ಶಿಕ್ಷಕರ ಸೇವಾ ಸೌಲಭ್ಯ ಒದಗಿಸಿದ್ದೇವೆ: ರುದ್ನೂರ

| Published : Feb 07 2024, 01:46 AM IST

ಸಾರಾಂಶ

ಕ್ಲಸ್ಟರ್ ಮಟ್ಟದ ಕಾರ್‍ಯಕ್ರಮಗಳಲ್ಲಿ ದುಂದುವೆಚ್ಚ ಮಾಡದೆ, ಸಮಯ ವ್ಯರ್ಥ ಆಗದಂತೆ ಸರಳವಾಗಿ ಶಿಷ್ಟಾಚಾರದಂತೆ ಜನಪ್ರತಿನಿಧಿಗಳನ್ನು ಭಾಗವಹಿಸುವಂತೆ ಕ್ರಮವಹಿಸಬೇಕು: ಬಿಇಒ ಸಿದ್ದವೀರಯ್ಯ

ಕನ್ನಡಪ್ರಭ ವಾರ್ತೆ ಚಿತ್ತಾಪುರ

ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರ ಸೇವಾ ಸೌಲಭ್ಯವನ್ನು ಅವರಿಗೆ ಸಕಾಲಕ್ಕೆ ಒದಗಿಸುವ ಪೂರಕ ಕಾರ್ಯಕ್ರಮವು ಗುರು ಸ್ಪಂದನ ಕಾರ್ಯಕ್ರಮವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದ್ನುರ ಹೇಳಿದರು.

ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ಗುರು ಸ್ಪಂದನ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನ ಎಲ್ಲಾ ಶಿಕ್ಷಕರ ಸೇವಾ ಸೌಲಭ್ಯ ಒದಗಿಸಿದ್ದೇವೆ. ಇಂದು ಎಲ್ಲಾ ಶಿಕ್ಷಕರ ಸೇವಾ ಪುಸ್ತಕಗಳಲ್ಲಿ ವಿವಿಧ ಮಾಹಿತಿ ಅಪ್ಡೇಟ್ ಮಾಡಲಾಗುತ್ತದೆ. ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಎಲ್ಲಾ ಶಿಕ್ಷಕರು ಪ್ರಯತ್ನಿಸಬೇಕೆಂದರು.

ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳೂಂಡಗಿ ಮಾತನಾಡಿ, ಕ್ಲಸ್ಟರ್ ಮಟ್ಟದ ಕಾರ್‍ಯಕ್ರಮಗಳಲ್ಲಿ ಶಾಲು, ಹಾರ, ನೆನಪಿನ ಕಾಣಿಕೆಗೆ ದುಂದುವೆಚ್ಚ ಮಾಡದೇ ಸಮಯ ವ್ಯರ್ಥ ಆಗದಂತೆ ಸರಳವಾಗಿ ಶಿಷ್ಟಾಚಾರದಂತೆ ಜನಪ್ರತಿನಿಧಿಗಳನ್ನು ಭಾಗವಹಿಸುವಂತೆ ಕ್ರಮವಹಿಸಬೇಕು ಎಂದು ಸಲಹೆ ನೀಡಿದರು.

ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ ನಾಲವಾರ ಮತ್ತು ಸಂಘಟನಾ ಕಾರ್‍ಯದರ್ಶಿ ಶರಣಪ್ಪ ಐಕೂರ ಮಾತನಾಡಿದರು.

ನೂತನ ತಾಲೂಕು ದೈಹಿಕ ಶಿಕ್ಷಣಧಿಕಾರಿ ಶಿವಶರಣಪ್ಪ ಮಂಠಾಳೆ ಅವರಿಗೆ ಸನ್ಮಾನಿಸಲಾಯಿತು. ಮಾಜಿ ದೈಹಿಕ ಶಿಕ್ಷಣಧಿಕಾರಿ ದೇವಿಂದ್ರರಡ್ಡಿ ಅವರಿಗೆ ಸನ್ಮಾನಿಸಿ ಬೀಳ್ಕೊಡಲಾಯಿತು. ಕೆನರಾ ಬ್ಯಾಂಕ್ ಸಿಬ್ಬಂದಿ ರಾಜೇಶ್ವರಿ ರವರು ಶಿಕ್ಷಕರಿಗೆ ಬ್ಯಾಂಕ್ ನಿಂದ ಸಾಲ-ಸೌಲಭ್ಯ ಕುರಿತು ಮಾಹಿತಿ ನೀಡಿದರು. ಅತಿಥಿಗಳಾಗಿ ಕ್ಷೇತ್ರಸಮನ್ವಯದಿಕಾರಿ ಮಲ್ಲಿಕರ‍್ಜುನ ಸೇಡಂ.ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪ್ರಕಾಶ್ ನಾಯ್ಕೋಡಿ. ಕಾಶಿರಾಯ ಕಲಾಲ್. ಹಾಗೂ ಸಂಘದ ಪದಾಧಿಕಾರಿಗಳು ಶಿಕ್ಷಕರು ಉಪಸ್ಥಿತರಿದ್ದರು.