ಸಾರಾಂಶ
ದಾವಣಗೆರೆ ತಾಲೂಕಿನ ಎಲೆಬೇತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ ಹಾಗೂ ಶಿಕ್ಷಕ ದಿನಾಚರಣೆಯನ್ನು ಆಚರಿಸಲಾಯಿತು.
- ಎಲೆಬೇತೂರು ಸರ್ಕಾರಿ ಶಾಲೆ ಕಾರ್ಯಕ್ರಮದಲ್ಲಿ ಷಡಕ್ಷರಪ್ಪ ಅಭಿಮತ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ತಾಲೂಕಿನ ಎಲೆಬೇತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ ಹಾಗೂ ಶಿಕ್ಷಕ ದಿನಾಚರಣೆಯನ್ನು ಆಚರಿಸಲಾಯಿತು.
ಕಸಾಪ ತಾಲೂಕು ನಿರ್ದೇಶಕ ಷಡಕ್ಷರಪ್ಪ ಎಂ.ಬೇತೂರು ಮಾತನಾಡಿ, ಪ್ರತಿವರ್ಷ ಶಿಕ್ಷಕ ದಿನಾಚರಣೆಯನ್ನು ಭಾರತದ ಮಾಜಿ ರಾಷ್ಟ್ರಪತಿ ಡಾ.ಸರ್ವೆಪಲ್ಲಿ ರಾಧಾ ಕೃಷ್ಣನ್ ಹೆಸರಿನಲ್ಲಿ ಆಚರಿಸುತ್ತೇವೆ. ಅಕ್ಷರ ವಿದ್ಯೆ ಕಲಿಸಿದ, ಜೀವನ ಪಾಠ ಕಲಿಸಿದ, ಗುರು ಹಿರಿಯರನ್ನು ಗೌರವದಿಂದ ಸ್ಮರಿಸುವ ಪವಿತ್ರವಾದ ದಿನ ಶಿಕ್ಷಕ ದಿನಾಚರಣೆ ಎಂದರು.ಅಜ್ಞಾನದಿಂದ ಸುಜ್ಞಾನದತ್ತ ಕತ್ತಲೆಯಿಂದ ಬೆಳಕಿನ ಕರೆದೊಯ್ಯುವ ಅದ್ಭುತವಾದ ಶಕ್ತಿಯೇ ಗುರು, ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅತ್ಯಂತ ಶ್ರೇಷ್ಠವಾದ ಸ್ಥಾನವಿದೆ ಬದುಕಿನಲ್ಲಿ ಅಕ್ಷರ ಜ್ಞಾನ, ಬದುಕುವ ಕಲೆ, ಜೀವನ ಪಾಠ ಹೇಳುವ ವ್ಯಕ್ತಿಯು ನಮ್ಮ ಬದುಕಿನಲ್ಲಿ ಗೌರವಯುತವಾದ ಗುರುವಿನ ಸ್ಥಾನವನ್ನು ಅಲಂಕರಿಸುತ್ತಾರೆ. ಮನೆಯ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಬಿ.ಸುಜಾತ ಶಿಕ್ಷಕರಾದ ಜಿ.ವಾಣಿ, ಟಿ.ಎಂ. ವಸಂತ, ಆರ್. ಅನ್ನಪೂರ್ಣ, ಎನ್. ಗಂಗಮ್ಮ,ಎಚ್.ಶಿಲ್ಪ, ಮಂಗಳ ಷಡಕ್ಷರಪ್ಪ ಉಪಸ್ಥಿತರಿದ್ದರು.- - - -6ಕೆಡಿವಿಜಿ41ಃ:
ಎಲೆಬೇತೂರಿನ ಸರ್ಕಾರಿ ಹಿ.ಪ್ರಾ. ಶಾಲೆಯಲ್ಲಿ ಶಿಕ್ಷಕರ ದಿನ ಆಚರಿಸಲಾಯಿತು.