ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ನಮ್ಮ ದೇಶದ ಬಗ್ಗೆ ಅಭಿಮಾನದ ಪಾಠ ಹೇಳಿಕೊಡುವಂತೆ ಪೋಷಕರಲ್ಲಿ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷರಾದ ನಾಗಭೂಷಣ್ ಹಾಗೂ ಧರ್ಮರಾಜ್ ತಿಳಿಸಿದರು.ತಾಲೂಕಿನ ಕೊರಟಿಗೆರೆ ಗ್ರಾಮದ ಶಂಭುಲಿಂಗೇಶ್ವರ ದೇವಾಲಯದಲ್ಲಿ ವಾರ್ಷಿಕ ಹುಣ್ಣಿಮೆ ಹಾಗು ರುದ್ರಾಭಿಷೇಕ ಕಾರ್ಯಕ್ರಮದ ಅಂಗವಾಗಿ ನಿವೃತ್ತ ಸೈನಿಕರಿಗೆ ಅಭಿನಂದನೆ ಸಮಾರಂಭದಲ್ಲಿ ಮಾತನಾಡಿ, ಶಿಕ್ಷಣ ನೀಡುವುದರ ಜೊತೆಗೆ ನಮ್ಮ ದೇಶಾಭಿಮಾನ ಬಗ್ಗೆಯೂ ಪಾಠ ಮಾಡುವ ಅವಶ್ಯಕತೆ ಇದೆ.ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದ ಮೇಲೆ ಪಾಕಿಸ್ತಾನ, ಚೀನಾ, ಬಾಂಗ್ಲಾ ದೇಶಗಳ ಸೈನಿಕರು ಕಾಲು ಕೆರೆದು ಯುದ್ಧಕ್ಕೆ ಬರುತ್ತಿದ್ದಾರೆ ವಿಶ್ವದ ದೊಡ್ಡಣ್ಣ ಎನ್ನುವ ಅಮೇರಿಕ ರಷ್ಯಾ ದೇಶಗಳು ಇಂದು ಭಾರತದ ಕಡೆ ಮುಖ ಮಾಡುತ್ತಿದ್ದು ನಮ್ಮ ದೇಶದ ಬಲಾಢ್ಯ ಸೈನಿಕರಿಂದ. ನಾವು ರಾತ್ರಿ ಹಗಲೆನ್ನದೆ ನಮ್ಮ ಜೀವವನ್ನು ಪಣಕ್ಕಿಟ್ಟು ದೇಶ ರಕ್ಷಣೆಗಾಗಿ ಹೋರಾಟ ಮಾಡಿ ಇಂದು ನಿವೃತ್ತರಾಗಿ ಬದುಕು ಸಾಗಿಸುತ್ತಿದ್ದೇವೆ. ಆದರೂ ಸಹ ಇಂದಿಗೂ ನಮ್ಮಲ್ಲಿ ದೇಶ ರಕ್ಷಣೆಯ ತುಡಿತ ಇನ್ನು ಮುಗಿದಿಲ್ಲ. ಯುವಕರು ಪ್ರತಿ ಗ್ರಾಮದಲ್ಲಿ ಒಬ್ಬೊಬ್ಬ ಸೈನಿಕರಾಗಿ ಹೆತ್ತ ತಾಯಿ ಹಾಗು ಈ ಭೂಮಿ ತಾಯಿ ಋಣತೀರಿಸುವ ದೇಶದ ಮಕ್ಕಳಾಗಬೇಕು ಎಂದರು.
ರಾಷ್ಟ್ರೀಯ ತೆಂಗು ಬೆಳೆಗಾರ ಸಮಿತಿಯ ಮಾಜಿ ಉಪಾಧ್ಯಕ್ಷ ರೇಣುಕುಮಾರ್ ಮಾತನಾಡಿ, ಇತ್ತೀಚೆಗೆ ೨೬ ಪ್ರವಾಸಿಗರನ್ನು ಹತ್ಯೆ ಮಾಡಿದ್ದ ಉಗ್ರರ ವಿರುದ್ಧ ಸಿಡಿದು ಆ ದೇಶಕ್ಕೆ ನುಗ್ಗಿ ಪಾಕಿಸ್ತಾನವನ್ನು ಆಪರೇಷನ್ ಸಿಂದೂರ ಎಂಬ ಹೆಸರಿನಲ್ಲಿ ಆದೇಶಕ್ಕೆ ನುಗ್ಗಿ ಅವರನ್ನು ಬಗ್ಗು ಬಡಿದಿದ್ದು ನಾವು ದೇಶದ ಹೊರಭಾಗದಲ್ಲಿರುವಂತಹ ದೇಶದ್ರೋಹಿಗಳನ್ನು ಹೊಡೆದೋಡಿಸಿ ಜೊತೆಗೆ ನಮ್ಮ ದೇಶದ ಒಳಗಿರುವವರಿಗೂ ನಾವು ತಕ್ಕ ಶಾಸ್ತಿ ಮಾಡಬೇಕೆಂದರು.ಕೊರಟಿಗೆರೆ ಗ್ರಾಮದ ಮುಖಂಡ ರಾಜಣ್ಣ ಮಾತನಾಡಿ, ನಮ್ಮ ಗ್ರಾಮ ಅಕ್ಕಪಕ್ಕದ ಹತ್ತಕ್ಕೂ ಹೆಚ್ಚು ಇಂದಿಗೂ ಸಹ ದೇಶಸೇವೆಯನ್ನು ಮಾಡುವ ಸೈನಿಕರಿದ್ದು, ಇವರಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹೋರಾಟ ಮಾಡಿದ ನಮ್ಮ ನಿವೃತ್ತ ಸೈನಿಕರಿದ್ದು ಇವರನ್ನು ಅಭಿನಂದಿಸುವ ಉದ್ದೇಶ ಇವರನ್ನು ನೋಡಿ ಯುವ ಜನಾಂಗ ದೇಶ ಸೇವೆ ಮಾಡಲು ಮುಂದಾಗಬೇಕು. ಅದರಂತೆ ಪ್ರತಿವರ್ಷವೂ ಸಹ ನಮ್ಮ ದೇವಾಲಯದ ವಾರ್ಷಿಕ ಪೂಜೆ ಸಂದರ್ಭದಲ್ಲಿ ಇಂತಹ ಮಹನೀಯರನ್ನು ಗೌರವಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.ಇದೇ ವೇಳೆ ಮಾಜಿ ಸೈನಿಕರಾದ ಉಮೇಶ್, ನಾಗಭೂಷಣ್, ಧರ್ಮರಾಜ್, ಮೋಹನ್ ಕುಮಾರ್ ಅವರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ನಂಜುಂಡಪ್ಪ ಮಹದೇವಯ್ಯ,ರಾಮೇಗೌಡ, ಗ್ರಾಪಂ ಸದಸ್ಯೆ ಸುಧಾ, ಮಂಜುನಾಥ್, ಮೋಹನ್ ಕುಮಾರ್, ಚೇತನ್ ವಿನೋದ್, ಕುಮಾರ್, ವಕೀಲ ನಿಂಗರಾಜು ಸೇರಿದಂತೆ ಇತರರು ಹಾಜರಿದ್ದರು.