ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಮದರಕಲ್‌ ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕ ಉತ್ತಮ ಮಾಲೆ ಅವರು ಮಕ್ಕಳಿಗೆ ಗಣಿತ ವಿಷಯ ಸುಲಭವಾಗಿ ಅರ್ಥವಾಗುವ ನಿಟ್ಟಿನಲ್ಲಿ ಹಲವು ವಿಶೇಷತೆಗಳನ್ನೊಳಗೊಂಡ ಲ್ಯಾಬ್‌ ಸ್ಥಾಪಿಸಿ, ಬೋಧನೆ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ರಾಯಚೂರು

ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಮದರಕಲ್‌ ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕ ಉತ್ತಮ ಮಾಲೆ ಅವರು ಮಕ್ಕಳಿಗೆ ಗಣಿತ ವಿಷಯ ಸುಲಭವಾಗಿ ಅರ್ಥವಾಗುವ ನಿಟ್ಟಿನಲ್ಲಿ ಹಲವು ವಿಶೇಷತೆಗಳನ್ನೊಳಗೊಂಡ ಲ್ಯಾಬ್‌ ಸ್ಥಾಪಿಸಿ, ಬೋಧನೆ ಮಾಡುತ್ತಿದ್ದಾರೆ.

ಕಳೆದ 18 ವರ್ಷ ಗಳಿಂದ ಕೆಲಸ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಉತ್ತಮ ಮಾಲೆ ಅವರು ಪ್ರತಿ ತಿಂಗಳು ತಮ್ಮ ಸಂಬಳದಿಂದ ಕೂಡಿಟ್ಟ ಹಣ ಹಾಗೂ ದಾನಿಗಳಿಂದ ದೇಣಿಗೆ ಪಡೆದು. ಶಾಲೆಯ ಕೊಠಡಿಯೊಂದರಲ್ಲಿ ಸುಸಜ್ಜಿತ, 8 ರಿಂದ 10ನೇ ತರಗತಿಯ ಗಣಿತ ಪುಸ್ತಕಗಳ ಪಠ್ಯಕ್ಕಾನುಸಾರವಾಗಿ ಚಾರ್ಟ್ಸ್‌, ಮಾಡೇಲ್‌ ಮತ್ತು ಇತರೆ ಪರಿಕರಗಳನ್ನು ಖರೀದಿಸಿ ಲ್ಯಾಬ್‌ ನಿರ್ಮಿಸಿದ್ದಾರೆ.

ತರಗತಿಗಳಲ್ಲಿ ಪಠ್ಯವನ್ನು ನೇರವಾಗಿ ಬೋಧನೆ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಸರಿಯಾಗಿ ಅರ್ಥವಾಗುವುದಿಲ್ಲ ಎನ್ನುವುದನ್ನು ಮನಗಂಡ ಶಿಕ್ಷಕ ಉತ್ತಮ ಮಾಲೆ ಅವರು ಈ ರೀತಿಯಾಗಿ ಗಣಿತದ ಲ್ಯಾಬ್‌ ರೂಪಿಸಿ ಸುಲಭ, ಸರಳವಾಗಿ ಪಾಠ ಮಾಡುತ್ತಿದ್ದು, ಇದರೊಟ್ಟಿಗೆ ಪ್ರೋಜೆಕ್ಟರ್‌ ಮುಖಾಂತರ ವಿಡಿಯೋಗಳನ್ನು ತೋರಿಸಿ ಗಣಿತ ಕಲಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಕಳೆದ ಏಳು ವರ್ಷಗಳಿಂದ ಲ್ಯಾಬ್ ಮುಖಾಂತರ ಪಾಠ ಮಾಡುತ್ತಿದ್ದು, ಪಠ್ಯ ಹಾಗೂ ವಿಷಯಗಳಿಗನು ಸಾರವಾಗಿ ವರ್ಷದಿಂದ ವರ್ಷ ಲ್ಯಾಬನ್ನು ಅಭಿವೃದ್ಧಿ ಮಾಡುತ್ತಾ ಬರುತ್ತಿದ್ದಾರೆ. ಸಹಜವಾಗಿ ಶಾಲಾ-ಕಾಲೇಜುಗಳಲ್ಲಿ ವಿಜ್ಞಾನ ಮತ್ತು ತಾಂತ್ರಿಕ ವಿಷಯಗಳಿಗೆ ಲ್ಯಾಬ್‌ಗಳನ್ನು ನೋಡುತ್ತೇವೆ ಆದರೆ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರು ಗಣಿತ ವಿಷಯಕ್ಕಾಗಿ ಲ್ಯಾಬ್‌ ಆರಂಭಿಸಿ ಮಕ್ಕಳಿಗೆ ಪರಿಣಾಮಕಾರಿ ಗಣಿತ ಕಲಿಸುವ ಪ್ರಯತ್ನವನ್ನು ಪ್ರಮಾಣಿಕವಾಗಿ ಮಾಡುತ್ತಾ ಬಂದಿದ್ದು, ಅದರ ಫಲವಾಗಿಯೇ ಲ್ಯಾಬ್‌ ಮುಖಾಂತರ ಗಣಿತ ಕಲಿತ ವಿದ್ಯಾರ್ಥಿಗಳು ಆ ವಿಷಯದಲ್ಲಿ ಉತ್ತಮ ಅಂಕಗಳನ್ನು ಪಡೆಯುತ್ತಿದ್ದಾರೆ.

ಈ ಇಂಗ್ಲಿಷ್ ಭಾಷಾ ಶಿಕ್ಷಕ ಕೈಯಲ್ಲಿ ಕಲಿತ ಮಕ್ಕಳು ಫೇಲಾಗಲ್ಲ: ಜಿಲ್ಲೆ ಸಿಂಧನೂರು ನಗರದ ಪಿಎಂಶ್ರೀ ಆದರ್ಶ ವಿದ್ಯಾಲಯ (ಸರ್ಕಾರಿ) ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ವೀರೇಶ್‌ ಗೋನವಾರ ಅವರ ಕೈಯಲ್ಲಿ ಕಲಿತ ಮಕ್ಕಳು ಆ ವಿಷಯಲ್ಲಿ ಫೇಲಾಗಲ್ಲ ಎನ್ನುವ ನಂಬಿಕೆಯನ್ನು ಹುಟ್ಟಿಸಿಕೊಂಡಿರುವ ಶಿಕ್ಷಕರಾಗಿದ್ದಾರೆ.

ತಮ್ಮ 26 ನೇ ವಯಸ್ಸಿನಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿದ ವೀರೇಶ್‌ ಅವರು ತಾಲೂಕಿನ ಕಲಮಂಗಿ ಶಾಲೆಯಲ್ಲಿ ಸರಿ-ಸುಮಾರು 11 ವರ್ಷಗಳ ಅದೇ ಗ್ರಾಮದ ಶಾಲೆಯಲ್ಲಿ ಪ್ರತಿ ವರ್ಷ ಎಸ್.ಎಸ್.ಎಸ್.ಎಲ್.ಸಿ ಆಂಗ್ಲ ಭಾಷಾ ವಿಷಯದಲ್ಲಿ ಸರಾಸರಿ ಶೇ.90ರಷ್ಟು ಫಲಿತಾಂಶವನ್ನು ಮತ್ತು 3 ವರ್ಷಗಳಲ್ಲಿ ಶೇ.100ರಷ್ಟು ಫಲಿತಾಂಶವನ್ನುದಾಖಲಿಸುವ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಿಗೆ ನೆಚ್ಚಿನ ಶಿಕ್ಷಕರಾಗಿದ್ದಾರೆ. ನಂತರ 2026 ಏಪ್ರಿಲ್-13ರಿಂದ ಕಲಮಂಗಿ ಗ್ರಾಮದಿಂದ ವರ್ಗಾವಣೆ ಹೊಂದಿ ಸಧ್ಯಕ್ಕೆ ಸಿಂಧನೂರು ನಗರದಲ್ಲಿರುವ ಪಿಎಂಶ್ರೀ ಆದರ್ಶ ವಿದ್ಯಾಲಯ (ಸರ್ಕಾರಿ) ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಮ್ಮ ಅನುಪಮ ಸೇವೆಯನ್ನು ಮುಂದುವರೆಸಿದ್ದಾರೆ.

ಶೈಕ್ಷಣಿಕ ಅಭಿವೃದ್ಧಿಗಾಗಿ ಬ್ಲಾಗ್, ವೆಬ್‌ಸೈಟ್, ಚಾನಲ್: ಇಂದಿನ ಮಾಹಿತಿತಂತ್ರಜ್ಞಾನಮತ್ತು ಎಐ (ಕೃತಕ ಬುದ್ಧಿಮತ್ತೆ) ಇಂದಿನ ಯುಗದಲ್ಲೂ ತಮ್ಮ ದೇಛಾಪು ಮೂಡಿಸಿದ ಶ್ರೀಯುತರು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ತಮ್ಮ ದೇಯಾದ ವಿವಿಧ ಬ್ಲಾಗ್, ವೆಬ್‌ಸೈಟ್, ಚಾನಲ್‌ಗಳನ್ನು ಸೃಜಿಸಿದ್ದಾರೆ.ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದಅಡಿಯಲ್ಲಿಕಾರ್ಯನಿರ್ವಹಿಸುತ್ತಿರುವ ಮತ್ತು ಮಕ್ಕಳ ಶೈಕ್ಷಣಿಕಅಭಿವೃದ್ಧಿಗೆಂದು ದೀಕ್ಷಾ (Digital Infrastructure for Knowledge Sharing-DIKSHA) ಪೋರ್ಟಲ್‌ಗೆ (ಜಾಲತಾಣಕ್ಕೆ) ರಾಜ್ಯದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ನೆರವಾಗುವ ಪಾಠ - ಪ್ರವಚನಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಈ ಮೂಲಕ ರಾಜ್ಯದ ಕಲಿಕಾರ್ಥಿಗಳಿಗೆ ಬೆರಳ ತುದಿಯಲ್ಲಿಯೇ ಜ್ಞಾನವು ಸಿಗುವಂತಾಗಲು ನೆರವಾಗಿದ್ದಾರೆ. ಶಿಕ್ಷಣ ಇಲಾಖೆಯಿಂದ ನಡೆಸುವ ರಾಷ್ಟ್ರಮಟ್ಟದ ಸಿಸಿಆರ್‌ಟಿ (Cultural Resource and Training-CCRT, New Delhi)ಮತ್ತು ರಾಜ್ಯ ಮಟ್ಟದಲ್ಲಿ ಆರ್‌ಐಇಎಸ್ಐ (Regional Institue of Engilsh South India-RIESI, Bengaluru) ಸಂಸ್ಥೆಗಳು ನಡೆಸುವತರಬೇತಿಗಳನ್ನು ಪಡೆದುಕೊಂಡು ಮಕ್ಕಳಿಗೆ ತಲುಪಿಸುವಲ್ಲಿ ಯಶಸ್ಸುಕಂಡಿದ್ದಾರೆ.