ಸಾರಾಂಶ
ಪರೀಕ್ಷೆಗಳ ಬಗ್ಗೆ ಮಕ್ಕಳಲ್ಲಿ ಸಹಜವಾಗಿಯೇ ಭಯವಿರುತ್ತದೆ ಶಿಕ್ಷಕರ ಕಾಳಜಿಯೇ ಮಕ್ಕಳಿಗೆ ಉತ್ತಮ ಪರೀಕ್ಷೆ ಬರೆಯಲು ಪೇರಣೆಯಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಹೇಳಿದರು.
ಗದಗ: ಪರೀಕ್ಷೆಗಳ ಬಗ್ಗೆ ಮಕ್ಕಳಲ್ಲಿ ಸಹಜವಾಗಿಯೇ ಭಯವಿರುತ್ತದೆ ಶಿಕ್ಷಕರ ಕಾಳಜಿಯೇ ಮಕ್ಕಳಿಗೆ ಉತ್ತಮ ಪರೀಕ್ಷೆ ಬರೆಯಲು ಪೇರಣೆಯಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಹೇಳಿದರು. ಅವರು ಗದಗ ಶಹರ ವಲಯದ ವತಿಯಿಂದ ವಿದ್ಯಾರ್ಥಿಗಳಿಗಾಗಿ ಪ್ರಾರಂಭಿಸಲಾಗಿರುವ ಪೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಕರ ದೂರವಾಣಿ ಸಂಖ್ಯೆಗಳನ್ನು ಬರೆದುಕೊಳ್ಳುವಂತೆ ಅಗತ್ಯಾನುಸಾರ ನಿರಂತರ ಶಿಕ್ಷಕರು ಈ ಕುರಿತು ಪರಿಹಾರ ನೀಡಬೇಕು. ಕೇವಲ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾತ್ರವಲ್ಲ ಪರೀಕ್ಷೆ ಪ್ರಾರಂಭವಾಗುವ ಹಿಂದಿನ ದಿನದವರೆಗೂ ಮಕ್ಕಳು ತಾವು ಓದುವಾಗ ಬರೆಯುವಾಗ ಏನಾದರೂ ಗೊಂದಲಗಳು ಅಥವಾ ಸಂದೇಹಗಳು ಕಂಡು ಬಂದಲ್ಲಿ ಪ್ರತಿದಿನ ಸಂಜೆ 5.30 ರಿಂದ 6.30 ಒಳಗೆ ಈಗಾಗಲೇ ನೀಡಿದಂತಹ ಸಂಪನ್ಮೂಲ ಶಿಕ್ಷಕರಿಗೆ ದೂರವಾಣಿ ಮೂಲಕ ಫೋನ್ ಮಾಡಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಕ್ಕಳು, ಉತ್ಸಾಹದಿಂದ ಪರೀಕ್ಷೆಯನ್ನು ಎದುರಿಸುವುದು ಹೇಗೆ? ಕನ್ನಡದಲ್ಲಿ ನೂರಕ್ಕೆ ನೂರು ಪ್ರತಿಶತ ಅಂಕ ತೆಗೆಯುವುದು ಹೇಗೆ ? ಅಲಂಕಾರ ಛಂದಸ್ಸು ಹಾಗೂ ಯಾವ ಪ್ರಶ್ನೆಗಳನ್ನು ಹೇಗೆ ಬರೆಯಬೇಕು ? ಎಂಬ ತಮ್ಮ ಗೊಂದಲಗಳಿಗೆ ಶಿಕ್ಷಕರಿಂದ ಪರಿಹಾರ ಕಂಡುಕೊಂಡರು. ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಪಿ.ಹೆಚ್. ಕಡಿವಾಲ, ಗದಗ ಶಹರ ವಲಯದ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಸಿ.ನಾಗರಳ್ಳಿ, ಎಮ್.ಐ. ಶಿವನಗೌಡರ, ಮಾಲಾ ರಾಮಣ್ಣವರ, ಚಂದ್ರಪ್ಪ ಕುರಿ, ಎಂ.ಎಂ. ಫೀರಜಾದೆ, ಎಂ.ಎಚ್. ಜಮಾಲಸಾಬನವರ, ಎಚ್.ಎ. ಫಾರೂಕಿ, ಶ್ಯಾಮ್ ಲಾಂಡೆ, ಐ.ಬಿ. ಮಡಿವಾಳರ, ತನು ಹೂಗಾರ, ರವಿ ಹೆಬ್ಬಳ್ಳಿ, ವಿನೋದಕುಮಾರ ದಾಸರಿ ಹಾಜರಿದ್ದರು.