ಸಾರಾಂಶ
ತರೀಕೆರೆ: ಸೆಲ್ಫೀ ತೆಗೆದುಕೊಳ್ಳುವ ಭರದಲ್ಲಿ ಪ್ರಪಾತಕ್ಕೆ ಬಿದ್ದು ಶಿಕ್ಷಕರೊಬ್ಬರು ಪ್ರಾಣ ಕಳೆದುಕೊಡಿರುವ ಘಟನೆ ಲಿಂಗದಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ತರೀಕೆರೆ: ಸೆಲ್ಫೀ ತೆಗೆದುಕೊಳ್ಳುವ ಭರದಲ್ಲಿ ಪ್ರಪಾತಕ್ಕೆ ಬಿದ್ದು ಶಿಕ್ಷಕರೊಬ್ಬರು ಪ್ರಾಣ ಕಳೆದುಕೊಡಿರುವ ಘಟನೆ ಲಿಂಗದಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ಲಕ್ಷ್ಮಿಸಾಗರ ಗ್ರಾಮದ ಶ್ರೀ ಬಸವೇಶ್ವರ ಪ್ರೌಢ ಶಾಲಾ ಶಿಕ್ಷಕ ಸಂತೋಷ್ (40) ಮೃತ ದುಧೈವಿ.ವಾರಾಂತ್ಯದ ರಜೆಯನ್ನು ಕಳೆಯಲೆಂದು ಕೆಮ್ಮಣ್ಣುಗುಂಡಿಗೆ ಪತ್ನಿ ಸಮೇತವಾಗಿ ಆಗಮಿಸಿದ್ದ ತರೀಕೆರೆ ಬಳಿಯ ಲಕ್ಷ್ಮಿಸಾಗರ ಗ್ರಾಮದ ಶಿಕ್ಷಕ ಸಂತೋಷ್ ಕೆಮ್ಮಣ್ಣು ಗುಂಡಿ ಬಳಿಯ ತಿರುವಿನಲ್ಲಿ ಫೋಟೋ ತೆಗೆದು ಕೊಳ್ಳುವಾಗ ಕಾಲು ಜಾರಿ ಪ್ರಪಾತಕ್ಕೆಬಿದ್ದಿದ್ದಾರೆ. ಅಷ್ಟು ಎತ್ತರದಿಂದ ಬಿದ್ದ ಸಂತೋಷ್ ಪ್ರಾಣ ಕಳೆದುಕೊಂಡಿದ್ದಾರೆ. ವಿಷಯ ತಿಳಿದ ಲಿಂಗದಹಳ್ಳಿ ಆರಕ್ಷಕ ಠಾಣಾಧಿಕಾರಿ ಶಶಿಕುಮಾರ್ ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಪ್ರಪಾತ ದಿಂದ ಶವವನ್ನು ಮೇಲೆಕ್ಕೆತ್ತಿದ್ದಾರೆ. ಪೋಸ್ಟ್ ಮಾರ್ಟಮ್ ಗಾಗಿ ತರೀಕೆರೆ ಸರ್ಕಾರಿ ಆಸ್ಪತ್ರೆಗೆ ಶವವನ್ನು ರವಾನಿಸಲಾಗಿದೆ. ಪ್ರಕರಣವನ್ನು ಪೊಲಿಸರು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
20ಕೆಟಿಆರ್.ಕೆ.20ಃ ಸಂತೋಷ್