ಶಾಲೆಗಳಲ್ಲಿ ವಿಶಿಷ್ಟವಾಗಿ ಸ್ವಾಗತ ಕೋರಿದ ಶಿಕ್ಷಕರು

| Published : Jun 02 2024, 01:46 AM IST

ಶಾಲೆಗಳಲ್ಲಿ ವಿಶಿಷ್ಟವಾಗಿ ಸ್ವಾಗತ ಕೋರಿದ ಶಿಕ್ಷಕರು
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರುಬೇಸಿಗೆ ರಜೆ ಕಳೆದ ಶಾಲಾ ಆಗಮನದ ಮೊದಲ ದಿನವಾದ ಶುಕ್ರವಾರ ಶಾಲೆಗಳಲ್ಲಿ ಅದ್ಧೂರಿಯ ಸ್ವಾಗತ ಕೋರುವ ಮೂಲಕ ಮಕ್ಕಳನ್ನು ಶಾಲಾ ಶಿಕ್ಷಕರು ಸಂಭ್ರಮದೊಂದಿಗೆ ಬರಮಾಡಿಕೊಂಡರು.

ಶಾಲೆ ಆವರಣದಲ್ಲಿ ವರ್ಣ ರಂಜಿತ ರಂಗೋಲಿ ಚಿತ್ತಾರ । ತಳಿರು ತೋರಣಗಳಿಂದ ಸಿಂಗಾರ

ಕನ್ನಡಪ್ರಭ ವಾರ್ತೆ, ಕಡೂರು

ಬೇಸಿಗೆ ರಜೆ ಕಳೆದ ಶಾಲಾ ಆಗಮನದ ಮೊದಲ ದಿನವಾದ ಶುಕ್ರವಾರ ಶಾಲೆಗಳಲ್ಲಿ ಅದ್ಧೂರಿಯ ಸ್ವಾಗತ ಕೋರುವ ಮೂಲಕ ಮಕ್ಕಳನ್ನು ಶಾಲಾ ಶಿಕ್ಷಕರು ಸಂಭ್ರಮದೊಂದಿಗೆ ಬರಮಾಡಿಕೊಂಡರು.

ಶೈಕ್ಷಣಿಕ ವರ್ಷದ ಮೊದಲ ದಿನದಂದು ಶಾಲೆ ಆವರಣವನ್ನು ವರ್ಣ ರಂಜಿತ ರಂಗೋಲಿಗಳ ಚಿತ್ತಾರದೊಂದಿಗೆ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಶಾಲೆ ಬಳಿ ಆಗಮಿಸಿದ ಮಕ್ಕಳಿಗೆ ಆವರಣದಲ್ಲಿ ಪುಷ್ಪವೃಷ್ಟಿ ಮಾಡಿ, ಸಿಹಿ ತಿನಿಸು ನೀಡುವ ಮೂಲಕ ಸ್ವಾಗತ ಕೋರಿದರೆ ಮಕ್ಕಳು ಸ್ನೇಹಿತರೊಂದಿಗೆ ಶಾಲೆಯ ಸಂಭ್ರಮದ ದಿನವನ್ನಾಗಿ ಕಾಲ ಕಳೆದರು.ಎಂದಿನಂತೆ ಶಾಲೆ ಶಿಕ್ಷಕರೊಡನೆ ಬೆರೆತ ಮಕ್ಕಳು ತಮ್ಮ ಬೇಸಿಗೆ ರಜಾ ದಿನಗಳನ್ನು ಸಹಪಾಠಿಗಳೊಂದಿಗೆ ಹಂಚಿ ಕೊಂಡರು. ಮೊದಲ ದಿನದಂದು ಕಡೂರು ಶೈಕ್ಷಣಿಕ ವಲಯದ ಶಾಲೆಯಲ್ಲಿ ಶೇ.75ರಷ್ಟು ಹಾಜರಾತಿಯೊಂದಿಗೆ ಸುಮಾರು 9500 ಮಕ್ಕಳು ಶಾಲೆಗೆ ಹಾಜರಾಗಿದ್ದರು. ಇಲಾಖೆ ನಿರ್ದೇಶನದಂತೆ ಮಧ್ಯಾಹ್ನದ ಬಿಸಿಯೂಟಕ್ಕೆ ಬಹುತೇಕ ಶಾಲೆಗಳಲ್ಲಿ ಪಾಯಸ, ಚಿತ್ರಾನ್ನ ಹಾಗೂ ಅನ್ನ, ಸಾಂಬಾರು ಮಾಡುವ ಮೂಲಕ ಹಬ್ಬದ ಊಟವನ್ನು ಮಕ್ಕಳಿಗೆ ಉಣಬಡಿಸಲಾಯಿತು. ಮಕ್ಕಳ ಜೊತೆಯಲ್ಲಿ ಶಿಕ್ಷಕರು ಊಟ ಸವಿದು ಮಕ್ಕಳೊಂದಿಗೆ ಸಂಭ್ರಮಿಸಿದರು.

ಅಲ್ಲದೆ ಮೊದಲ ದಿನ ಹಾಜರಾದ ಶಾಲಾ ಮಕ್ಕಳಿಗೆ ಪೂರೈಕೆಯಾಗಿದ್ದ ಪಠ್ಯ ಪುಸ್ತಕ ಮತ್ತು ಸಮವಸ್ತ್ರಗಳನ್ನು ವಿತರಣೆ ಮಾಡಲಾಯಿತು. ತಾಲೂಕಿನ ಕಲ್ಲೇನಿಂಗನಹಳ್ಳಿ ಶಾಲೆ ಮಕ್ಕಳನ್ನು ಟ್ರಾಕ್ಟರ್ ಮೂಲಕ ಮಕ್ಕಳ ಮೆರವಣಿಗೆ ನಡೆಸಿ ಹಬ್ಬ ಆಚರಣೆಯಂತೆ ಸಂಭ್ರಮಿಸುತ್ತಾ ಶಾಲಾ ಮಕ್ಕಳಿಗೆ ಸ್ವಾಗತ ಕೋರುವ ಮೂಲಕ ಶೈಕ್ಷಣಿಕ ವರ್ಷದ ಆರಂಭವಾಯಿತು. ಕಾಮನಕೆರೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳೊಂದಿಗೆ ದಾಖಲಾತಿ ಅಂದೋಲನ ಕಾರ್ಯಕ್ರಮ ನಡೆಯಿತು.

1ಕೆಕೆಡಿಯು1.

ಕಡೂರು ತಾಲೂಕಿನ ಎಮ್ಮೆದೊಡ್ಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಆಗಮಿಸಿದ ಮಕ್ಕಳಿಗೆ ಕೇಸರಿ ಬಾತ್ ಮತ್ತು ಉಪ್ಪಿಟ್ಟು ಬಡಿಸುವ ಮೂಲಕ ಶಾಲೆಯ ಶಿಕ್ಷಕರು ಮಕ್ಕಳದೊಂದಿಗೆ ಸಂಭ್ರಮ ಹಂಚಿಕೊಂಡರು. ಮುಖ್ಯ ಶಿಕ್ಷಕ ಸಿಂಗಟಗೆರೆ ಸಿದ್ದಪ್ಪ ಮತ್ತಿತರಿದ್ದರು.ಪೋಟೊ ಕ್ಯಾಪ್ಸನ್ 1ಕೆಕೆಡಿಯು1ಎ. ಕಡೂರು ತಾಲೂಕಿನ ಕಾಮನಕೆರೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳೊಂದಿಗೆ ದಾಖಲಾತಿ ಅಂದೋಲನ ಕಾರ್ಯಕ್ರಮ ನಡೆಯಿತು.