ಎಲೆಮರೆಯ ಕಾಯಿಯಂತೆ ಇರುವ ಕಲಾವಿದರನ್ನು ಗುರುತಿಸಿ ಇಂತಹ ವೇದಿಕೆಗಳ ಮೂಲಕ ಅವರ ಪ್ರತಿಭೆ ಮೆರೆಸಲು ಮುಂದಾಗಬೇಕು

ಕೊಟ್ಟೂರು: ಶಿಕ್ಷಣದ ಜೊತೆಗೆ ಮಕ್ಕಳಿಗೆ ಉತ್ತಮ ಸಂಸ್ಕಾರ , ರಂಗ ಚಟುವಟಿಕೆಗಳ ತರಬೇತಿಯನ್ನು ನೀಡಿದರೆ ಸ್ವಾಸ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಶಿಕ್ಷಕ ಕೆಟಿ ಸಿದ್ದರಾಮೇಶ್ವರ ಹೇಳಿದರು.

77 ನೇ ಗಣರಾಜೋತ್ಸವದ ನಿಮಿತ್ಯ ಇಲ್ಲಿನ ಕಲ್ಪತರು ಕಲಾ ಟ್ರಸ್ಟ್ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜ್ ಆವರಣದಲ್ಲಿನ ಸಭಾಂಗಣದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಲೆಮರೆಯ ಕಾಯಿಯಂತೆ ಇರುವ ಕಲಾವಿದರನ್ನು ಗುರುತಿಸಿ ಇಂತಹ ವೇದಿಕೆಗಳ ಮೂಲಕ ಅವರ ಪ್ರತಿಭೆ ಮೆರೆಸಲು ಮುಂದಾಗಬೇಕು ಎಂದರು.ಉಪನ್ಯಾಸಕಿ ಸಿದ್ದು ಗೀರೀಶ್ ಮಾತನಾಡಿ, ಸಂಗೀತ , ಭರತನಾಟ್ಯ, ರಂಗಭೂಮಿ ಜಾನಪದ ಮತ್ತಿತರ ಕಲೆ ಪ್ರಕಾರಗಳು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಸದಾ ಏಕಾಗ್ರತೆ, ರಕ್ತ ಸಂಚಾರ ಸುಲಭವಾಗಿರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನಲ್ಲಿ ಇತ್ತೀಚೆಗೆ ನಿಧನರಾದ ಕಿರುತರೆ ನಟಿ ಕುಮಾರಿ ನಂದಿನಿ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಮೌನಚರಣೆ ಮಾಡಲಾಯಿತು.

ಸಂಗೀತ ಕಲಾವಿದ ಜಂಬೂರು ಕುಮಾರಸ್ವಾಮಿ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ, ರೋಷಣಕುಮಾರ್, ಇಕ್ಷುದ್ ಬಿ ಎಂ ರಿಂದ ಮಿಮಿಕ್ರಿ, ಕೊಟ್ಟೂರೇಶ್ವರ ಭರತ ನಾಟ್ಯ, ಶಾಲೆ ಮತ್ತು ಹಂಸ ಪ್ರಿಯ ನೃತ್ಯ ನಿಕೇತನ ಕಲಾಟ್ರಸ್ಟ್ ರಿಂದ ಭರತ ನಾಟ್ಯ, ಪಿ.ಕೆ ಇಂದ್ರಜಿತ್ ರಿಂದ ದೇಶ ಭಕ್ತಿ ಗೀತೆ ಕುಮಾರಿ ನಿವೇದಿತಾ ಮತ್ತು ಶಾಂತರಿಂದ ಪಡಿಂತ್ ಪುಟ್ಟರಾಜ ಗವಾಯಿ ಗೀತೆ ಗಾಯನ ನಡೆಯಿತು. ಚಿಗಟೇರಿ ಕೊಟ್ರೇಶ್ ಅಧ್ಯಕ್ಷತೆ ವಹಿಸಿದ್ದರು. ವೈ.ಸಿದ್ದೇಶ್, ದೇವೆಂದ್ರಪ್ಪ ಮಲ್ಲಪ್ಪ ಗೊಡ್ಲನೂರು, ಲಾಲಿತ ಕಾಳಾಚಾರಿ, ಸಿಂಧು ಗಿರೀಶ್, ಶ್ವೇತಾ, ಪ್ರಿಯಾಂಕಾ, ಮಠದ ನಟರಾಜ, ಗಿರಿಶ್ ಇದ್ದರು.