ಶಿಕ್ಷಕರ ದಿನ ಹಿನ್ನೆಲೆ ಚಾಮರಾನಗರದ ಸೇವಾ ಭಾರತಿ ಶಾಲೆಯಲ್ಲಿ ಮಕ್ಕಳಿಂದ ಶಿಕ್ಷಕರಿಗೆ ಪಾದಪೂಜೆ

| Published : Sep 07 2024, 01:31 AM IST

ಶಿಕ್ಷಕರ ದಿನ ಹಿನ್ನೆಲೆ ಚಾಮರಾನಗರದ ಸೇವಾ ಭಾರತಿ ಶಾಲೆಯಲ್ಲಿ ಮಕ್ಕಳಿಂದ ಶಿಕ್ಷಕರಿಗೆ ಪಾದಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಚಾಮರಾಜನಗರದ ಸೇವಾ ಭಾರತಿ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರ ಪಾದಪೂಜೆ ಮಾಡಿ, ಆರತಿ ಬೆಳಗಿ, ಸಿಹಿ ಹಂಚಿ ಶಿಕ್ಷಕರ ದಿನಾಚರಣೆಯನ್ನು ಬಹಳ ಅರ್ಥಪೂರ್ಣವಾಗಿ ಆಚರಣೆ ಮಾಡಿದರು.

ಅರ್ಥಪೂರ್ಣ ಶಿಕ್ಷಕರ ದಿನ ಆಚರಣೆ । ಶಿಕ್ಷಕರಿಗೆ ಪುಷ್ಪವೃಷ್ಠಿ, ಆರತಿ

ಚಾಮರಾಜನಗರ: ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಗರದ ಸೇವಾ ಭಾರತಿ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರ ಪಾದಪೂಜೆ ಮಾಡಿ, ಆರತಿ ಬೆಳಗಿ, ಸಿಹಿ ಹಂಚಿ ಶಿಕ್ಷಕರ ದಿನಾಚರಣೆಯನ್ನು ಬಹಳ ಅರ್ಥಪೂರ್ಣವಾಗಿ ಆಚರಣೆ ಮಾಡಿದರು.

ನಗರದ ಶಂಕರಪುರ ಬಡಾವಣೆಯಲ್ಲಿ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಎಲ್ಲಾ ಶಿಕ್ಷಕರನ್ನು ಒಂದಡೆ ಸಾಲಾಗಿ ಕೂರಿಸಿ, ಬಳಿಕ ಶಿಕ್ಷಕರ ಪಾದಪೂಜೆ ಮಾಡಿ, ಪುಷ್ಪವೃಷ್ಠಿ ಹರಿಸಿ, ಅರತಿ ಬೆಳಗಿ ವಿದ್ಯಾ ಕಲಿಸಿದ ಗುರುವಿಗೆ ನಮಸ್ಕಾರ ಮಾಡಿದರು.

ಬಳಿಕ ಎಲ್ಲ ಮಕ್ಕಳು ತಾವು ತಂದಿದ್ದ ಸಿಹಿಯನ್ನು ಶಿಕ್ಷಕರಿಗೆ ನೀಡಿ, ಆಶೀರ್ವಾದ ಪಡೆದುಕೊಂಡರು. ಬಳಿಕ ನಡೆದ ವೇದಿಕೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆಯ ಸದಸ್ಯರು ಆದ ಕನ್ನಡ ಮಾಧ್ಯಮ ಶಾಲೆಯ ಉಸ್ತುವಾರಿ ಎಸ್.ಬಾಲಸುಬ್ರಮಣ್ಯಂ, ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರವಾದ ವೃತ್ತಿಯಾಗಿದ್ದು, ಸಮಾಜದಲ್ಲಿ ಶಿಕ್ಷಕರಿಗೆ ವಿಶೇಷ ಗೌರವ ಹಾಗೂ ಸ್ಥಾನಮಾನ ನೀಡಿದೆ. ಈ ಹಿಂದೆ ಗುರುಗಳ ನಿವಾಸಕ್ಕೆ ಶಿಕ್ಷಣ ಕಲಿಸಲು ಮಕ್ಕಳನ್ನು ಬಿಡುತ್ತಿದ್ದರು. ಗುರುಕುಲ ಪದ್ಧತಿ ಇತ್ತು. ಗುರುಗಳ ಆಶ್ರಯದಲ್ಲಿಯೇ ಶಿಕ್ಷಣ ಕಲಿಯುತ್ತಿದ್ದ ಕಾಲವೂ ಇತ್ತು. ಈಗ ಶಾಲೆಗಳು ಆರಂಭವಾಗಿದೆ ಎಂದು ಹೇಳಿದರು.

ದೇಶದ ರಾಷ್ಟ್ರಪತಿಗಳಾಗಿದ್ದ ಡಾ.ಸರ್ವಪಲ್ಲಿ ರಾಧಕೃಷ್ಣ ಅವರು ಒಬ್ಬ ಶಿಕ್ಷಕರಾಗಿ ಉತ್ತಮ ಸೇವೆ ಸಲ್ಲಿಸಿ, ರಾಷ್ಟ್ರದ ಅತ್ಯುನ್ನತವಾದ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದ್ದರು. ಅವರ ಸೇವೆಯನ್ನು ಪರಿಗಣಿಸಿ ಅವರ ಹುಟ್ಟಿದ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ ಎಂದರು.

ಸೇವಾ ಭಾರತಿ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಉಪಾಧ್ಯಾಯ ಶ್ರೀನಿವಾಸ್ ಹಾಗೂ ಸಹ ಶಿಕ್ಷಕರು ಹಾಜರಿದ್ದರು.