ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶ್ರೇಷ್ಠ ಶಿಲ್ಪಿಗಳು

| Published : Sep 07 2025, 01:00 AM IST

ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶ್ರೇಷ್ಠ ಶಿಲ್ಪಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಕರು ಕಲಿಕೆ ಮಾತ್ರವಲ್ಲದೆ, ಜೀವನಕ್ಕೆ ಬೇಕಾದ ಸತ್ಸಂಸ್ಕಾರ, ಶಿಸ್ತಿನ ಪಾಠ ಕಲಿಸಿ ವಿದ್ಯಾರ್ಥಿಗಳ ಬದುಕನ್ನು ರೂಪಿಸುತ್ತಾರೆ

ಬ್ಯಾಡಗಿ: ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶ್ರೇಷ್ಠ ಶಿಲ್ಪಿಗಳು, ಜ್ಞಾನ ಹಂಚುವ ದೈವಸ್ವರೂಪಿಗಳು. ಪಾಠದ ಜೀವಂತತೆ, ಜೀವನ ಮೌಲ್ಯಗಳ ಬೋಧನೆ, ಸತ್ಸಂಸ್ಕಾರದ ಬೀಜ ಬಿತ್ತನೆ, ಇವೆಲ್ಲ ಶಿಕ್ಷಕರಿಂದ ಮಾತ್ರ ಸಾಧ್ಯ ಎಂದು ಕಾಂಗ್ರೆಸ್ ತಾಲೂಕಾಧ್ಯಕ್ಷ ದಾನಪ್ಪ ಚೂರಿ ಅಭಿಪ್ರಾಯಪಟ್ಟರು.

ಪಟ್ಟಣದ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಡಾ.ಸರ್ವಪಲ್ಲಿ ರಾಧಾ ಕೃಷ್ಣನ್ ಅವರ 137ನೇ ಜನ್ಮದಿನಾಚರಣೆ ನಿಮಿತ್ತ ಜಿಪಂ ಹಾವೇರಿ, ತಾಪಂ ಬ್ಯಾಡಗಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾವೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಬ್ಯಾಡಗಿ. ಶಿಕ್ಷಕರ ದಿನಾಚರಣೆ ಸಮಿತಿ ಸಂಯುಕ್ರಾಶ್ರಯದಲ್ಲಿ ಆಯೋಜನೆ ಮಾಡಲಾದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕರು ಕಲಿಕೆ ಮಾತ್ರವಲ್ಲದೆ, ಜೀವನಕ್ಕೆ ಬೇಕಾದ ಸತ್ಸಂಸ್ಕಾರ, ಶಿಸ್ತಿನ ಪಾಠ ಕಲಿಸಿ ವಿದ್ಯಾರ್ಥಿಗಳ ಬದುಕನ್ನು ರೂಪಿಸುತ್ತಾರೆ ಎಂದರು.

ತಹಸೀಲ್ದಾರ ಚಂದ್ರಶೇಖರ್ ನಾಯ್ಕ ಮಾತನಾಡಿ, ಒಳ್ಳೆಯ ಗುರುವಿನ ಜತೆ ಕಳೆಯುವ ಒಂದು ದಿನ, ಸಾವಿರ ದಿನದ ಅಧ್ಯಯನಕ್ಕಿಂತ ಅಮೂಲ್ಯವಾಗಿದೆ. ಇದರೊಟ್ಟಿಗೆ ಶಿಕ್ಷಕರು ದೇಶಕ್ಕೆ ಅದಮ್ಯ ಕೊಡುಗೆ ನೀಡುವ ಬುದ್ಧಿವಂತರನ್ನು ಸೃಷ್ಠಿ ಮಾಡುವ ನಿರ್ಮಾತೃಗಳು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ, ತಾಲೂಕಿನಲ್ಲಿ ಶೈಕ್ಷಣಿಕ ಅಭ್ಯುದಯಕ್ಕೆ ಇಲ್ಲಿನ ಎಲ್ಲ ಶಿಕ್ಷಕರ ಕೊಡುಗೆ ಅಪಾರವಾಗಿದೆ. ನಿಮ್ಮೆಲ್ಲರ ಶ್ರಮದ ಫಲವಾಗಿ ಕಳೆದ ಹಲವು ವರ್ಷಗಳಿಂದ ಬ್ಯಾಡಗಿ ತಾಲೂಕು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಮೊದಲ ಸ್ಥಾನ ಪಡೆದು ಉತ್ತಮ ಫಲಿತಾಂಶ ನೀಡಲು ಸಾಧ್ಯವಾಗಿದೆ ಎಂದರು.

ಕೊಳ್ಳೆಗಾಲದ ನಿವೃತ್ತ ಶಿಕ್ಷಕ ಎಚ್. ಶಿವಣ್ಣ ಉಪನ್ಯಾಸ ನೀಡಿದರು. ಇದಕ್ಕೂ ಮುನ್ನ ಸರ್ವಪಲ್ಲಿ ರಾಧಾಕೃಷ್ಣನ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಮರ್ಪಣೆ ಮಾಡಲಾಯಿತು.

ವೇದಿಕೆಯಲ್ಲಿ ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಶಂಬನಗೌಡ ಪಾಟೀಲ, ಆಶ್ರಯ ಸಮಿತಿ ಅಧ್ಯಕ್ಷ ಅಬ್ದುಲ್ ಮುನಾಫ್ ಎರೇಶಿಮಿ, ಸದಸ್ಯ ಈರಣ್ಣ ಬಣಕಾರ್, ದುರ್ಗೇಶ್ ಗೊಣೆಮ್ಮನವರ್, ನೌಕರರ ಸಂಘದ ಅಧ್ಯಕ್ಷ ಎಂ.ಏನ್.ಕಂಬಳಿ, ಸಮನ್ವಯಾಧಿಕಾರಿ ಎಂ.ಎಫ್. ಹುಳ್ಯಾಳ್, ಕಸಾಪ ತಾಲೂಕಾಧ್ಯಕ್ಷ ಬಿ.ಎಂ. ಜಗಪುರ, ಜಿ.ಬಿ. ಬೂದಿಹಾಳ, ಎ.ಟಿ. ಪೀಠದ, ಪೊಮ್ಮಾರ, ಎಂ.ಎನ್. ಚಳಗೇರಿ, ಜೀವರಾಜ ಚಳಗೇರಿ ಸೇರಿದಂತೆ ತಾಲೂಕಿನ ಶಿಕ್ಷಕವೃಂದ ಹಾಗೂ ಹಲವರು ಉಪಸ್ಥಿತರಿದ್ದರು. ಎಂ.ಎಫ್. ಕರಿಯಣ್ಣನವರ ನಿರೂಪಿಸಿದರು.