ಸಾರಾಂಶ
ಸಾಮೂಹಿಕ ಮದುವೆಗಳು ಜಾತಿ, ಧರ್ಮಗಳನ್ನು ಒಗ್ಗೂಡಿಸುವ ಒಂದು ವೇದಿಕೆಯಾಗಿದೆ. ಇದರಲ್ಲಿ ಮದುವೆಯಾದವರು ಪುಣ್ಯವಂತರು. ಎಲ್ಲ ಧರ್ಮದ ಗುರು ಹಿರಿಯರು ಆರ್ಶೀವಾದ ಮಾಡುತ್ತಾರೆ
ಹನುಮಸಾಗರ: ಮಕ್ಕಳಿಗೆ ಮಾನವೀಯ ಮೌಲ್ಯ ಕಲಿಸುವ ಜತೆಯಲ್ಲಿ ಶಿಕ್ಷಣವಂತರನ್ನಾಗಿ ಮಾಡಬೇಕು ಎಂದು ಕುದರಿಮೋತಿಯ ವಿಜಯಮಹಾಂತ ಸ್ವಾಮೀಜಿ ಹೇಳಿದರು.
ಸಮೀಪದ ಪಟ್ಟಲಚಿಂತಿ ಗ್ರಾಮದಲ್ಲಿ ಶನಿವಾರ ಶ್ರೀಮಾರುತೇಶ್ವರ ಜಾತ್ರೆಯ ನಿಮಿತ್ತ ೯ ಜೋಡಿಗಳ ಸಾಮೂಹಿಕ ಮದುವೆಗಳಲ್ಲಿ ಮಾತನಾಡಿದರು. ಸಾಮೂಹಿಕ ಮದುವೆಗಳು ಜಾತಿ, ಧರ್ಮಗಳನ್ನು ಒಗ್ಗೂಡಿಸುವ ಒಂದು ವೇದಿಕೆಯಾಗಿದೆ. ಇದರಲ್ಲಿ ಮದುವೆಯಾದವರು ಪುಣ್ಯವಂತರು. ಎಲ್ಲ ಧರ್ಮದ ಗುರು ಹಿರಿಯರು ಆರ್ಶೀವಾದ ಮಾಡುತ್ತಾರೆ ಎಂದರು.ಶಾಸಕ ದೊಡ್ಡನಗೌಡ ಪಾಟೀಲ್, ಮುಖಂಡರಾದ ದೊಡ್ಡಬಸವ ಪಾಟೀಲ್ ಬಯ್ಯಾಪುರ, ಭೀಮನಗೌಡ ಪಾಟೀಲ್, ಗ್ರಾಪಂ ಅಧ್ಯಕ್ಷೆ ಯಮನಮ್ಮ ಮಲ್ಲಪ್ಪ ಮುಗಳಿ, ಸಾಂತಯ್ಯ ಗಡಾದ, ಹನಮಪ್ಪ ಕಲ್ಲೂರ, ರಾಘವೇಂದ್ರ ರಾಜೂರ, ಹೊನ್ನಪ್ಪ ರಾಜೂರ, ಮಾಸನಗೌಡ ಗೌಡರ, ಸೋಮಣ್ಣ ಓಲೇಕಾರ, ಶರಣಪ್ಪ ಮುಗಳಿ, ವಿಜಯ ಇಂಗಳದಾಳ, ಶರಣಪ್ಪ ಇಂಗಳದಾಳ, ಧಾನಪ್ಪ ಮುಗಳಿ, ಭಾಸ್ಕರ ಇಂಗಳದಾಳ, ಚಂದಪ್ಪ ಗುಡೂರ, ರಂಗಪ್ಪ ಬೊಮ್ಮನಾಳ, ಹನುಮಪ್ಪ ದಂಡಿನ, ನೂರೊಂದಪ್ಪ ದಂಡಿನ, ಗ್ರಾಪಂ ಸದಸ್ಯರು, ಮುಖಂಡರು, ಯುವಕರು, ಮಹಿಳಾ ಸಂಘದವರು, ಕಡಿವಾಲ, ಮಾಲಗಿತ್ತಿ, ಮಾಸ್ತಕಟ್ಟಿ, ಹನುಮನಾಳ, ಜಹಗೀರಗುಡದೂರ ಸೇರಿದಂತೆ ನಾನಾ ಗ್ರಾಮಸ್ಥರು ಇದ್ದರು.