ಸಾರಾಂಶ
ಮಕ್ಕಳು ಆಟವಾಡುತ್ತಾ, ನೋಡುತ್ತಾ, ಕೇಳುತ್ತಾ, ಮಾತನಾಡುತ್ತಾ ನಲಿಯುತ್ತಾ ಕಲಿಯಬೇಕು ಎಂದು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಲಿ-ಕಲಿ ಕಲಿಕಾ ವಿಧಾನ ಜಾರಿಯಲ್ಲಿದೆ. ಇಲ್ಲೊಬ್ಬ ಶಿಕ್ಷಕ ಮಕ್ಕಳ ಕಲಿಕೆಗೆ ಸ್ವಂತ ಹಣ ವಿನಿಯೋಗಿಸಿ ಸಾಥ್ ನೀಡಿದ್ದಾರೆ.
ಹತ್ತು ಸರ್ಕಾರಿ ಶಾಲೆಗೆ ಸ್ವಂತ ಖರ್ಚಿನಲ್ಲಿ ಫ್ಲೆಕ್ಸ್ ಅಳವಡಿಸಿದ ಹನುಮಂತರಡ್ಡಿ ಭೀಮರಡ್ಡಿ
ಅಮರೇಶ್ವರಸ್ವಾಮಿ ಕಂದಗಲ್ಲಮಠಕನ್ನಡಪ್ರಭ ವಾರ್ತೆ ಕುಕನೂರು
ಮಕ್ಕಳು ಆಟವಾಡುತ್ತಾ, ನೋಡುತ್ತಾ, ಕೇಳುತ್ತಾ, ಮಾತನಾಡುತ್ತಾ ನಲಿಯುತ್ತಾ ಕಲಿಯಬೇಕು ಎಂದು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಲಿ-ಕಲಿ ಕಲಿಕಾ ವಿಧಾನ ಜಾರಿಯಲ್ಲಿದೆ. ಇಲ್ಲೊಬ್ಬ ಶಿಕ್ಷಕ ಮಕ್ಕಳ ಕಲಿಕೆಗೆ ಸ್ವಂತ ಹಣ ವಿನಿಯೋಗಿಸಿ ಸಾಥ್ ನೀಡಿದ್ದಾರೆ.ತಾಲೂಕಿನ ವೀರಾಪೂರು ಗ್ರಾಮದ ಸರ್ಕಾರಿ ಹಿರಿಯ ಪಾಥಮಿಕ ಶಾಲೆಯ ಶಿಕ್ಷಕ ಹನುಮರಡ್ಡಿ ಭೀಮರಡ್ಡಿ ತಮ್ಮ ಶಾಲೆ ಮಾತ್ರವಲ್ಲದೆ ತಾಲೂಕಿನ ಹತ್ತು ಶಾಲೆಗಳಿಗೆ ತಮ್ಮ ಸ್ವಂತ ಹಣದಲ್ಲಿ ನಲಿ-ಕಲಿ ತರಗತಿಗೆ ಫ್ಲೆಕ್ಸ್ ಅಳವಡಿಸಿದ್ದಾರೆ. ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಈ ದಿನಗಳಲ್ಲಿ ಖಾಸಗಿ ಶಾಲೆಗಳಿಗಿಂತ ನಾವೇನೂ ಕಮ್ಮಿ ಇಲ್ಲ ಎಂಬುದನ್ನು ಸಾರುವ ಸರ್ಕಾರಿ ಶಾಲೆಗಳ ಮಕ್ಕಳ ಕಲಿಕೆಗೆ ತಾಲೂಕಿನ ತಳಕಲ್ಲ ಗ್ರಾಮದವರಾದ ಶಿಕ್ಷಕ ಹನುಮರಡ್ಡಿ ಸಹ ಕೈ ಜೋಡಿಸಿದ್ದಾರೆ.
ನಲಿ-ಕಲಿ ಫ್ಲೆಕ್ಸ್‌ನಲ್ಲಿ ಕನ್ನಡ, ಇಂಗ್ಲಿಷ್ ಮೂಲಾಕ್ಷರಗಳು, ಮಗ್ಗಿಗಳು, ಗಣ್ಯರು, ಪ್ರಾಣಿ, ಪಕ್ಷಿ, ದೇಶ, ರಾಜ್ಯ, ಐತಿಹಾಸಿಕ ಸ್ಥಳಗಳ ಚಿತ್ರಪಟಗಳು, ನಕ್ಷೆಗಳು, ಗಣಿತದ ಮೂಲಕ ಚಿಹ್ನೆಗಳು ಹೀಗೆ ನಾನಾ ಕಲಿಕಾ ಸಹಾಯಕ ಫ್ಲೆಕ್ಸ್‌ಗಳನ್ನು ಅಳವಡಿಸಿದ್ದಾರೆ.ಮಾದರಿ ಕಾರ್ಯ:ಶಾಲೆಯ ಎರಡೂ ಕೊಠಡಿ ಸಂಪೂರ್ಣವಾಗಿ ವರ್ಣರಂಜಿತವಾಗಿ ಅಕ್ಷರಗಳ ಫ್ಲೆಕ್ಸ್‌ಗಳಿಂದ ಶೃಂಗಾರಗೊಳ್ಳುತ್ತವೆ. ಮಕ್ಕಳು ಅಲ್ಲಿಗೆ ತೆರಳಿ ಫ್ಲೆಕ್ಸ್ ನೋಡಿ ಓದಲು, ಗ್ರಹಿಸಲು ಅನುಕೂಲ ಆಗುತ್ತದೆ.
ಕಿರಿಯ ಪ್ರಾಥಮಿಕ ಶಾಲೆ ಅಡವಿಹಳ್ಳಿ, ಭಾನಾಪುರ, ಚಿತ್ತಾಪುರ, ಕೋಮಲಾಪುರ, ಅಂಬೇಡ್ಕರ್ ನಗರ ತಳಕಲ್, ಲಕಮಾಪೂರ, ತಳಬಾಳ, ಉರ್ದು ಶಾಲೆ ತಳಕಲ್, ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆ ತಳಕಲ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಾಪುರ ಶಾಲೆಗಳಿಗೆ ಫ್ಲೆಕ್ಸ್ ಅಳವಡಿಸಿದ್ದಾರೆ.