ಸಾರಾಂಶ
ರಕ್ತದಾನ ಮಾಡುವ ಮೂಲಕ ನೀವು ಬದುಕಲು ರಕ್ತದ ಅಗತ್ಯವಿರುವ ಜೀವವನ್ನಷ್ಟೇ ಉಳಿಸುತ್ತಿಲ್ಲ, ನೀವು ಇಡೀ ಕುಟುಂಬವನ್ನು ಉಳಿಸುತ್ತಿದ್ದೀರಿ
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಎಕ್ಸೆಲ್ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕರು ರಕ್ತದಾನ ಮಾಡುವ ಮೂಲಕ ಶಿಕ್ಷಕರ ದಿನವನ್ನು ಆಚರಿಸಿದರು.ಭಾರತ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಜೀವಧಾರ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಭಾರತ್ ಕ್ಯಾನ್ಸರ್ ಆಸ್ಪತ್ರೆಯ ಸಿಇಒ ಗೌತಮ್ ಧಮೇರ್ಲಾ ಮಾತನಾಡಿ, ರಕ್ತದಾನ ಮಾಡುವ ಮೂಲಕ ನೀವು ಬದುಕಲು ರಕ್ತದ ಅಗತ್ಯವಿರುವ ಜೀವವನ್ನಷ್ಟೇ ಉಳಿಸುತ್ತಿಲ್ಲ, ನೀವು ಇಡೀ ಕುಟುಂಬವನ್ನು ಉಳಿಸುತ್ತಿದ್ದೀರಿ. ಅವರು ಯಾವಾಗಲೂ ನಿಮಗೆ ಕೃತಜ್ಞರಾಗಿರುತ್ತಾರೆ ಎಂದರು.
ಎಕ್ಸೆಲ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಕೆ.ಜಿ. ಮ್ಯಾಥ್ಯೂ ಮಾತನಾಡಿ, ಶಿಕ್ಷಕರ ದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದೇವೆ. ಇದು ಜವಾಬ್ದಾರಿಯುತ ಮತ್ತು ಸಹಾನುಭೂತಿಯ ವ್ಯಕ್ತಿಗಳನ್ನು ಪೋಷಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ ಸಮಾಜಕ್ಕೆ ಏನನ್ನಾದರೂ ಹಿಂತಿರುಗಿಸಬೇಕೆಂಬ ಬದ್ಧತೆಯನ್ನು ಬಳಪಡಿಸುತ್ತದೆ ಎಂದು ಹೇಳಿದರು.ಈ ರಕ್ತದಾನ ಶಿಬಿರದಲ್ಲಿ 71 ಹೆಚ್ಚು ಶಿಕ್ಷಕರು, ಕೆಲವು ಕುಟುಂಬ ಸದಸ್ಯರೊಂದಿಗೆ ರಕ್ತದಾನ ಮಾಡಿದರು. ಶಾಲೆಯ ಆಡಳಿತಾಧಿಕಾರಿ ಚೇತನ್, ಜೀವಧಾರ ಬ್ಲಡ್ ಬ್ಯಾಂಕ್ ವ್ಯವಸ್ಥಾಪಕಿ ರಶ್ಮಿ ಮೊದಲಾದವರು ಇದ್ದರು.