ಸ್ವಂತ ಹಣದಿಂದ ಪ್ರಯೋಗಕ್ಕೆ ಸಲಕರಣೆ ನೀಡಿದ ಶಿಕ್ಷಕಿ

| Published : Sep 05 2025, 01:00 AM IST

ಸಾರಾಂಶ

ಮಕ್ಕಳಿಗೆ ವಿಜ್ಞಾನ ಕಲಿಯುವುದು ಎಂದರೆ ಕಷ್ಟ. ಅಂತಹ ಕಷ್ಟದ ವಿಷಯವನ್ನು ತಮ್ಮ ಪ್ರಯೋಗದ ಮೂಲಕ ಸರಳ ಹಾಗೂ ಸುಲಲಿತವಾಗಿ ಕಲಿಸುವ ಮಾಡುವ ಕೆಲಸವನ್ನು ಕೊಳ್ಳೇಗಾಲ ಶೈಕ್ಷಣಿಕ ವಲಯದ ಸತ್ತೇಗಾಲ ಅಗ್ರಹಾರದ ವಿಜ್ಞಾನ ಶಿಕ್ಷಕಿ ಸರೋಜಮ್ಮ ಅವರು ಕಳೆದ ಹಲವಾರು ವರ್ಷಗಳಿಂದಲೂ ಮಾಡುವ ಮೂಲಕ ವಿದ್ಯಾರ್ಥಿಗಳ ಮೆಚ್ಚಿನ ಶಿಕ್ಷಕರೆಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ

ಕನ್ನಡಪ್ರಭ ವಾರ್ತೆ ಹನೂರು

ಮಕ್ಕಳಿಗೆ ವಿಜ್ಞಾನ ಕಲಿಯುವುದು ಎಂದರೆ ಕಷ್ಟ. ಅಂತಹ ಕಷ್ಟದ ವಿಷಯವನ್ನು ತಮ್ಮ ಪ್ರಯೋಗದ ಮೂಲಕ ಸರಳ ಹಾಗೂ ಸುಲಲಿತವಾಗಿ ಕಲಿಸುವ ಮಾಡುವ ಕೆಲಸವನ್ನು ಕೊಳ್ಳೇಗಾಲ ಶೈಕ್ಷಣಿಕ ವಲಯದ ಸತ್ತೇಗಾಲ ಅಗ್ರಹಾರದ ವಿಜ್ಞಾನ ಶಿಕ್ಷಕಿ ಸರೋಜಮ್ಮ ಅವರು ಕಳೆದ ಹಲವಾರು ವರ್ಷಗಳಿಂದಲೂ ಮಾಡುವ ಮೂಲಕ ವಿದ್ಯಾರ್ಥಿಗಳ ಮೆಚ್ಚಿನ ಶಿಕ್ಷಕರೆಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ .

ಸರೋಜಮ್ಮ ವಿದ್ಯಾರ್ಥಿಗಳ ಮೆಚ್ಚಿನ ಶಿಕ್ಷಕರಾಗಿದ್ದಾರೆ. ನಗು, ನಗುತ್ತಲೆ ಕಠಿಣ ಪಾಠವನ್ನು ಪ್ರಯೋಗದ ಮೂಲಕ ಕಲಿಸುವ ಹಾಗೂ ಕಲಿತ ಪಾಠ, ಮಕ್ಕಳಿಂದ ಪ್ರಯೋಗದ ಮೂಲಕ ಮಕ್ಕಳನ್ನೆ ಪ್ರೋತ್ಸಾಹಿಸುವ ಕೆಲಸ ಮಾಡುತ್ತಲೆ ಬಂದಿದ್ದಾರೆ. ವಿಜ್ಞಾನವನ್ನು ವೈಜ್ಞಾನಿಕ ದೖಷ್ಟಿಕೋನಯಲ್ಲಿಟ್ಟುಕೊಂಡು ಬೋಧನೆ ಮಾಡುವುದು, ಮನೆಯಲ್ಲಿ ಸಿಗುವ ಅನುಪಯುಕ್ತ ವಸ್ತುಗಳಾದ ಐಸ್ ಕ್ರಿಂ ಡಬ್ಬ, ಲೋಟ, ಬಾಟಲ್, ಕಡ್ಡಿ, ಪ್ಲಾ,ಸ್ಟಿಕೆ ತಟ್ಟೆ ಹೀಗೆ ಅನೇಕ ವಸ್ತುಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳ ಕಲಿಕೆಗೆ ತೊಡಗಿಸಿಕೊಂಡು ಹಾಗೂ ಪ್ರಯೋಗಕ್ಕೆ ಬೇಕಾದ ಹಲವು ಉಪಯುಕ್ತ ವಸ್ತುಗಳನ್ನು ಸ್ವಂತ ಹಣದಿಂದ ತಂದು ಮಕ್ಕಳ ಮೆಚ್ಚಿನ ಶಿಕ್ಷಕರಾಗಿದ್ದಾರೆ .

ಇವರ ಮಾದರಿ ವಿಜ್ಞಾನ ಕಲಿಕೆಗಾಗಿ ಶಿಕ್ಷಣ ಇಲಾಖೆ ಕಳೆದ 2023- 24ನೇ ಸಾಲು ಹಾಗೂ 2024-25ನೇ ಸಾಲಿನಲ್ಲಿ ನೀಡುವ ಇನ್ಸ್ಪೈರ್ ಅವಾರ್ಡ್ ಈ ಶಾಲೆಗೆ ಸಂದಿದ್ದು ಮಕ್ಕಳ ಮೂಲಕವೇ ಶಿಕ್ಷಕಿ ಸರೋಜಮ್ಮ ಮಾಡಿಸಿದ ಪ್ರಯೋಗಕ್ಕೆ 2 ಪ್ರಸಕ್ತ ಸಾಲಿನಲ್ಲೂ ಅವಾರ್ಡ್‌ ಸಂದಿರುವುದು ಹೆಮ್ಮೆಯ ವಿಚಾರವಾಗಿದೆ. ಸರೋಜಮ್ಮ ಅವರ ಕಾರ್ಯವೈಖರಿಗೆ ತಾಲೂಕು ಮಟ್ಟದ ಅತ್ಯತ್ತಮ ವಿಜ್ಞಾನ ಶಿಕ್ಷಕಿ ಮತ್ತು ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಎಂಬ ಅನೇಕ ಪ್ರಶಸ್ತಿಗಳು ಸಂದಿವೆ.