ಆದರ್ಶ ಜೀವನ ರೂಪಿಸುವರು ಶಿಕ್ಷಕರು: ಶಾಸಕ ಬಸವರಾಜ ಮತ್ತಿಮಡು

| Published : Sep 26 2024, 10:22 AM IST

ಆದರ್ಶ ಜೀವನ ರೂಪಿಸುವರು ಶಿಕ್ಷಕರು: ಶಾಸಕ ಬಸವರಾಜ ಮತ್ತಿಮಡು
Share this Article
  • FB
  • TW
  • Linkdin
  • Email

ಸಾರಾಂಶ

ಕಮಲಾಪುರದ ರೇವಣಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕುಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ನಡೆದ ಸನ್ಮಾನ ಸಮಾರಂಭದಲ್ಲಿ ಶಾಸಕ ಬಸವರಾಜ ಮತ್ತಿಮಡು ಮಾತನಾಡಿದರು.

ಕನ್ನಡ ಪ್ರಭ ವಾರ್ತೆ ಕಮಲಾಪುರ

ಶಿಕ್ಷಕರಿಗೆ ಸಮಾಜದಲ್ಲಿ ಗೌರಯುತ ಸ್ಥಾನಮಾನವಿದೆ. ಪ್ರತಿಯೊಬ್ಬರೂ ಆದರ್ಶ ಜೀವನ ರೂಪಿಸಿಕೊಳ್ಳುವಲ್ಲಿ ಶಿಕ್ಷಕರ ತ್ಯಾಗ ಮತ್ತು ಪರಿಶ್ರಮ ಮುಖ್ಯವಾಗಿದೆ ಎಂದು ಶಾಸಕ ಬಸವರಾಜ ಮತ್ತಿಮಡು ಹೇಳಿದರು.

ಪಟ್ಟಣದ ರೇವಣಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ 2024-25ನೇ ಸಾಲಿನ ತಾಲೂಕುಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಮಾಡಿ ಮಾತನಾಡಿದ ಅವರು, ಪ್ರತಿಯೊಬ್ಬ ಮನುಷ್ಯನು ತನ್ನ ಪ್ರತಿಭೆ ಗುರುತಿಸಿಕೊಳ್ಳಲು ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಒಬ್ಬ ಗ್ರಾಮ ಪಂಚಾಯಿತಿ ಸದಸ್ಯರಿಂದಲು ಪ್ರಧಾನ ಮಂತ್ರಿಯಾಗಬೇಕಾದರೆ ಒಬ್ಬ ಗುರುವಿನ ಮಾರ್ಗದರ್ಶನ ಬೇಕಾಗುತ್ತದೆ. ಗುರು ಮತ್ತು ಗುರಿ ಇಲ್ಲದಿದ್ದರೆ ಮನುಷ್ಯನಿಗೆ ಏನನ್ನು ಸಾಧನೆ ಮಾಡಲು ಆಗುವುದಿಲ್ಲ ಎಂದು ತಿಳಿಸಿದರು.

ನಾನು ಒಬ್ಬ ಶಾಸಕನಾಗಿ ನಿಮ್ಮ ಮುಂದೆ ನಿಂತಿರುವೆ ಎಂದರೆ ನಿಮ್ಮಂತಹ ಎಲ್ಲಾ ಶಿಕ್ಷಕರು, ಗುರುಗಳು, ಮಾರ್ಗದರ್ಶನ ಹಾಗೂ ಶಿಕ್ಷಣ ನೀಡಿದಾಗ ನಾನು ಶಾಸಕನಾಗಲು ಸಾಧ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ನಾನು ಶಾಸಕರಾಗಿದ್ದಲು ನನ್ನ ಅವಧಿಯಲ್ಲಿ ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ ಅತಿ ಹೆಚ್ಚು ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡಿ ಅಭಿವೃದ್ಧಿಪಡಿಸಿದ್ದೇನೆ. ಇನ್ನು ಮುಂದೆ ಶಿಕ್ಷಕರ ಪರವಾಗಿ ಯಾವುದೆ ಬೇಡಿಕೆಗಳಿದ್ದರೆ ಪೂರೈಸಲು ಬದ್ಧನಾಗಿರುವೆ ಎಂದರು.

ಶಾಂತವೀರ ದೇವರು ಕಮಲಾಪುರ, ಪರಮೇಶ್ವರ ಓಕಳಿ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ, ಸೋಮಶೇಖರ ಹಂಚಿನಾಳ ಕ್ಷೇತ್ರ ಶಿಕ್ಷಣಾಧಿಕಾರಿ ಉತ್ತರ ವಲಯ ಕಲಬುರಗಿ, ಡಾ.ಶಾಂತಾಬಾಯಿ ಬಿರಾದಾರ ಕ್ಷೇತ್ರ ಸಮನ್ವಯಾಧಿಕಾರಿ, ಡಾ.ಕೆ.ಎಸ್.ಬಂದು, ಮಹಿಬೂಬ ಮಡಿಕೇರಿ, ಸವಿತಾ ಚವ್ಹಾಣ, ಉಪ ಖಜಾನಾಧಿಕಾರಿ, ಮಲ್ಲಿಕಾರ್ಜುನ ಸಿರಸಗಿ, ಮಹಾದೇವಿ ಕೆ. ಬಂದು, ಅಂಬರಾಯ ಮಡ್ಡೆ, ಹಾಗೂ ಶಿಕ್ಷಕ ಶಿಕ್ಷಕಿಯರು ಇದ್ದರು.