಿ ಮಂಜಪ್ಪ, ಎಂ.ಬಿ. ಅಂಜಿನಪ್ಪ, ಜಾವೀದ್, ಹುಲಿಕಟ್ಟಿ ಚಂದ್ರಪ್ಪ, ಓ. ರಾಮಪ್ಪ, ಶಂಕರನಹಳ್ಳಿ ಹನುಮಂತಪ್ಪ, ಬಸವರಾಜ್, ಸಿ. ಪ್ರತಾಪ್, ಕೆ. ಕೆಂಚಪ್ಪ, ಎಲ್. ಹನುಮಂತಯ್ಯ, ಎಲ್. ಮಂಜ್ಯಾನಾಯ್ಕ್, ಅಗ್ರಹಾರ ಆಶೋಕ, ಪ್ರಸಾದ್ ಕಾವಾಡಿ, ಕೃಷ್ಣಾ ನಾಯ್ಕ್, ಅರಸೀಕರೆ ಮರಿಯಪ್ಪ, ಯರಬಾಳು ಹನುಮಂತಪ್ಪ, ಶೇಖರ್ ನಾಯ್ಕ್, ಡಿ.ಬಸವರಾಜ್, ಗುರುಸಿದ್ದಪ್ಪ, ನೀಲಗುಂದ ವಾಗೀಶ್, ಗುಡಿಹಳ್ಳಿ ಹಾಲೇಶ್, ಅಲ್ತಾಫ್, ನೀಲಗುಂದ ಮಹಾಂತೇಶ್, ಶಿರಗಾನಹಳ್ಳಿ ಪರಶುರಾಮ, ಈಶ್ವರ ನಾಯ್ಕ್, ಜೀಷಾನ್, ವೆಂಕಟೇಶ್ ನಾಯ್ಕ್, ಟಿ.ಗಣೇಶ್ ನಾಯ್ಕ್, ಎನ್.ಶಂಕರ್ , ಶಿವಣ್ಣ, ಒ.ಮಹಾಂತೇಶ್, ಅನಂತ್ ನಾಯ್ಕ್ ಉಪಸ್ಥಿತರಿದ್ದರು.