ಸಾರಾಂಶ
ಮಕ್ಕಳಿಗೆ ವಿದ್ಯೆಯ ಜೊತೆಗೆ ಸಂಸ್ಕಾರ ನೀಡುವುದು ಬಹಳ ಮುಖ್ಯ ಎಂದು ಮಾಜಿ ಶಾಸಕ ಎ. ಟಿ. ರಾಮಸ್ವಾಮಿ ತಿಳಿಸಿದರು. ಎಳೆಯ ಮಕ್ಕಳು ಬಿಳಿಯ ಹಾಳೆಯಿದ್ದಂತೆ. ಅದರ ಮೇಲೆ ಏನು ಬರೆಯುತ್ತೇವೋ ಅದು ಕಾಣಿಸುತ್ತದೆ. ಇಂದು ಮೌಲ್ಯಯುತ ಶಿಕ್ಷಣ ಕೊಡಿಸುತ್ತಿದ್ದೇವೆ ಹೊರತು ಸಂಸ್ಕಾರ ಕೊಡಿಸುತ್ತಿಲ್ಲ. ಇದರಿಂದ ದೊಡ್ಡ ದೊಡ್ಡ ಅನಾಹುತಗಳೆ ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಅರಕಲಗೂಡು: ಮಕ್ಕಳಿಗೆ ವಿದ್ಯೆಯ ಜೊತೆಗೆ ಸಂಸ್ಕಾರ ನೀಡುವುದು ಬಹಳ ಮುಖ್ಯ ಎಂದು ಮಾಜಿ ಶಾಸಕ ಎ. ಟಿ. ರಾಮಸ್ವಾಮಿ ತಿಳಿಸಿದರು.
ಪಟ್ಟಣದ ಎ. ವಿ. ಕೆ ಅಕಾಡೆಮಿ ಮತ್ತು ಬ್ರೈಟ್ ಕಾನ್ವೆಂಟ್ ಆವರಣದಲ್ಲಿ ಆಯೋಜಿಸಿದ್ದ ಸಂಸ್ಕೃತಿ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಳೆಯ ಮಕ್ಕಳು ಬಿಳಿಯ ಹಾಳೆಯಿದ್ದಂತೆ. ಅದರ ಮೇಲೆ ಏನು ಬರೆಯುತ್ತೇವೋ ಅದು ಕಾಣಿಸುತ್ತದೆ. ಇಂದು ಮೌಲ್ಯಯುತ ಶಿಕ್ಷಣ ಕೊಡಿಸುತ್ತಿದ್ದೇವೆ ಹೊರತು ಸಂಸ್ಕಾರ ಕೊಡಿಸುತ್ತಿಲ್ಲ. ಇದರಿಂದ ದೊಡ್ಡ ದೊಡ್ಡ ಅನಾಹುತಗಳೆ ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.ಅರಕಲಗೂಡು ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿದರು. ಈ ವೇಳೆ ಬಿಇಒ ನಾರಾಯಣ್, ಪಪಂ ಅಧ್ಯಕ್ಷ ಪ್ರದೀಪ್ ಕುಮಾರ್, ಸದಸ್ಯ ಕೃಷ್ಣಯ್ಯ, ಸಂಸ್ಥೆ ಕಾರ್ಯದರ್ಶಿ ಶೇಷಾದ್ರಿ ಮತ್ತಿತರರು ಉಪಸ್ಥಿತರಿದ್ದರು.