ಶಿಕ್ಷಕ, ವೈದ್ಯ ಅತ್ಯಂತ ಶ್ರೇಷ್ಠ ವೃತ್ತಿ: ಸಚಿವ ಶಿವರಾಜ ತಂಗಡಗಿ

| Published : Feb 01 2024, 02:01 AM IST

ಶಿಕ್ಷಕ, ವೈದ್ಯ ಅತ್ಯಂತ ಶ್ರೇಷ್ಠ ವೃತ್ತಿ: ಸಚಿವ ಶಿವರಾಜ ತಂಗಡಗಿ
Share this Article
  • FB
  • TW
  • Linkdin
  • Email

ಸಾರಾಂಶ

ಅಕ್ಷರ ಕಲಿಸುವ ಗುರು, ಜೀವ ಉಳಿಸುವ ವೈದ್ಯರ ವೃತ್ತಿ ಅತ್ಯಂತ ಶ್ರೇಷ್ಠವಾದುದು. ಗ್ರಾಮೀಣ ಪ್ರದೇಶದಲ್ಲಿನ ಖಾಸಗಿ ಶಿಕ್ಷಣ ಸಂಸ್ಥೆಗಳು ಭವಿಷ್ಯಕ್ಕೆ ಶಿಕ್ಷಕರನ್ನು ಮತ್ತು ವೈದ್ಯರನ್ನು ಹುಟ್ಟು ಹಾಕಿ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಪೂರಕವಾಗಿ ಸಹಾಯ ಮಾಡುತ್ತಿವೆ.

ಕಾರಟಗಿ: ಅಕ್ಷರ ಕಲಿಸುವ ಗುರು, ಜೀವ ಉಳಿಸುವ ವೈದ್ಯರ ವೃತ್ತಿ ಅತ್ಯಂತ ಶ್ರೇಷ್ಠವಾದುದು. ಗ್ರಾಮೀಣ ಪ್ರದೇಶದಲ್ಲಿನ ಖಾಸಗಿ ಶಿಕ್ಷಣ ಸಂಸ್ಥೆಗಳು ಭವಿಷ್ಯಕ್ಕೆ ಶಿಕ್ಷಕರನ್ನು ಮತ್ತು ವೈದ್ಯರನ್ನು ಹುಟ್ಟು ಹಾಕಿ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಪೂರಕವಾಗಿ ಸಹಾಯ ಮಾಡುತ್ತಿವೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.ತಾಲೂಕಿನ ಸಿದ್ದಾಪುರದ ಶರಣಬಸವೇಶ್ವರ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಮತ್ತು ವಿಶ್ವಚೇತನ ಆಂಗ್ಲ ಮಾಧ್ಯಮ ಮತ್ತು ಪಿಯು ಕಾಲೇಜಿನಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಮಕ್ಕಳ ಉತ್ಸವ, ಸಾಂಸ್ಕೃತಿಕ ಕಲರವ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕಳೆದ ೧೫ ವರ್ಷಗಳ ಹಿಂದೆ ದೇವಸ್ಥಾನದಲ್ಲಿ ಗುಡಿಸಲಿನಲ್ಲಿ ಸಣ್ಣದಾಗಿ ಆರಂಭವಾಗಿದ್ದ ಶಾಲೆ ಇಂದು ಸ್ವಂತ ಜಾಗದಲ್ಲಿ ಸುಸಜ್ಜಿತ ಬೃಹತ್ ಕಟ್ಟಡ ನಿರ್ಮಿಸಿ ಇಂದು ೧,೧೦೦ ವಿದ್ಯಾರ್ಥಿಗಳುನ್ನು ಈ ಶಾಲೆಯಲ್ಲಿ ಶಿಕ್ಷಣ ಕಲಿಯುತ್ತಿರುವುದು ತುಂಬ ಸಣ್ಣ ಮಾತಲ್ಲ. ಒಂದು ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸುವುದಂದರೆ ಅದು ಸಣ್ಣ ಕೆಲಸವಲ್ಲ ಮತ್ತು ಸಣ್ಣ ಮಾತಲ್ಲ. ಗ್ರಾಮೀಣ ಪ್ರದೇಶದ ಶಿಕ್ಷಣ ಸಂಸ್ಥೆಗಳು ದೂರದೃಷ್ಟಿಯನ್ನಿಟ್ಟುಕೊಂಡು ಕೆಲಸ ಮಾಡಿದರೆ ಮಾತ್ರ ಹಳ್ಳಿ ಮತ್ತು ಹಳ್ಳಿ ಮಕ್ಕಳು ಬೆಳೆದು ಸಾಧನೆ ಮಾಡಲು ಸಾಧ್ಯವೆಂದರು.ಖಾಸಗಿ ಶಾಲೆಗಳಲ್ಲಿ ವಸತಿ ನಿಲಯಗಳನ್ನು ಮಾಡಲು ಅವಕಾಶ ಇರುವುದರಿಂದ ಮುಂದಿನ ದಿನಗಳಲ್ಲಿ ಸಿದ್ದಾಪುರದಲ್ಲಿ ಈ ಶಿಕ್ಷಣ ಸಂಸ್ಥೆಗೆ ಹಾಸ್ಟಲ್ ಸೌಲಭ್ಯ ಆರಂಭಕ್ಕೆ ಅವಕಾಶ ಮಾಡಿಕೊಡುವುದಾಗಿ ಸಚಿವ ತಂಗಡಗಿ ಭರವಸೆ ನೀಡಿದರು.ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮತ್ತು ಪಿಯುಸಿಯಲ್ಲಿ ಕೊಪ್ಪಳ ಜಿಲ್ಲೆಗೆ ಪ್ರಥಮ ರ್‍ಯಾಂಕ್ ಗಳಿಸಿದ ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಅತಿಹೆಚ್ಚು ಅಂಕಗಳಿದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಕೋವಿಡ್-೧೯ ಸಂದರ್ಭದಲ್ಲಿ ಮುಂಚೂಣಿ ಕಾರ್ಯಕರ್ತರಾಗಿ ವಿಶೇಷ ಸೇವೆಗೈದ ಗ್ರಾಪಂ, ಆರೋಗ್ಯ ಇಲಾಖೆ, ಅಂಗನವಾಡಿ, ಆಶಾ, ಕಂದಾಯ ಇಲಾಖೆ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಸಚಿವ ತಂಗಡಗಿ ಸನ್ಮಾನಿಸಿ ಗೌರವಿಸಿದರು.ಸಾನ್ನಿಧ್ಯವನ್ನು ಗ್ರಾಮದ ಹಿರೆಮಠದ ಶಿವಕುಮಾರಸ್ವಾಮಿ, ಉಮೇಶ ತಾತಾ ಹಾಗೂ ಕನಕಗಿರಿಯ ಗಂಗಾಧರಯ್ಯಸ್ವಾಮಿ ಕಲುಬಾಗಿಲ ಮಠ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಬಸವರಾಜ ನೀರಗಂಟಿ, ಜಿಪಂ ಮಾಜಿ ಉಪಾಧ್ಯಕ್ಷ ಬಿ.ಬಸವರಾಜಪ್ಪ, ಮುಖಂಡರಾದ ಡಾ.ಕೆ.ಎನ್ ಪಾಟೀಲ್, ವೆಂಕನಗೌಡ ಹಿರೆಗೌಡ್ರು, ಶರಣಪ್ಪ ಬಾವಿ, ಡಾ.ಶ್ರೀನಿವಾಸ ಹ್ಯಾಟಿ, ರಾಮಲಿಂಗಪ್ಪ ಹಳೆಮನಿ, ಮಲ್ಲಿಕಾರ್ಜುನ ಹೊಸಮನಿ, ಅಮರೇಶ ತಳವಾರ, ಎಂ.ಡಿ. ಸಿರಾಜ್, ಜನಗಂಡೆಪ್ಪ ಪೂಜಾರ, ಪ್ರಕಾಶ ಬಾವಿ, ಜಂಬುನಾಥ ಇಟಗಿ, ಅಬ್ದುಲ್ ರೌಫ್, ವಿಭೂತಿ ಗುಂಡಪ್ಪ, ಹಸಿನಾಬೇಗಂ ಮಾನ್ವಿ, ಗಂಗಮ್ಮ ನಾಗನಗೌಡ, ವಿರೇಶ ಬಲ್ಲೂರು, ಮಲ್ಲಿಕಾರ್ಜುನ, ಚಂದ್ರುಗೌಡ ಇದ್ದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.