ಕನಕರ ತತ್ವಾದರ್ಶ, ಸಂಸ್ಕಾರ ಮಕ್ಕಳಿಗೆ ತಿಳಿಸಿ

| Published : Nov 27 2024, 01:04 AM IST

ಕನಕರ ತತ್ವಾದರ್ಶ, ಸಂಸ್ಕಾರ ಮಕ್ಕಳಿಗೆ ತಿಳಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಹಾಲುಮತ ಸಮಾಜ ಕಲ್ಮಶವಿಲ್ಲದ ಶುದ್ಧ ಹಾಲಿನಂತ ಸಮಾಜವಾಗಿದೆ

ಗದಗ: ಕುಟುಂಬಕ್ಕಾಗಿ ಬದುಕಿದವರನ್ನು ಮರೆಯುತ್ತಾರೆ. ಸಮಾಜಕ್ಕಾಗಿ ಬದುಕಿದವರನ್ನು ಎಲ್ಲರೂ ಸ್ಮರಿಸುತ್ತಾರೆ ಎಂದು ಹುಲಿಜಂತಿಯ ಮಾಳಿಂಗರಾಯ ಮಹಾರಾಯರು ಹೇಳಿದರು.

ಅವರು ನಗರದ ಕನಕಭವನದಲ್ಲಿ ಮಂಗಳವಾರ ಕರ್ನಾಟಕ ಪ್ರದೇಶ ಕುರುಬರ ಸಂಘ ಹಾಗೂ ಸಮಾಜದ ಸಹಯೋಗದಲ್ಲಿ ನಡೆದ ದಾಸಶ್ರೇಷ್ಠ ಭಕ್ತ ಕನಕದಾಸರ 537ನೇ ಜಯಂತ್ಯುತ್ಸವ, ಸಾಧಕರಿಗೆ ಸನ್ಮಾನ ಹಾಗೂ ರಕ್ತದಾನ ಶಿಬಿರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಕನಕದಾಸರ ಹೆಸರಿನಲ್ಲಿ ಜಯಂತಿ ಆಚರಿಸಿದರೆ ಸಾಲದು ಅವರ ತತ್ವಾದರ್ಶ ಹಾಗೂ ಸಂಸ್ಕಾರ ಮಕ್ಕಳಿಗೆ ತಿಳಿಸಿಕೊಡಬೇಕಾಗಿದೆ. ಹಾಲುಮತ ಸಮಾಜ ಕಲ್ಮಶವಿಲ್ಲದ ಶುದ್ಧ ಹಾಲಿನಂತ ಸಮಾಜವಾಗಿದೆ. ಆದರೆ, ಇಲ್ಲಿ ಹೆಪ್ಪು ಹಾಕುವದಕ್ಕಿಂತ ಉಪ್ಪು ಹಾಕುವವರೆ ಹೆಚ್ಚಾಗಿದ್ದಾರೆ ಅಂತವರಿಂದ ಎಚ್ಚರ ವಹಿಸಿ ಸಮಾಜ ಸಂಘಟಿಸಬೇಕು ಎಂದರು.

ಧಾರವಾಡ ಮನಸೂರ ಶ್ರೀಮಠದ ಶ್ರೀಬಸವರಾಜ ದೇವರು ಮಾತನಾಡಿ, ಕನಕದಾಸರು ಮನಸ್ಸು ಮಾಡಿದ್ದರೆ ವಿಜಯನಗರ ಸಾಮ್ರಾಜ್ಯದಲ್ಲಿ ಅಧಿಪತಿಯಾಗುತ್ತಿದ್ದರು. ಆದರೆ, ಅಲ್ಲಿನ ಜಾತೀಯತೆಯಿಂದ ಅವರಿಗೆ ಯೋಗ ಸಿಗಲಿಲ್ಲ ನಂತರ ಹಕ್ಕ-ಬುಕ್ಕರು ಹಾಲುಮತ ಸಮಾಜದವರಿಗೆ ಸ್ಥಾನಮಾನ ಒದಗಿಸಿಕೊಟ್ಟರು ಆದ್ದರಿಂದ ನಮ್ಮ ಹಕ್ಕುಗಳಿಗಾಗಿ ಜಾತಿವಾದಿಗಳಿಗೆ ಒಗ್ಗಟ್ಟಿನ ಮೂಲಕ ನಮ್ಮ ಶಕ್ತಿ ತೋರಿಸಬೇಕಾಗಿದೆ ಎಂದರು.

ಕುರುಬರ ಸಂಘದ ಜಿಲ್ಲಾಧ್ಯಕ್ಷ ಫಕ್ಕೀರಪ್ಪ ಹೆಬಸೂರ ಮಾತನಾಡಿ, 1983ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಅಂದು ಸಚಿವರಾಗಿದ್ದ ಸಿದ್ದರಾಮಯ್ಯ ಕನಕದಾಸರ 500ನೇ ಜಯಂತಿ ಆಚರಣೆಗೆ ಚಾಲನೆ ನೀಡಿದರು. ಅಂದಿನಿಂದ ಇಂದಿನವರೆಗೆ ಕನಕದಾಸರ ಜಯಂತಿ ಆಚರಿಸಿಕೊಂಡು ಬರಲಾಗುತ್ತಿದೆ. ಗದುಗಿನ ಕನಕ ಭವನ ಸಮಾಜದ ಆಸ್ತಿಯಾಗಿದೆ. ಇಂದಿನ ಯುವಕರು ಸಮಾಜ ಸಂಘಟಿಸಿ ಇನ್ನಷ್ಟು ಬಲಪಡಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ವಾಸಣ್ಣಕುರಡಗಿ, ರವಿ ದಂಡಿನ, ಡಾ. ಗೋವಿಂದಪ್ಪನವರ, ಬೆಟಗೇರಿ ಪಿಎಸ್‌ಐ ಲಕ್ಮಣ ಅರಿ, ಪ್ರಕಾಶ ಕರಿ, ಶರಣಪ್ಪ ದೊಣ್ಣೆಗುಡ್ಡ ಸೇರಿದಂತೆ ಮುಂತಾದವರು ಮಾತನಾಡಿದರು. ಪ್ರೊ. ಕರಿಯಪ್ಪ ಕೊಡವಳ್ಳಿ ಕನಕದಾಸರ ಜೀವನ ಕುರಿತು ಉಪನ್ಯಾಸ ನೀಡಿದರು. ಸಾಧಕರಿಗೆ ಸೇರಿದಂತೆ ಗಣ್ಯರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಬಿ.ಎಫ್. ದಂಡಿನ, ಡಾ. ಜಿ.ಬಿ. ಬಿಡಿನಹಾಳ, ಶಂಕುಂತಲಾ ದಂಡಿನ, ಸುರೇಖಾ ಕುರಿ, ನಾಗಪ್ಪ ಗುಗ್ಗರಿ, ನಾಗರಾಜ ಮೆಣಸಗಿ, ರಾಮಕೃಷ್ಣ ರೊಳ್ಳಿ, ಎಸ್.ಕೆ. ಪಾಟೀಲ, ರಾಜು ಕಲ್ಲೂರ, ರಾಮಣ್ಣ ಹೂವಣ್ಣವರ, ಪ್ರಹ್ಲಾದ ಹೊಸಳ್ಳಿ, ಚನ್ನಮ್ಮ ಹುಳಕಣ್ಣವರ, ಉಮಾ ದ್ಯಾವನೂರ, ನೇತ್ರಾವತಿ ಗುಂಡಿಕೇರಿ, ಮಂಜುನಾಥ ಜಡಿ, ಹೇಮಂತ ಎಸ್.ಜಿ., ಕುಮಾರ ಮಾರನಬಸರಿ, ಬಸವರಾಜ ಕುರಿ, ರವಿ ವಗ್ಗನವರ, ಶೇಖಣ್ಣ ಕಾಳೆ, ಮಂಜುನಾಥ ಮುಂಡವಾಡ, ರವಿ ಜೋಗಿನ, ಶಿವಣ್ಣ ಸಿಂಗಟಾಲಕೇರಿ ಸೇರಿದಂತೆ ಮುಂತಾದವರು ಇದ್ದರು.

ರೇಖಾ ಜಡಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಪ್ರೊ.ಮಾರುತಿ ಮಡ್ಡಿ ನಿರೂಪಿಸಿ, ವಂದಿಸಿದರು. ಇದಕ್ಕೂ ಮುನ್ನ ರಕ್ತದಾನ ಶಿಬಿರದಲ್ಲಿ ಹಲವಾರು ಯುವಕರು ರಕ್ತದಾನ ಮಾಡಿದರು. ಡಾ. ದತ್ರಾತ್ರೇಯ ವೈಕುಂಠೆ ಉಚಿತವಾಗಿ ರಕ್ತ ತಪಾಸಣೆ ನಡೆಸಿದರು. ನಂತರ ದಾಸಶ್ರೇಷ್ಠ ಭಕ್ತ ಕನಕದಾಸರ ಭಾವಚಿತ್ರದೊಂದಿಗೆ ಭವ್ಯ ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು, ಡೊಳ್ಳು, ಜಾಂಜ್ ಮೇಳಗಳ ಮೂಲಕ ಕನಕಭವನದಿಂದ ಆರಂಭಗೊಂಡು ನಗರದ ಪ್ರಮುಖ ರಸ್ತೆಗಳ ಮೂಲಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಮಾರೋಪಗೊಂಡಿತು.