ಸಾರಾಂಶ
ಶಿಕ್ಷಕರು ಜೀವನದ ದೀಪಸ್ತಂಭವಿದ್ದಂತೆ ಭವಿಷ್ಯ ಕಟ್ಟುವ ಸಂಕಲ್ಪದಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ನಾಗರಿಕರನ್ನು ಕೊಡುವ ಶಿಲ್ಪಿಗಳು ಎಂದು ನಿವೃತ್ತ ಉಪನ್ಯಾಸಕ ಹಾಗೂ ಸಾಹಿತಿ ಮ.ಲ.ನ.ಮೂರ್ತಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಕೊರಟಗೆರೆ
ಶಿಕ್ಷಕರು ಜೀವನದ ದೀಪಸ್ತಂಭವಿದ್ದಂತೆ ಭವಿಷ್ಯ ಕಟ್ಟುವ ಸಂಕಲ್ಪದಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ನಾಗರಿಕರನ್ನು ಕೊಡುವ ಶಿಲ್ಪಿಗಳು ಎಂದು ನಿವೃತ್ತ ಉಪನ್ಯಾಸಕ ಹಾಗೂ ಸಾಹಿತಿ ಮ.ಲ.ನ.ಮೂರ್ತಿ ತಿಳಿಸಿದರು. ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಶಾಲಾ ಶಿಕ್ಷಣ ಇಲಾಖೆ, ಕೊರಟಗೆರೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ತಾಲೂಕು ಶಿಕ್ಷಕರ ದಿನಾಚರಣೆ ಸಮಿತಿ ವತಿಯಿಂದ ಏರ್ಪಡಿಸಿದ್ದ ಭಾರತರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ರವರ ೧೩೮ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.ಸಮಾಜಕ್ಕೆ ದೇವರು ಕೊಟ್ಟ ಅಮೂಲ್ಯವಾದ ಕೊಡುಗೆಯೇ ಶಿಕ್ಷಕ, ದೇವರು ಇಡಿ ಬ್ರಹ್ಮಾಂಡವನ್ನು ಸೃಷ್ಟಿಸಿದರೆ ಜಾತಿ ಭೇದವಿಲ್ಲದೆ ಉತ್ತಮ ನಾಗರಿಕ ಮತ್ತು ಶ್ರೇಷ್ಠ ವ್ಯಕ್ತಿತ್ವದ ಮನುಷ್ಯರನ್ನು ಸೃಷ್ಠಿಸುವುದು ಶಿಕ್ಷಕರು ಮಾತ್ರ, ವಿದ್ಯಾರ್ಥಿಗಳ ಸರ್ವಾಂಗೀಣ ಶೈಕ್ಷಣಿಕ ಅಭಿವೃದ್ಧಿ ಮತ್ತು ಭವಿಷ್ಯವನ್ನು ರೂಪಿಸಿ ಸಮಾಜಕ್ಕೆ ಉತ್ತಮ ನಾಗರಿಕರನ್ನು ನೀಡುವ ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ. ಪ್ರತಿಯೊಬ್ಬ ಶಿಕ್ಷಕರು ಕೂಡ ಕೇವಲ ತಮ್ಮ ಬದುಕನ್ನು ಪಾಠ ಬೋಧನೆಗಾಗಿ ಮೀಸಲಿರಿಸದೆ ನೈತಿಕಮೌಲ್ಯಗಳನ್ನು ಮಕ್ಕಳ ಮನಸ್ಸಿನಲ್ಲಿ ತುಂಬಿ ದೇಶ ನಿರ್ಮಾಣಕ್ಕೆ ದೊಡ್ಡ ಕೊಡುಗೆಯನ್ನು ನೀಡುತ್ತಿದ್ದಾರೆ ಎಂದು ತಿಳಿಸಿದರು. ತಾ.ಪಂ. ಇಒ ಅಪೂರ್ವ.ಸಿ.ಅನಂತರಾಮು ಮಾತನಾಡಿ, ಸಮಾಜದ ಪರಿವರ್ತನೆಯ ಶಕ್ತಿಯಾದ ಶಿಕ್ಷಣ ಗ್ರಾಮೀಣ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದು ಶಿಕ್ಷಕರು ಮಕ್ಕಳ ಹೃದಯದಲ್ಲಿ ಅಕ್ಷರ ತುಂಬಿ ಅಜ್ಞಾನವೆಂಬ ಅಂಧಕಾರವನ್ನು ತೊಲಗಿಸಿ ಜ್ಞಾನದ ದೀಪವನ್ನು ಹಚ್ಚಿ ಅವರ ಭವಿಷ್ಯವನ್ನು ಉಜ್ವಲ ಗೊಲಿಸುವಂತೆ ಮಾಡಬೇಕಾಗಿದ್ದು, ಗ್ರಾಮೀಣ ಭಾಗದ ಶಾಲೆಗಳ ಮೂಲಭೂತ ಸೌಲಭ್ಯಗಳನ್ನು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ರವರ ಅನುದಾನದಲ್ಲಿ ಅಭಿವೃದ್ದಿ ಪಡಿಸಲಾಗುತ್ತಿದೆ ಎಂದರು. ಗ್ರೇಡ್೨ ತಹಶಿಲ್ದಾರ್ ರಾಮಪ್ರಸಾದ್ ಮಾತನಾಡಿ, ಶಿಕ್ಷಕರು ಮಕ್ಕಳನ್ನು ಪ್ರೀತಿ-ಮಮತೆಯಿಂದ ಕಾಣುವ ಹೃದಯವಂತಿಕೆರಾಗಿದ್ದು ಕೇವಲ ಪಾಠ ಬೋಧನೆಗಷ್ಟೇ ಮೀಸಲಿಡದೆ ನಡವಳಿಕೆ, ಸಂಸ್ಕಾರಗಳನ್ನು ಕಲಿಸಿ, ತಪ್ಪಗಳನ್ನು ತಿದ್ದಿ ವಿದ್ಯಾರ್ಥಿಗಳನ್ನು ಶ್ರೇಷ್ಠ ವ್ಯಕ್ತಿಗಳನ್ನಾಗಿಸುವ ಶಕ್ತಿ ಶಿಕ್ಷಕರಲ್ಲಿದೆ ಎಂದು ತಿಳಿಸಿದರು. ವೇದಿಕೆಯಲ್ಲಿ ತಾಲೂಕಿನಲ್ಲಿ ೨೦೨೪-೨೫ನೇ ಸಾಲಿನಲ್ಲಿ ನಿವೃತ್ತರಾದ ಶಿಕ್ಷಕರನ್ನು ಮತ್ತು ಉತ್ತಮ ಶಿಕ್ಷಕರನ್ನು ಗೌರವಿಸಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹ ಸಹಾಯಕ ನಿದೇಶಕಿ ಮಹೇಶ್ವರಿ, ಬಿಇಓ ಪೈರೋಜ್‌ಬೇಗಮ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರುದ್ರೇಶ್, ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕೋಟೆಕಲ್ಲಯ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಜಿ.ಹನುಮಂತರಾಯಪ್ಪ, ಎಸ್ಸಿಎಸ್ಟಿ ನೌರರ ಸಂಘದ ಅಧ್ಯಕ್ಷ ಲಕ್ಷ್ಮಿಪುತ್ರ, ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷ ಟಿ.ಆರ್.ಸುಜಾತ, ಆರ್.ಶಿವಸ್ವಾಮಿ, ಪರಮೇಶ್, ಬಿ.ಆರ್.ಸಿ ಎಸ್.ಆರ್.ರುದ್ರೇಶ್, ಐ.ವಜೀರ್‌ಖಾನ್ ಸೇರಿದಂತೆ ಶಿಕ್ಷಕರ ಸಂಘದ ಪಧಾದಿಕರಿಗಳು ಹಾಜರಿದ್ದರು.